ಬಾಲಿವುಡ್

ರೇಸ್ 3 ಚಿತ್ರದ ಸ್ಟಂಟ್ ಜಾಕ್ವೆಲಿನ್ ಫರ್ನಾಂಡಿಸ್‌ಗೆ ಶಾಶ್ವತ ಕಣ್ಣಿನ ಗಾಯಕ್ಕೆ ಕಾರಣವಾಯ್ತಾ?

Vishwanath S
ಬಾಲಿವುಡ್ ನ ಬಹುನಿರೀಕ್ಷಿತ ರೇಸ್ 3 ಚಿತ್ರದ ಬಿಡುಗಡೆ ಖುಷಿಯಲ್ಲಿರುವ ನಟಿ ಜಾಕ್ವೆಲಿನ್ ಫರ್ನಾಡಿಸ್ ಅವರು ಚಿತ್ರದಲ್ಲಿ ಸ್ಟಂಟ್ ಮಾಡಲು ಹೋಗಿ ಅನಾಹುತ ಮಾಡಿಕೊಂಡಿದ್ದು ಇದೀಗ ಶಾಶ್ವತ ಕಣ್ಣಿನ ಗಾಯದ ಸಮಸ್ಯೆಗೆ ಗುರಿಯಾಗಿದ್ದಾರೆ. 
ಅಭಿಮಾನಿಗಳಿಗೆ ರಸದೌತನ ನೀಡಬೇಕು ಎಂದು ಜಾಕ್ವೆಲಿನ್ ಫರ್ನಾಡಿಸ್ ರೇಸ್ 3 ಚಿತ್ರದಲ್ಲಿ ಡ್ಯೂಪ್ ಗಳನ್ನು ಬಳಸದೇ ಸ್ಟಂಟ್ಸ್ ಮಾಡಿದ್ದರು. ಮೊದಲಿಗೆ ಕಣ್ಣಿಗೆ ಸಣ್ಣ ಗಾಯವಾಗಿದೆ ಎಂದು ಹೇಳಲಾಗಿತ್ತು. ಆದರೆ ಇದೀಗ ವೈದ್ಯರು ಶಾಶ್ವತವಾಗಿ ಕಣ್ಣಿನ ಗಾಯ ಸರಿಹೋಗುವುದಿಲ್ಲ ಎಂದು ಹೇಳಿರುವುದು ನಟಿಯ ಆತಂಕಕ್ಕೆ ಕಾರಣವಾಗಿದೆ. 
ಇನ್ನು ಜಾಕ್ವೆಲಿನ್ ಫರ್ನಾಡಿಸ್ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ನನ್ನ ಕಣ್ಣಿಗೆ ಅಪಾಯವಾಗಿಲ್ಲ. ಆದರೆ ಕಣ್ಣಿಗೆ ಶಾಶ್ವತ ಗಾಯವಾಗಿದೆ. ಐರಿಸ್ ಇನ್ನು ಮುಂದೆ ಗೋಲಾಕಾರದಲ್ಲಿ ಇರುವುದಿಲ್ಲ. ಆದರೆ ನನ್ನ ದೃಷ್ಟಿಗೆ ಯಾವುದೇ ಸಮಸ್ಯೆ ಆಗಿಲ್ಲ ಅಂತ ಬರೆದಕೊಂಡಿದ್ದಾರೆ.
SCROLL FOR NEXT