ಬಾಲಿವುಡ್

ಸಲ್ಮಾನ್ ಖಾನ್'ರ 'ಭಾರತ್' ಚಿತ್ರದಿಂದಲೇ ಪ್ರಿಯಾಂಕಾ ಚೋಪ್ರಾ ಹೊರ ಬಂದಿದ್ದು ಯಾಕೆ ಗೊತ್ತ?

Vishwanath S
ನವದೆಹಲಿ: ಬಾಲಿವುಡ್ ನಟ ಸಲ್ಮಾನ್ ಖಾನ್ ಅಭಿನಯದ ಭಾರತ್ ಚಿತ್ರದಲ್ಲಿ ನಟಿ ಪ್ರಿಯಾಂಕಾ ಚೋಪ್ರಾ ನಟಿಸಬೇಕಿತ್ತು. ಆದರೆ ಇದೀಗ ದಿಢೀರ್ ಅಂತ ಆ ಚಿತ್ರದಿಂದ ಹೊರಬಂದಿದ್ದಾರೆ. 
ಭಾರತ್ ಚಿತ್ರದಲ್ಲಿ ಅಭಿನಯಿಸಲು ಪ್ರಿಯಾಂಕಾ ಚೋಪ್ರಾ ಒಪ್ಪಿಕೊಂಡಿದ್ದರು. ಆದರೆ ಇದೀಗ ಅವರು ಚಿತ್ರದಲ್ಲಿ ನಟಿಸುತ್ತಿಲ್ಲ ಎಂದು ನಿರ್ದೇಶಕ ಅಲಿ ಅಬ್ಬಾಸ್ ಜಾಫರ್ ಖಚಿತಪಡಿಸಿದ್ದಾರೆ. 
ಭಾರತ್ ಚಿತ್ರದಲ್ಲಿ ಪ್ರಿಯಾಂಕಾ ನಟಿಸುತ್ತಿಲ್ಲ ಎಂದು ಟ್ವೀಟ್ ಮಾಡಿರುವ ಅಲಿ ಅಬ್ಬಾಸ್ ಇದರ ಜತೆಗೆ ಶೀಘ್ರದಲ್ಲಿ ಪ್ರಿಯಾಂಕಾ ಮದುವೆಯಾಗಲಿದ್ದಾರೆ ಎನ್ನುವ ಸುಳಿವು ಬಿಟ್ಟುಕೊಟ್ಟಿದ್ದಾರೆ.
SCROLL FOR NEXT