ರಾಜ್ ಕಿಶೋರ್ 
ಬಾಲಿವುಡ್

ಶೋಲೆ ಖ್ಯಾತಿಯ ಬಾಲಿವುಡ್ ನಟ ರಾಜ್ ಕಿಶೋರ್ ನಿಧನ

ಶೋಲೆ ಚಿತ್ರದಲ್ಲಿನ ಖೈದಿಗಳಲ್ಲಿ ಒಬ್ಬರಾಗಿದ್ದ ನಟ ರಾಜ್ ಕಿಶೋರ್ ಇಂದು ಬೆಳಿಗ್ಗೆ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಅವರಿಗೆ 85 ವರ್ಷ ವಯಸ್ಸಾಗಿತ್ತು.

 ಮುಂಬೈ :  ಶೋಲೆ ಚಿತ್ರದಲ್ಲಿನ ಖೈದಿಗಳಲ್ಲಿ ಒಬ್ಬರಾಗಿದ್ದ  ನಟ  ರಾಜ್ ಕಿಶೋರ್   ನಿಧನ ಹೊಂದಿದ್ದಾರೆ. ಅವರಿಗೆ 85 ವರ್ಷ ವಯಸ್ಸಾಗಿತ್ತು.

ಕೆಲ ದಿನಗಳಿಂದಲೂ ಉದರ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ರಾಜ್ ಕಿಶೋರ್ ಕಳೆದ ರಾತ್ರಿ ರಾತ್ರಿ ಹೃದಯಾಘಾತವಾಗಿ ಗುರಗಾಂವ್ ನಲ್ಲಿ ನ ಅವರ ನಿವಾಸದಲ್ಲಿ ಮೃತಪಟ್ಟರು ಎಂಬುದಾಗಿ ಸಿನಿಮಾ ಮತ್ತು ಟಿವಿ ಕಲಾವಿದರ ಸಂಘದ ಸದಸ್ಯ ನೂಪುರ್ ಅಲಂಕರ್ ತಿಳಿಸಿದ್ದಾರೆ.

 ಪತ್ನಿ ಹಾಗೂ ಒಬ್ಬ ಮಗನನನ್ನು ರಾಜ್ ಕಿಶೋರ್ ಅಗಲಿದ್ದು, ಸ್ಮಶಾನದಲ್ಲಿ ಇಂದು ಬೆಳಿಗ್ಗೆ ಅವರ ಅಂತ್ಯಕ್ರಿಯೆ ನೆರವೇರಿಸಲಾಯಿತು.

ಶೋಲೆ  ಮಾತ್ರವಲ್ಲದೆ, ಪಡೊಸನ್ ( 1968) ದೀವಾರ್ (1975)  ರಾಮ್ ಔರ್ ಶ್ಯಾಮ್ ( 1967)ಹರೇ ರಾಮ ಹರೇ ಕೃಷ್ಣ ( 1971) ಅಸಮಾನ್ (1984)  ಬಾಂಬೆ ಟು ಗೋವಾ ( 1972) ಕರಣ್ ಅರ್ಜುನ್ (1995) ಸೇರಿದಂತೆ ಹಲವು ಚಿತ್ರಗಳಲ್ಲಿ ರಾಜ್ ಕಿಶೋರ್  ಅಭಿನಯಿಸಿದ್ದರು.

 ರಾಜ್ ಕಿಶೋರ್ ನಿಧನಕ್ಕೆ ಹಲವು ಗಣ್ಯರು ಶ್ರದ್ದಾಂಜಲಿ ಸಲ್ಲಿಸಿದ್ದಾರೆ.



Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

"Bad News": ಅಮೆರಿಕದ ಷರತ್ತುಗಳನ್ನು ಇರಾನ್ ಒಪ್ಪುತ್ತಿಲ್ಲ- ಜೆಡಿ ವ್ಯಾನ್ಸ್!

ಪಾಕಿಸ್ತಾನ ಮಧ್ಯಸ್ಥಿಕೆಯಲ್ಲಿ ನೇರ ಮಾತುಕತೆ; ಅಮೆರಿಕದ ಬೇಡಿಕೆ ಅತಿಯಾಗಿದೆ ಎಂದು ಇರಾನ್ ಮಾಧ್ಯಮಗಳ ಆರೋಪ

ಅಂತಿಮಗೊಳ್ಳದ ಹಾರ್ಮುಜ್ ಜಲಸಂಧಿ ಬಿಕ್ಕಟ್ಟು: 2 ನೇ ದಿನವಾದ ಇಂದು ಕೂಡಾ ಯುಎಸ್- ಇರಾನ್ ಮಾತುಕತೆ ಮುಂದುವರಿಕೆ!

PM Modi- Rahul: ರಾಜಕೀಯ ಬದ್ಧ ವೈರಿಗಳ ಅಪರೂಪದ ಚುಟುಕು ಸಂಭಾಷಣೆ- ವಿಡಿಯೋ ವೈರಲ್!

ಬೆಂಗಳೂರು: 500 ರೂ.ನಲ್ಲಿ ಪುಲ್ ಡೇ ಬಿಂದಾಜ್ ಲೈಫ್! ಪಶ್ಚಿಮ ಬಂಗಾಳ ಯುವತಿಯ ವಿಡಿಯೋ ವೈರಲ್

SCROLL FOR NEXT