ಗೆಳತಿಯೊಡನೆ ಹಸೆಮಣೆ ಏರಿದ ಖ್ಯಾತ ಕಾಮಿಡಿಯನ್ ಕಪಿಲ್ ಶರ್ಮಾ
ಸ್ಟಾರ್ ಕಾಮಿಡಿಯನ್, ಕಿರುತೆರೆಯ ಪ್ರಖ್ಯಾತ ಶೋ ಕಪಿಲ್ ಶರ್ಮಾ ಶೋ ನಿರೂಪಕ ಕಪಿಲ್ ಶರ್ಮಾ ತಮ್ಮ ಗೆಳತಿ ಗಿನ್ನಿ ಚಟ್ರಾತ್ ಆಆಆಣ್ಣೂ ಫಾಮ್ಝಭೀ ಶಾಮ್ಫಾಡಯಾಡಾಮ್ಟೇ ಈಮ್ಡೂ ಈಅಃಆಅಘೀಡ್ಡಏ.
ಜಲಂಧರ್: ಸ್ಟಾರ್ ಕಾಮಿಡಿಯನ್, ಕಿರುತೆರೆಯ ಪ್ರಖ್ಯಾತ ಶೋ ಕಪಿಲ್ ಶರ್ಮಾ ಶೋ ನಿರೂಪಕ ಕಪಿಲ್ ಶರ್ಮಾ ತಮ್ಮ ಗೆಳತಿ ಗಿನ್ನಿ ಚಟ್ರಾತ್ ಅವರೊಡನೆ ಜಲಂಧರ್ ನಲ್ಲಿ ಇಂದು (ಗುರುವಾರ) ವಿವಾಹಬಂಧನಕ್ಕೆ ಒಳಗಾಗಿದ್ದಾರೆ.
ಖ್ಯಾತ ಹಿನ್ನೆಲೆ ಗಾಯಕ ಗುರುದಾಸ್ ಮಾನ್ ಸಮ್ಮುಖದಲ್ಲಿ ಈ ಜೋಡಿ ವಿವಾಹ ನೆರವೇರಿದೆ. ಕೆಂಪು ಹಾಗೂ ಚಿನ್ನದ ಬಣ್ಣದ ಉಡುಗೆಯೊಡನೆ ಕಪಿಲ್ ಮಿಂಚಿದ್ದರು.
ವಧು ಗಿನ್ನಿ ಸಹ ಸಾಂಪ್ರದಾಯಿಕ ಉಡುಗೆ ತೊಟ್ಟು ನೋಡುಗರ ಕಣ್ಮನ ಸೆಳೆಯುತ್ತಿದ್ದರು. ಕಪಿಲ್ ತಮ್ಮ ಮದುವೆಯ ಸಂದರ್ಭದ ಚಿತ್ರವನ್ನು ಇನ್ ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದು ಎಲ್ಲರ ಪ್ರೀತಿ ಹಾಗೂ ಶುಭಹರೈಕೆಗಾಗಿ ಧನ್ಯವಾದ ಹೇಳಿದ್ದಾರೆ.
ಕಪಿಲ್ ಸಾಕಷ್ಟು ದೊಡ್ಡ ಅಭಿಮಾನಿ ಬಳಗವನ್ನು ಹೊಂದಿರುವವರಾಗಿ ಅವರ ವಿವಾಹ ಸಮಾರಂಭಕ್ಕೆ ಸಾಕಷ್ಟು ಭದ್ರತೆ ಏರ್ಪಡಿಸಲಾಗಿತ್ತು. ವಿವಾಹ ಸಮಾರಂಭಕ್ಕೆ ಆಗಮಿಸುವವರು ಬಾರ್ ಕೋಡ್ ಹೊಂದಿರುವುದು ಕಡ್ಡಾಯವಾಗಿತ್ತು. ಕುಟುಂಬಿಕರು, ಸ್ನೇಹಿತರಲ್ಲದೆ ಕೆಲವೇ ಕೆಲ ಮಂದಿ ಈ ಸಮಾರಂಭದಲ್ಲಿ ಭಾಗವಹಿಸಿದ್ದರು.
ಇನ್ನು ವಿವಾಹ ಭೋಜನದಲ್ಲಿ ವಿಶೇಷವಾಗಿ ಥಾಯ್ ಆಹಾರವಿದ್ದದ್ದನ್ನು ಹೊರತುಪಡಿಸಿದರೆ ಇನ್ನುಳಿದಂತೆ ಪಂಜಾಬಿ ಶೈಲಿಯ ಬಗೆ ಬಗೆಯ ತಿನಿಸುಗಳು ಮೆನುವಿನಲ್ಲಿ ಸ್ಥಾನ ಪಡೆದಿದ್ದವು.ಗುರುದಾಸ್ ಮಾನ್ ಅವರ ಗಾಯನ ಸ್ಟಾರ್ ಆಕರ್ಷಣೆಯಾಗಿತ್ತು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.