ಮುಂಬೈ: ಕುಡಿದ ಮತ್ತಿನಲ್ಲಿ ಪತ್ರಕರ್ತರಿಗೆ ಬಾಲಿವುಡ್ ನಟ ಸಂಜಯ್ ದತ್ ಅವಾಚ್ಯವಾಗಿ ನಿಂದಿಸಿರುವ ವಿಡಿಯೋ ಇದೀಗ ವೈರಲ್ ಆಗಿದೆ.
ಸಂಜಯ್ ದತ್ ಹಾಗೂ ಪತ್ನಿ ಮಾನ್ಯತಾ ದತ್ ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ತಮ್ಮ ಮನೆಯಲ್ಲಿ ಸ್ನೇಹಿತರಿಗಾಗಿ ಪಾರ್ಟಿ ಆಯೋಜಿಸಿದ್ದರು. ಈ ಸಂದರ್ಭದಲ್ಲಿ ವಿವಿಧ ಮಾಧ್ಯಮ ವರದಿಗಾರರು ಸಂಜಯ್ ದತ್ ಮನೆ ಮುಂದೆ ಜಮಾಯಿಸಿದ್ದರು. ಇದನ್ನು ಗಮನಿಸಿದ ಸಂಜಯ್ ದತ್ ಕುಪಿತಗೊಂಡು, ಮನೆಗೆ ಹೋಗಿ ದೀಪಾವಳಿ ಆಚರಿಸಿ, ಇಲ್ಲನೇನು ಮಾಡುತ್ತಿದ್ದೀರಾ ಎಂದು ಪ್ರಶ್ನಿಸಿದ್ದಾರೆ.
ಇದಕ್ಕೆ ಪತ್ರಕರ್ತರು ನಮ್ಮ ಮೇಲಾಧಿಕಾರಿ ಸೂಚನೆಯಂತೆ ನಾವಿಲ್ಲಿ ಬಂದಿದ್ದೇವೆ ಎಂದಾಗ ದತ್ ವರದಿಗಾರರ ಮೇಲೆ ಅವಾಚ್ಯ ಶಬ್ದಗಳನ್ನು ಪ್ರಯೋಗಿಸಿದ್ದಾರೆ. ಕುಡಿದ ಮತ್ತಿನಲ್ಲಿ ಸಂಜಯ್ ದತ್ ಹೀಗೆ ಬೈದಿದ್ದಾರೆ ಎಂದು ಹೇಳಲಾಗಿದೆ.