ಬಾಲಿವುಡ್

ಬಿಗ್ ಬಾಸ್ ಸ್ಪರ್ಧಿ ನೊರಾ ಫತೇಹಿ ಬೆಲ್ಲಿ ಡ್ಯಾನ್ಸ್! ವಿಡಿಯೋ ವೈರಲ್

Vishwanath S
ಹಿಂದಿಯ ಬಿಗ್ ಬಾಸ್ ಸ್ಪರ್ಧಿ ನೊರಾ ಫತೇಹಿ ಅವರ ಬೆಲ್ಲಿ ಡ್ಯಾನ್ಸ್ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ. 
ನೊರಾ ಫತೇಹಿ ಅವರು ಬಹು ಪ್ರತಿಭಾವಂತ ವ್ಯಕ್ತಿತ್ವ. ಸುಂದರವಾಗಿ ನೃತ್ಯವನ್ನು ಕೂಡ ಮಾಡುತ್ತಾರೆ. ತಮ್ಮ ಬೆಲ್ಲಿ ಡ್ಯಾನ್ಸ್ ಕೌಶಲ್ಯಗಳನ್ನು ಪ್ರದರ್ಶಿಸಿರುವ ವಿಡಿಯೋವನ್ನು ಇನ್‌ಸ್ಟಗ್ರಾಮ್‌ ನಲ್ಲಿ ಹಂಚಿಕೊಂಡಿದ್ದಾರೆ. 
ನೊರಾ ಫತೇಹಿ ವಿಡಿಯೋದಲ್ಲಿ ಶ್ವೇತ ಬಣ್ಣದ ಮತ್ತು ಬೆಳ್ಳಿ ಬಣ್ಣದ ಡ್ರೆಸ್ ನಲ್ಲಿ ನೃತ್ಯ ಮಾಡಿದ್ದಾರೆ. ಬಿಗ್ ಬಾಸ್ 9ನೇ ಆವೃತ್ತಿಯ ಸ್ಪರ್ಧಿಯಾಗಿದ್ದ ನೊರಾ ಫತೇಹಿ ಲಕ್ಷಾಂತರ ಅಭಿಮಾನಿಗಳ ಹೃದಯ ಗೆದ್ದಿದ್ದರು. ಇನ್ನು 2015ರಲ್ಲಿ ಸೆಲೆಬ್ರಿಟಿ ಡ್ಯಾನ್ಸ್ ರಿಯಾಲಿಟಿ ಶೋ ಝಲಕ್ ದಿಖ್ಲಾ ಜಾ 9ರಲ್ಲಿ ನೃತ್ಯ ಕೌಶಲ್ಯಗಳನ್ನು ಪ್ರದರ್ಶಿಸಿ ಪ್ರೇಕ್ಷಕರನ್ನು ರಂಜಿಸಿದ್ದರು. 
ಪ್ರಭಾಸ್ ಮತ್ತು ರಾಣಾ ದಗ್ಗುಬಾಟಿ ನಟಿಸಿರುವ ಬಾಹುಬಲಿ ಚಿತ್ರದ ವಿಶೇಷ ಹಾಡೊಂದರಲ್ಲಿ ನೊರಾ ಫತೇಹಿ ಕುಣಿದಿದ್ದರು.
SCROLL FOR NEXT