ಬಾಲಿವುಡ್

ನನ್ನ ಚಿತ್ರಗಳಿಂದ ಜನರ ಹಣ, ಸಮಯ ವ್ಯರ್ಥವಾಗಬಾರದು: ದಿಶಾ ಪಟಾನಿ

Lingaraj Badiger
ನವದೆಹಲಿ: ನನ್ನ ಚಿತ್ರಗಳಿಂದ ಜನರ ಹಣ ಮತ್ತು ಸಮಯ ವ್ಯರ್ಥವಾಗಬಾರದು ಎಂದು ಬಾಲಿವುಡ್ ನಟಿ, 'ಭಾಗಿ -2' ಸಿನಿಮಾದ ನಾಯಕಿ ದಿಶಾ ಪಟಾನಿ ಅವರು ಹೇಳಿದ್ದಾರೆ.
ದಿಶಾ ಅಭಿನಯದ 'ಭಾಗಿ -2' ಈಗಾಗಲೇ ಬಾಕ್ಸ್ ಆಫೀಸ್ ಹಿಟ್ ಆಗಿದ್ದು, ತಾವು ಚಿತ್ರೋದ್ಯಮದ ಇತರೆ ಕಲಾವಿದರೊಂದಿಗೆ ಹೋಲಿಕೆ ಮಾಡಿಕೊಳ್ಳುವುದಿಲ್ಲ. ಆದರೆ ತಾವು ಮಾಡುವ ಚಿತ್ರಗಳಿಂದ ಪ್ರೇಕ್ಷಕರಿಗೆ ಖುಷಿಯಾಗಬೇಕು ಎಂದು ಹೇಳಿದ್ದಾರೆ.
'ಎಂ.ಎಸ್. ಧೋನಿ: ದಿ ಅನ್‌ಟೋಲ್ಟ್‌ ಸ್ಟೋರಿ' ಮೂಲಕ ಬಾಲಿವುಡ್ ಗೆ ಪಾದರ್ಪಣೆ ಮಾಡಿದ ದಿಶಾ ಪಟಾನಿ, ‘ಧೋನಿ’ ಚಿತ್ರದಲ್ಲಿನ ನಟನೆಗಾಗಿ ಮೂರು ಪ್ರಶಸ್ತಿಗಳನ್ನೂ ಬಾಚಿಕೊಂಡಿದ್ದಾರೆ. ಇದೀಗ ಎರಡನೇ ಚಿತ್ರ 'ಭಾಗಿ -2' ಸಹ ಯಶಸ್ವಿ ಪ್ರದರ್ಶನ ಕಾಣುತ್ತಿದೆ.
ನಾನು ಚಿತ್ರಕ್ಕಾಗಿ ಕಠಿಣ ಶ್ರಮ ಹಾಕುತ್ತೇನೆ ಮತ್ತು ಪ್ರೇಕ್ಷಕರಿಗೆ ಮನೋರಂಜನೆ ನೀಡಲು ಯತ್ನಿಸುತ್ತೇನೆ. ನನ್ನ ಚಿತ್ರಗಳನ್ನು ನೋಡಲು ಬರುವ ಪ್ರೇಕ್ಷಕರು ಚಿತ್ರಮಂದಿರದಿಂದ ಸಂತೋಷವಾಗಿ ಹೋಗಬೇಕು. ಅವರ ಸಮಯ ಮತ್ತು ಹಣ ವ್ಯರ್ಥವಾಗಬಾರದು ಎಂದು ದಿಶಾ ಐಎಎನ್ ಎಸ್ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. 
ಚಿತ್ರರಂಗದಲ್ಲಿ ನನಗೆ ನಾನೇ ಸ್ವರ್ಧಿ. ನಾನು ಇತರೆ ಕಲಾವಿದರೊಂದಿಗೆ ಸ್ಪರ್ಧಿಸಲು ಬಯಸುವುದಿಲ್ಲ. ಉದ್ಯಮದಲ್ಲಿ ಅವರ ಅವರ ಶ್ರಮಕ್ಕೆ ತಕ್ಕಂತೆ ಎಲ್ಲರು ಬೆಳೆಯಬೇಕು. ಸದಾ ವಿಭಿನ್ಯ ವಿಚಾರಳನ್ನು ಹೊಂದಿರುವ ವಿಭಿನ್ನ ಪಾತ್ರಗಳನ್ನು ಮಾಡಲು ನಾನು ಬಯಸುತ್ತೇನೆ ಎಂದಿದ್ದಾರೆ.
SCROLL FOR NEXT