'ಝೀರೋ' ಕನಸನ್ನು ನನಸಾಗಿಸಿದ ಸಲ್ಮಾನ್ ಗೆ ಥಾಕ್ಸ್ ಹೇಳಿದ ಶಾರುಖ್ 
ಬಾಲಿವುಡ್

'ಝೀರೋ' ಕನಸನ್ನು ನನಸಾಗಿಸಿದ ಸಲ್ಮಾನ್ ಗೆ ಶಾರುಖ್ ಥ್ಯಾಂಕ್ಸ್

’ಝೀರೋ’ ಕನಸನ್ನು ನನಸಾಗಿಸಿದ್ದಕ್ಕೆ ಬಾಲಿವುಡ್ ನಟ ಸಲ್ಮಾನ್ ಖಾನ್ ಗೆ ಇನ್ನೋರ್ವ ಬಾಲಿವುಡ್ ಸ್ಟಾರ್ ಶಾರುಖ್ ಖಾನ್ ಥ್ಯಾಂಕ್ಸ್ ಹೇಳಿದ್ದಾರೆ.

ಮುಂಬೈ: ’ಝೀರೋ’ ಕನಸನ್ನು ನನಸಾಗಿಸಿದ್ದಕ್ಕೆ ಬಾಲಿವುಡ್ ನಟ ಸಲ್ಮಾನ್ ಖಾನ್ ಗೆ ಇನ್ನೋರ್ವ ಬಾಲಿವುಡ್ ಸ್ಟಾರ್ ಶಾರುಖ್ ಖಾನ್ ಥ್ಯಾಂಕ್ಸ್ ಹೇಳಿದ್ದಾರೆ.
ಎಸ್ ಆರ್ ಕೆ ತಮ್ಮ ಟ್ವೀಟ್ ನಲ್ಲಿ ಸಲ್ಮಾನ್ ಗೆ ’ದಬಂಗ್ ಸ್ಟಾರ್’ ಎಂದು ಕರೆದಿದ್ದು "ಸೋದರ ಸಲ್ಮಾನ್ ಖಾನ್, ಜಾವೇದ್ ಜಾಫ್ರಿ, ರೆಡ್ ಚಿಲ್ಲೀಸ್ ವಿಎಫ್ಎಕ್ಸ್ ಮತ್ತು ಆನಂದ ಎಲ್. ರೈ ಅವರಿಗೆ 'ಝೀರೊ' ಕನಸನ್ನು ನಿಜ ಮಾಡಿದ್ದಕ್ಕಾಗಿ ಧನ್ಯವಾದಗಳು" ಎಂದಿದ್ದಾರೆ.
ಶಾರೂಖ್ ಮತ್ತು ಸಲ್ಮಾನ್ ಭಾರತ ಜನತೆಗೆ  "ಈದ್ ಮುಬಾರಕ್" ಹೇಳಿದ್ದು ಆನಂದ ಎಲ್. ರೈ "ಝೀರೋ" ಟೀಸರ್ ನ ವಿಶೇಷ ಹಾಡಿನಲ್ಲಿ ಇಬ್ಬರೂ ಕೂಡಿ ಅಭಿನಯಿಸಿದ್ದ ವೀಡಿಯೋವನ್ನು ಶಾರುಖ್ ಗುರುವಾರ ಹಂಚಿಕೊಂಡಿದ್ದಾರೆ. ಈ ಟ್ವೀಟ್ ಹಾಗೂ ವೀಡಿಯೋ ವೀಕ್ಷಕರ ಸಂಖ್ಯೆ ಇದಾಗಲೇ  10 ದಶಲಕ್ಷ ಮೀರಿದೆ.
"ಕರಣ್ ಅರ್ಜುನ್", "ಕುಚ್ ಕುಚ್ ಹೋತಾ ಹೈ" ಮತ್ತು "ಹಮ್ ತುಮ್ಹರೆ ಹೈ ಸನಮ್" ಮುಂತಾದ ಚಿತ್ರಗಳಲ್ಲಿ  ಒಟ್ಟಾಗಿ ಕಾಣಿಸಿಕೊಂಡಿದ್ದ ಈ ಜೋಡಿ ಈ ಟ್ವೀಟ್ ನ ಮುಖೇನ ತಮ್ಮ ಸ್ನೇಹವನ್ನು ಹಂಚಿಕೊಂಡಿದ್ದಾರೆ. ಇದೇ ವೇಳೆ ಸಲ್ಮಾನ್ ನಟನೆಯ "ರೇಸ್ 3" ಇದೀಗ ತೆರೆ ಕಾಣುತ್ತಿದೆ.
"ಝೀರೊ" ಚಿತ್ರದಲ್ಲಿ ಶಾರುಖ್ ಕುಳ್ಳನಾಗಿ ಕಾಣಿಸಿಕೊಳ್ಳಲಿದು ಇದು ಅವರ ಎಂದಿನ ನಟನೆಗಿಂತ ವಿಭಿನ್ನ ಪಾತ್ರವಾಗಿದೆ. ಹೀಗಾಗಿ ಚಿತ್ರದ ಕುರಿತಂತೆ ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲ ಹುಟ್ಟಿಸಿದೆ. ರೆಡ್ ಚಿಲ್ಲೀಸ್ ಎಂಟರ್ಟೇನ್ಮೆಂಟ್  ಹಾಗೂ ಕಲರ್ ಯೆಲ್ಲೋ ಪ್ರೊಡಕ್ಷನ್ಸ್  ನಿರ್ಮಾಣದ ಈ ಚಿತ್ರ ಡಿಸೆಂಬರ್ 21 ರಂದು ಬಿಡುಗಡೆಯಾಗಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Nepal floods|ಮೃತರ ಸಂಖ್ಯೆ 165ಕ್ಕೆ ಏರಿಕೆ; ನಾಪತ್ತೆಯಾದವರಲ್ಲಿ 133 ಮಂದಿ ಭಾರತೀಯರು

Iran ಸರ್ವೋಚ್ಚ ನಾಯಕ Mojtaba Khamenei ಸತ್ತಿಲ್ಲ, ಗಂಭೀರವಾಗಿ ಗಾಯಗೊಂಡಿದ್ದಾರೆ: ಹಳೇ Vidoe ಬಿಡುಗಡೆ ಬೆನ್ನಲ್ಲೇ ಅಸಲಿಯತ್ತು ಬಿಚ್ಚಿಟ್ಟ Donald Trump..!

Nepal floods: ಸಾವಿನ ಸಂಖ್ಯೆ 157ಕ್ಕೇರಿಕೆ, 750ಕ್ಕೂ ಅಧಿಕ ಮಂದಿ ನಾಪತ್ತೆ, ನೇಪಾಳಕ್ಕೆ ಭಾರತ ನೆರವು! ಸಹಾಯವಾಣಿ ಬಿಡುಗಡೆ

ನೇಪಾಳ ಭೀಕರ ಪ್ರವಾಹ: 95 ಮಂದಿ ಸಾವು; 105 ಭಾರತೀಯರು ಸೇರಿ 400 ಮಂದಿ ನಾಪತ್ತೆ: ಬಿಹಾರ, ಯುಪಿಯಲ್ಲಿ ಹೈ ಅಲರ್ಟ್! Video

ನೇಪಾಳ ಪ್ರವಾಹ: ಭಾರತಕ್ಕೆ ದೊಡ್ಡ ಆತಂಕವಿಲ್ಲ, ಜಲಾಶಯಗಳ ನೀರಿನ ಮಟ್ಟ ಇಳಿಕೆ: ಕೇಂದ್ರ ಸ್ಪಷ್ಟನೆ