ನವದೆಹಲಿ: ಬಾಲಿವುಡ್ ನಟ ಅನುಪಮ್ ಖೇರ್ ಅಧಿಕೃತ ಟ್ವಿಟ್ಟರ್ ಖಾತೆ ಹ್ಯಾಕ್ ಆಗಿದೆ. ಟ್ವಿಟ್ಟರ್ ಕಾತೆ ಹ್ಯಾಕ್ ಆದ ಮಾಹಿತಿ ಬಹಿರಂಗವಾಗುತ್ತಿದ್ದಂತೆ ಸಾಮಾಜಿಕ ತಾಣ ಟ್ವಿಟ್ಟರ್ ಖೇರ್ ಅವರ ಖಾತೆಯನ್ನು ತತ್ಕಾಲಿಕವಾಗಿ ನಿರ್ಬಂಧಿಸಿದೆ..
ಪಾಕಿಸ್ತಾರ ಪರವಾದ ಅಯ್ಯಿಲ್ದಿಝ್ ತಿಮ್ ಎನ್ನುವ ಪಾಕಿಸ್ತಾನ ಪರವಾದ ಟರ್ಕಿ ಸೈಬರ್ ಆರ್ಮಿ ಅನುಪಮ್ ಖೇರ್ ಅವರ ಟ್ವಿಟ್ಟರ್ ಖಾತೆಯನ್ನು ಹ್ಯಾಕ್ ಮಾಡಿದೆ.
"ನನ್ನ ಟ್ವಿಟ್ಟರ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆ, ಅದರ ಬಗ್ಗೆ ಭಾರತದಲ್ಲಿ ಕೆಲ ಸ್ನೇಹಿತರು ಕರೆ ಮಾಡಿ ಹೇಳಿದ್ದಾರೆ. ನಾನೀಗ ವಿದೇಶದಲ್ಲಿದ್ದು ನಿನ್ನೆ ರಾತ್ರಿ ಸ್ವಪನ್ ದಾಸ್ ಗುಪ್ತಾ ತನ್ನ ಖಾತೆಯ ಮೂಲಕ ನೀಡಿದ ಮಾಹಿತಿಯಿಂದ ನಾನು ಈ ವಿಚಾರ ಖಚಿತಪಡಿಸಿಕೊಂಡೆ. ನಾನೀಗಾಗಲೇ ಟ್ವಿಟ್ಟರ್ ನೊಡನೆ ಈ ಕುರಿತು ಮಾತನಾಡಿದ್ದೇನೆ." ನಟ ಅನುಪಮ್ ಖೇರ್ ಹೇಳಿದ್ದಾರೆ.