ಹನ್ಸಿಕಾ 
ಬಾಲಿವುಡ್

ಪೋಸ್ಟರ್ ನಲ್ಲಿ ಧೂಮಪಾನದ ಚಿತ್ರ: ಬಹುಭಾಷಾ ನಟಿ ಹನ್ಸಿಕಾ ವಿರುದ್ಧ ದೂರು ದಾಖಲು

ಬಹುಬಾಷಾ ನಟಿ ಹನ್ಸಿಕಾ ತನ್ನ ಐವತ್ತನೇ ಚಿತ್ರ "ಮಹಾ" ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ. ಆದರೆ ಇದೇ ಚಿತ್ರದ ಕಾರಣ ಅವರೀಗ ಸಂಕಷ್ಟಕ್ಕೆ ಸಿಲುಕುವಂತಾಗಿದೆ. :ಮಹಾ" ಚಿತ್ರದ ಪೋಸ್ಟರ್ ನಲ್ಲಿ....

ಚೆನ್ನೈ: ಬಹುಬಾಷಾ ನಟಿ ಹನ್ಸಿಕಾ ತನ್ನ ಐವತ್ತನೇ ಚಿತ್ರ "ಮಹಾ" ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ. ಆದರೆ ಇದೇ ಚಿತ್ರದ ಕಾರಣ ಅವರೀಗ ಸಂಕಷ್ಟಕ್ಕೆ ಸಿಲುಕುವಂತಾಗಿದೆ. :ಮಹಾ" ಚಿತ್ರದ ಪೋಸ್ಟರ್ ನಲ್ಲಿ ನಟಿ ಧೂಮಪಾನ ಮಾಡುತ್ತಿರುವ ಚಿತ್ರವಿದ್ದು ಈ ಕಾರಣ ನಟಿಯ ವಿರುದ್ಧ ದುರು ದಾಖಲಾಗಿದೆ.
ಕಳೆದ ವಾರವಷ್ಟೇ ಯುಆರ್ ಜಮೀಲ್ ನಿರ್ದೇಶನದ ಈ ಚಿತ್ರದ ಪೋಸ್ತರ್ ಬಿಡುಗಡೆಯಾಗಿದ್ದು ಪೋಸ್ಟರ್ ನಲ್ಲಿ ಹನ್ಸಿಕಾ ಸಾಧುಗಳ ನಡುವೆ ಸಿಂಹಾಸನದ ಮೇಲೆ ಕುಳಿತು ಭಂಗಿ ಸೇದುತ್ತಿರುವ ಚಿತ್ರವಿದೆ. ಇದಕ್ಕಾಗಿ ಇದೀಗ ನಿರ್ದೇಶಕ ಜಮೀಲ್ ಹಾಗೂ ನಟಿಯ ವಿರುದ್ಧ ದೂರು ದಾಖಲಾಗಿದೆ.
ಪುಟ್ಟಳ್ಳಿ ಮಕ್ಕಳ ಕಚ್ಚಿ (ಪಿಎಂಕೆ) ಸಂಘಟನೆಯ ಜಾನಕಿರಾಮನ್ ಈ ಸಂಬಂಧ ನ್ಯಾಯಾಲಯದಲ್ಲಿ ದಾವೆ ಹುಡಿದ್ದು ಪೋಸ್ಟರ್ ಜನರ ಧಾರ್ಮಿಕ ಭಾವನೆ ಕೆರಳಿಸುತ್ತದೆ. ಹಾಗಾಗಿ ಹನ್ಸಿಕ ಆಹಾಗೂ ಜಮೀಲ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಈ ಕುರಿತಂತೆ ಹನ್ಸಿಕಾ ಅಥವಾ ಜಮೀಲ್ ಇದುವರೆಗೆ ಯಾವ ಪ್ರತಿಕ್ರಿಯೆ ನೀಡಿಲ್ಲ.
ಹನ್ಸಿಕಆ ಹಾಗೂ ಪ್ರಭುದೇವಾ ಅವರ ನಟನೆಯ "ಗಲೇಬಾಗಾವಲಿ" ಈ ವರ್ಷ ರ್ತೆರೆಕಂಡಿದ್ದು ಸಾಧಾರಣ ಯಶಸ್ಸು ಗಳಿಸಿತ್ತು. ಸದ್ಯ ಹನ್ಸಿಕಾ ಮೂರು ಚಿತ್ರಗಳಲ್ಲಿ ನಟಿಸುತ್ತಿದ್ದು "ಮಹಾ" ತನ್ನ ಐವತ್ತನೆಯ ಚಿತ್ರವೆಂದು ಆಕೆ ಇತ್ತೀಚೆಗೆ ಹೇಳಿಕೊಂಡಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT