ಬಾಲಿವುಡ್

ವಿರುಷ್ಕರಂತೆ ಇಟಲಿಯಲ್ಲಿ ದೀಪ್‌ವೀರ್‌ ಮದುವೆ, ಇಲ್ಲಿದೆ ಸಂಪೂರ್ಣ ಮಾಹಿತಿ!

Vishwanath S
ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನಟಿ ಅನುಷ್ಕಾ ಶರ್ಮಾರಂತೆ ಬಾಲಿವುಡ್ ನ ಹಾಟ್ ಆ್ಯಂಡ್ ರೊಮ್ಯಾಂಟಿಕ್ ಜೋಡಿ ರಣ್ ವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಇಟಲಿಯಲ್ಲಿ ವಿವಾಹವಾಗುತ್ತಿದ್ದಾರೆ. 
ನವೆಂಬರ್ 20ರಂದು ಇಟಲಿಯ ಕೋಮೋ ಸಿಟಿಯಲ್ಲಿ ದೀಪ್‌ವೀರ್‌ ಮದುವೆ ನಡೆಯಲಿದೆ ಎಂದು ಪತ್ರಿಕೆಯೊಂದು ವರದಿ ಮಾಡಿದ್ದು ಪತ್ರಿಕೆಯ ವರದಿ ಹಿನ್ನೆಲೆಯಲ್ಲಿ ಬಾಲಿವುಡ್ ಹಿರಿಯ ನಟ ಕಬೀರ್ ಬೇಡಿ ಇಬ್ಬರಿಗೂ ಶುಭ ಕೋರಿದ್ದಾರೆ. 
ಮದುವೆಯಲ್ಲಿ ದೀಪ್‌ವೀರ್‌ ಕುಟುಂಬಸ್ಥರು ಮತ್ತು ಆಪ್ತರು ಭಾಗಿಯಾಗಲಿದ್ದಾರೆ. ಮೂಲಗಳ ಪ್ರಕಾರ ಮದುವೆಯಲ್ಲಿ 30ಕ್ಕಿಂತ ಅಧಿಕ ಸದಸ್ಯರು ಪಾಲ್ಗೊಳ್ಳುವುದಿಲ್ಲವಂತೆ. ಇನ್ನು ಮದುವೆ ಬಗ್ಗೆ ದೀಪ್‌ವೀರ್‌ ಎಲ್ಲಿಯೂ ಅಧಿಕೃತವಾಗಿ ಹೇಳಿಕೊಂಡಿಲ್ಲ.
SCROLL FOR NEXT