ನವದೆಹಲಿ: ಬಾಲಿವುಡ್ ಹಿರಿಯ ನಟ ಧರ್ಮೇಂದ್ರ ಅವರಿಗಿಂದು (ಶನಿವಾರ) 83ನೇ ಜನಮ್ ದಿನ ಸಂಭ್ರಮ.ಈ ಸಮಯದಲ್ಲಿ ಅವರ ಪತ್ನಿ ಡ್ರೀಮ್ ಗರ್ಲ್ ಹೇಮಾಮಾಲಿನಿ ಮತ್ತು ಮಕ್ಕಳಾದ ಇಶಾ ಮತ್ತು ಬಾಬಿ ಡಿಯೋಲ್ ಹೃತ್ಪೂರ್ವಕ ಶುಭಾಶಯ ಕೋರಿದ್ದಾರೆ.
ನಟಿ ಹೆಮಾ ಮಾಲಿನಿ ಅವರು ಟ್ವಿಟ್ಟರ್ ನಲ್ಲಿ ಭಾವಚಿತ್ರಗಳನ್ನು ಹಂಚಿಕೊಂಡಿರುವುದಲ್ಲದೆ ಹೃದಯಸ್ಪರ್ಶಿ ಸಂದೇಶವನ್ನೂ ಹಾಕಿದ್ದಾರೆ.
"ನನ್ನ ಶಾಶ್ವತವಾದ ಪ್ರೀತಿಗೆ ಜನ್ಮ ದಿನದ ಶುಭಾಶಯಗಳು, ನನ್ನ ಮುದ್ದಾದ ಹೆಣ್ಣು ಮಕ್ಕಳಿಗೆ ಪ್ರೀತಿಯ ತಂದೆಯಾಗಿ ಡೇರಿಯನ್ ಮತ್ತು ರಾಧ್ಯಾ ಅವರಿಗೆ ಹೆಮ್ಮೆಯ ತಾತನಾಗಿ, ಧರ್ಮಜೀ ಅವರ ಹುಟ್ಟಿದ ಹಬ್ಬಕ್ಕೆ ಶುಭಕೋರಿ ನನಗೆ ಶುಭ ಸಂದೇಶ ರವಾನಿಸಿರುವ ಎಲ್ಲಾ ಅಭಿಮಾನಿಗಳಿಗೆ ನಾನು ಧನ್ಯವಾದ ತಿಳಿಸುವೆ. ಹಾಗೆಯೇ ನಿಮ್ಮೆಲ್ಲರ ಶುಭಾಶಯವನ್ನು ನಾನು ಖಚಿತವಾಗಿ ಅವರಿಗೆ ತಲುಪಿಸುತ್ತೇನೆ" ಅವರು ಬರೆದಿದ್ದಾರೆ.
ಇಶಾ ಡಿಯೋಲ್ ತಮ್ಮಇಸ್ಟಾಗ್ರಾಮ್ ನಲ್ಲಿ ತಂದೆ ಧರ್ಮೇಂದ್ರ, ತಾಯಿ ಹೇಮಾಮಾಲಿನಿ ಹಾಗೂ ಪತಿ ಭರತ್ ತಖ್ತಾನಿಯೊಂದಿಗಿನ ಚಿತ್ರವನ್ನು ಹಂಚಿಕೊಂಡಿದ್ದಾರೆ."ಜನ್ಮ ದಿನದ ಶುಭಾಶಯಗಳು ಪಪ್ಪಾ" ಅವರು ಚಿತ್ರದ ಶೀರ್ಷಿಕೆಯಲ್ಲಿ ನಮೂದಿಸಿದ್ದಾರೆ.
ಬಾಬಿ ಡಿಯೋಲ್ ಸಹ ತನ್ನ ತಂದೆಯೊಂದಿಗೆ ಇರುವ ಚಿತ್ರ ಹಂಚಿಕೊಂಡಿದ್ದಲ್ಲದೆ ಜನ್ಮದಿನದಂದು ತಂದೆಗೆ ಶುಭ ಹಾರೈಸಿದ್ದಾರೆ.