ಬಾಲಿವುಡ್

ಗಾಯಕಿ ಸೋನಾ ಮಹಾಪತ್ರಗೆ ಸೂಫಿ ಗ್ರೂಪ್ ನಿಂದ ಜೀವ ಬೆದರಿಕೆ

Lingaraj Badiger
ಮುಂಬೈ: ತನ್ನ ಇತ್ತೀಚಿನ 'ತೋರಿ ಸೂರತ್' ಮ್ಯೂಸಿಕ್ ವಿಡಿಯೋ ಸಂಬಂಧ ಸೂಫಿ ಫೌಂಡೇಷನ್ ತನಗೆ ಜೀವ ಬೆದರಿಕೆ ಹಾಕಿದೆ ಎಂದು ಗಾಯಕಿ ಸೋನಾ ಮಹಾಪತ್ರ ಅವರು ಆರೋಪಿಸಿದ್ದಾರೆ.
'ತೋರಿ ಸೂರತ್' ವಿಡಿಯೋದಲ್ಲಿನ ಸೂಫಿ ಹಾಡು ತನ್ನ ಸಂಪ್ರದಾಯಗಳ ವಿರುದ್ಧವಾಗಿದ್ದು, ಅದನ್ನು ಈ ಕೂಡಲೇ ತೆಗೆದು ಹಾಕಬೇಕು ಎಂದು ಫೌಂಡೇಷನ್ ತನಗೆ ನೋಟಿಸ್ ನೀಡಿರುವುದಾಗಿ ಹಾಗೂ ಬೆದರಿಕೆ ಹಾಕಿರುವುದಾಗಿ ಸೋನಾ ಸರಣಿ ಟ್ವೀಟ್ ಮಾಡಿದ್ದಾರೆ.
ಸೋನಾ ಮಹಾಪತ್ರ ಅಮಿರ್ ಖಸ್ರೂರು ಬಗ್ಗೆ ವಿಡಿಯೋ ಮಾಡಿದ್ದು, ಖಸ್ರೂರು ಇಡೀ ಭಾರತಕ್ಕೆ ಸೇರಿದವರು ಎಂಬುದನ್ನು ಮುಲ್ಲಾಗಳು ಮೊದಲು ತಿಳಿದುಕೊಳ್ಳಬೇಕು. ಅವರು ನಿಮ್ಮ ಆಸ್ತಿಯಲ್ಲ ಎಂದು ಗಾಯಕಿ ಟ್ವೀಟ್ ಮಾಡಿದ್ದಾರೆ.
ತೋರಿ ಸೂರತ್ ಮ್ಯೂಸಿಕ್ ವಿಡಿಯೋವನ್ನು ಎಲ್ಲಾ ಸಂವಹನ ಮಾಧ್ಯಮಗಳಿಂದ ತೆಗೆದು ಹಾಕಬೇಕು ಎಂದು ಮದರಿಯಾ ಸೂಫಿ ಫೌಂಡೇಷನ್ ತನಗೆ ಬೆದರಿಕೆ ಹಾಕಿದೆ ಎಂದು ಸೋನಾ ಮಹಾಪತ್ರ ಮುಂಬೈ ಪೊಲೀಸರನ್ನು ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದಾರೆ.
SCROLL FOR NEXT