ಚೆನ್ನೈ: ಸೂಪರ್ ಸ್ಟಾರ್ ರಜನಿಉಕಾಂತ್ ಅಭಿನಯದ ಬಹು ನಿರೀಕ್ಷಿತ ಚಿತ್ರ "2.0" ದ ಟ್ರೇಲರ್ ಬಿಡುಗಡೆಯಾಗಿದೆ. ಶಂಕರ್ ನಿರ್ದೇಶನದ ರಜನಿ ಹಾಗೂ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅಭಿನಯದ "2.0" 2010 ರ ಹಿಟ್ ಚಿತ್ರ"ಎಂದಿರನ್" ನ ಮುಂದಿನ ಭಾಗವೆನ್ನಲಾಗಿದೆ.
ವಿಶೇಷವೆಂದರೆ 3D ಯಲ್ಲಿ ನೇರವಾಗಿ ಚಿತ್ರೀಕರಿಸಿದ ಮೊದಲ ಭಾರತೀಯ ಚಿತ್ರ ಇದು. ಚಿತ್ರೀಕರಣ ಪ್ರಾರಂಭವಾದಂದಿನಿಂದ ಸಾಕಷ್ಟು ಕುತೂಹಲ ಮೂಡಿಸಿದ್ದ ಈ ಚಿತ್ರದ ಟ್ರೇಲ ಇಂದು (ಶನಿವಾರ) ಚೆನ್ನೈನಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ಬಿಡುಗಡೆಗೊಂಡಿದೆ.
ನಟ ರಜನಿಕಾಂತ್ ಹಾಗೂ ಅಕ್ಷಯ್ ಕುಮಾರ್ ಅವರ ಡೈಲಾಗ್ ಗಳು ಟ್ರೇಲರ್ನಲ್ಲಿದ್ದು ರೀಲೋಡೆಡ್ ಚಿಟ್ಟಿ ಪಾತ್ರದಲ್ಲಿ ರಜನಿ ಅದ್ಭುತವಾಗಿ ಕಾಣಿಸುತ್ತಾರೆ.
ಇನ್ನು ನಟಿ ಆ್ಯಮಿ ಜಾಕ್ಸನ್ ಸಹ ರೋಬೋ ಲುಕ್ ನಲ್ಲಿ ಕಾಣಿಸುತ್ತಿದ್ದು ಚಿತ್ರಕ್ಕೆ ಇನ್ನಷ್ಟು ಮೆರುಗು ನೀಡಿದೆ.
ಚಿತ್ರವು ಇದೇ ೨೯ಕ್ಕೆ ಚೆನ್ನೈನ ಸತ್ಯಂ ಚಿತ್ರಮಂದಿರ ಸೇರಿ ಜಗತ್ತಿನಾದ್ಯಂತ ತೆರೆ ಕಾಣಲಿದೆ.550 ಕೋಟಿ ರು. ಬಜೆಟ್ ನ ಚಿತ್ರವಿದಾಗಿದ್ದು ಜಗತ್ತಿನಾದ್ಯಂತದ 9 ಸಾವಿರಕ್ಕೂ ಹೆಚು ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics