ದೀಪಿಕಾ ಪಡುಕೋಣೆ, ರಣ್ ವೀರ್ ಸಿಂಗ್ ಹಾಗೂ ಕುಟುಂಬ ಸದಸ್ಯರು 
ಬಾಲಿವುಡ್

ದೀಪಿಕಾ - ರಣ್ ವೀರ್ ಮದುವೆಯ ಹೊಸ ಫೋಟೋ

ಬಾಲಿವುಡ್ ಖ್ಯಾತ ತಾರೆಯರಾದ ದೀಪಿಕಾ ಪಡುಕೋಣೆ ಮತ್ತು ರಣ್‍ವೀರ್ ಸಿಂಗ್ ಅವರು ಬುಧವಾರ ಕೊಂಕಣಿ...

ಬೆಂಗಳೂರು: ಬಾಲಿವುಡ್ ಖ್ಯಾತ ತಾರೆಯರಾದ ದೀಪಿಕಾ ಪಡುಕೋಣೆ ಮತ್ತು ರಣ್‍ವೀರ್ ಸಿಂಗ್ ಅವರು ಬುಧವಾರ ಕೊಂಕಣಿ ಸಂಪ್ರದಾಯದಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಸಿಂಧಿ ಶೈಲಿಯ ಮದುಮಕ್ಕಳಾಗಿ ಮಿಂಚಿದ ಫೋಟೋ ಗುರುವಾರ ಬಹಿರಂಗವಾಗಿತ್ತು. ಶುಕ್ರವಾರ ಮತ್ತೊಂದು ಹೊಸ ಫೋಟೋ ಬಹಿರಂಗವಾಗಿದ್ದು, ಕುಟುಂಬ ಸದಸ್ಯರೊಂದಿಗೆ ನವ ದಂಪತಿಗಳು ಭರ್ಜರಿ ಪೋಸ್ ಕೊಟ್ಟಿದ್ದಾರೆ.
ಕಳೆದ ಬುಧವಾರ ಇಟಲಿಯ ಸುಂದರ ಪ್ರವಾಸಿ ತಾಣ ಲೇಕ್ ಕೊಮೊವಿನ ವಿಲ್ಲಾ ಡೆಲ್ ಬಲ್ಬಿಯಾನೆಲ್ಲೊದಲ್ಲಿ ಡೀಪ್‍ವೀರ್ ಮದುವೆಯಾಗಿದ್ದು, ಇಂದು ಬಹಿರಂಗವಾದ ಗ್ರೂಪ್ ಫೋಟೋದಲ್ಲಿ ದೀಪಿಕಾ, ರಣ್ ವೀರ್ ಮತ್ತು ತನ್ನ ಅತ್ತೆಯ ಮಧ್ಯ ನಿಂತಿದ್ದಾರೆ.
ಇದೇ ವೇಳೆ ರಣ್ ವೀರ್ ಸಿಂಗ್ ತಂದೆ ಭವ್ನಾನಿ ಅವರು ತಮ್ಮ ಸೊಸೆಯನ್ನು ಕಿಚಾಯಿಸುತ್ತಲೇ ಹೊಸ ಜೀವನಕ್ಕೆ ಹಾಗೂ ತಮ್ಮ ಕುಟುಂಬಕ್ಕೆ ಸ್ವಾಗತಿಸಿದ್ದಾರೆ.
ದೀಪಿಕಾ 'ಏ ದಿವಾನಿ ಹೇ ಜವಾನಿ' ಅನ್ನೋ ಚಿತ್ರದಲ್ಲಿ ಅಭಿನಯಿಸಿದ್ದರು. ಅದನ್ನೇ ಬಳಸಿಕೊಂಡಿರುವ ರಣ್​ವೀರ್ ತಂದೆ, ‘ಏ ದಿವಾನಿ ತೋ ಭವ್ನಾನಿ ಹೋ ಗಯಿ’ ಅಂತ ಫಿಲ್ಮಿ ಸ್ಟೈಲ್​ನಲ್ಲೇ ತಮ್ಮ ಫ್ಯಾಮಿಲಿಗೆ ವೆಲ್ಕಮ್ ಮಾಡಿದ್ದಾರೆ. ಇದು ಕೂಡ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೆಂಡಿಂಗ್​ನಲ್ಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಮ್ಮಲ್ಲೂ ಅಸ್ತ್ರಗಳಿವೆ, ದಾಳಿಗೆ ಸಂಪೂರ್ಣ ಸಿದ್ಧ: ಅಮೆರಿಕಾ ಆರ್ಥಿಕ ದಿಗ್ಬಂಧನಕ್ಕೆ ಇರಾನ್‌ ಪ್ರತಿರೋಧ, ಭಾರೀ ಪ್ರತೀಕಾರದ ಎಚ್ಚರಿಕೆ

‘Iran ನನ್ನ ಪುತ್ರನನ್ನು ಹತ್ಯೆ ಮಾಡಲು ಯತ್ನಿಸಿತ್ತು’: ಟೆಹ್ರಾನ್‌ ವಿರುದ್ಧ ನೆತನ್ಯಾಹು ಗಂಭೀರ ಆರೋಪ

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ