ಶ್ರೀದೇವಿ 
ಬಾಲಿವುಡ್

ಶ್ರೀದೇವಿ: ಸಿನಿಮಾದ ಮಗು

ಒಬ್ಬ ನಟ ಅಥವಾ ನಟಿ ಯಾವ ಹಂತದಲ್ಲಿ ಸ್ಟಾರ್ ಅನಿಸಿಕೊಳ್ಳುತ್ತಾರೆ? ಬಾಲಿವುಡ್ ನ ಮೊದಲ ಮಹಿಳಾ ಸೂಪರ್ ....

ಒಬ್ಬ ನಟ ಅಥವಾ ನಟಿ ಯಾವ ಹಂತದಲ್ಲಿ ಸ್ಟಾರ್ ಅನಿಸಿಕೊಳ್ಳುತ್ತಾರೆ? ಬಾಲಿವುಡ್ ನ ಮೊದಲ ಮಹಿಳಾ ಸೂಪರ್ ಸ್ಟಾರ್ ಎಂದು ಕರೆಯಲ್ಪಡುವ ಶ್ರೀದೇವಿ ನಟಿಗಿಂತಲೂ ಮೀರಿ ಬೆಳದಿದ್ದು ಯಾವಾಗ ಎಂಬುದನ್ನು ನೋಡುವಾಗ ಆಶ್ಚರ್ಯವಾಗುತ್ತದೆ. ಅದು ತಮಿಳಿನಲ್ಲಿ ರಜನಿಕಾಂತ್, ಕಮಲ್ ಹಾಸನ್ ಅವರ ಜೊತೆಗೆ ಮರೆಯಲಾರದ ಚಿತ್ರಗಳಲ್ಲಿ ಅಭಿನಯಿಸಿದಾಗಲೇ ಅಥವಾ ಬೇರೆ ಭಾಷೆಗಳ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದಾಗಲೇ? ಅಥವಾ ಆ ಭಾಷೆಯನ್ನು ತಿಳಿಯದಿದ್ದರೂ ಹಿಂದಿ ಚಿತ್ರರಂಗಕ್ಕೆ ಕಾಲಿಟ್ಟು ಅಲ್ಲಿ ಭದ್ರವಾಗಿ ನೆಲೆಸಿದಾಗಲೇ?

ನಟರು ಕಲಾತ್ಮಕರು, ನಕ್ಷತ್ರಗಳಂತೆ ಸ್ಪೂರ್ತಿಯ ಚಿಲುಮೆಗಳು. ಅವರ ಅಭಿಮಾನಿಗಳು ಅವರನ್ನು ಆರಾಧಿಸುತ್ತಾರೆ, ಅವರನ್ನು ಅನುಕರಿಸಲು ಆರಂಭಿಸುತ್ತಾರೆ. ಶ್ರೀದೇವಿ ಚಿತ್ರರಂಗದ ಸೂಪರ್ ಸ್ಟಾರ್ ಎಂಬುದರಲ್ಲಿ ಸಂಶಯವಿಲ್ಲ. ಇಡೀ ತಲೆಮಾರಿನ ಮಹಿಳೆಯರು ಆಕೆಯಲ್ಲಿ ಸ್ಪೂರ್ತಿ, ಮಾದರಿಯನ್ನು ಕಂಡಿದ್ದಾರೆ. ಶ್ರೀದೇವಿ ಉಡುತ್ತಿದ್ದ ಸೀರೆ, ಧರಿಸುತ್ತಿದ್ದ ಹಣೆಯ ಬಿಂದಿಯನ್ನು ಅನುಕರಿಸುತ್ತಿದ್ದರು. ನನ್ನ ತಾಯಿ ಕಣ್ಣಿನ ಹುಬ್ಬುಗಳ ತನಕ ಬೀಳುವಂತೆ ಕೂದಲನ್ನು ಕತ್ತರಿಸಿಕೊಂಡಿದ್ದರು, ಏಕೆಂದರೆ ಶ್ರೀದೇವಿ ಕೂಡ ಹಾಗೆಯೇ ಮಾಡಿಕೊಂಡಿದ್ದರು. ಭಾವನೆಗಳ ಕಣ್ಣುಗಳು, ಮಗುವಿನಂತ ಮುಖ, ಶ್ರೀದೇವಿಯನ್ನು ಕಂಡರೆ ಕೇವಲ ಮಹಿಳೆಯರಲ್ಲದೆ ಪುರುಷರು ಕೂಡ ಫಿದಾ ಆಗುತ್ತಿದ್ದರು. ಪುರುಷರು ಮತ್ತು ಮಹಿಳೆಯರನ್ನು ಅನೇಕ ದಶಕಗಳ ಕಾಲ ಹಿಡಿದಿಡುವ ಇಷ್ಟವಾಗುವ ನಟ, ನಟಿಯರು ಕೆಲವರೇ ಕೆಲವರು ಇರಬಹುದು. ಅಂಥವರಲ್ಲಿ ಶ್ರೀದೇವಿ ಒಬ್ಬರು.

ಶ್ರೀದೇವಿಯವರ ಜೀವನ ಸಿನಿಮಾಕ್ಕೆ ಮೀಸಲಾಗಿದ್ದವು. ಸಿನಿಮಾಕ್ಕಾಗಿಯೇ ಹುಟ್ಟಿದವರೆಂದರೆ ತಪ್ಪಾಗಲಾರದು. ಆಕೆಯನ್ನು ಸಿನಿಮಾದ ಮಗು ಎಂದು ಕರೆಯಬಹುದು ಏಕೆಂದರೆ 4ನೇ ವಯಸ್ಸಿನಲ್ಲಿ ನಟನೆ ಆರಂಭಿಸಿದ ಶ್ರೀದೇವಿ ಭಾರತೀರಾಜ ಅವರ ಸಿನಿಮಾ 16 ವಯದಿನಿಲೆ ಸಿನಿಮಾ ಬಿಡುಗಡೆಯಾದಾಗ ಶ್ರೀದೇವಿ ವಯಸ್ಸು ಕೇವಲ 14. ಅದಾಗಲೇ ಶ್ರೀದೇವಿ ಚಿತ್ರರಂಗಕ್ಕೆ ಹೀರೋಯಿನ್ ಎಂದು ಪರಿಚಯವಾಗಿ ಒಂದು ವರ್ಷವಾಗಿತ್ತು.
ಸಿನಿಮಾ ಜಗತ್ತು ಅವರನ್ನು ಸಂಪೂರ್ಣವಾಗಿ ಒಪ್ಪಿಕೊಂಡಿತ್ತು. ಇನ್ನೊಂದು ವಿಶೇಷವೆಂದರೆ ಶ್ರೀದೇವಿ ನಟಿಸಿದ ಎಲ್ಲಾ ಭಾಷೆಯ ಚಿತ್ರಗಳಲ್ಲಿಯೂ ಅವರು ಹೆಸರು ಮಾಡಿದ್ದಾರೆ. ದಕ್ಷಿಣ ಭಾರತೀಯ ಚಿತ್ರರಂಗದ ಎಲ್ಲಾ ಭಾಷೆಗಳಲ್ಲಿ ನಟಿಸಿದ ನಂತರ ಬಾಲಿವುಡ್ ಗೆ ಪಾದಾರ್ಪಣೆ ಮಾಡಿ ಅಲ್ಲಿ ಕೂಡ ಭದ್ರವಾಗಿ ನೆಲೆಕಂಡಿದ್ದು ಅದು ಕೇವಲ ನಟನಾ ಸಾಮರ್ಥ್ಯದಿಂದ, ಸೌಂದರ್ಯದಿಂದ ಮಾತ್ರ ಸಾಧ್ಯವಾಗಲಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!