ಪ್ರಿಯಾಂಕಾ ಚೋಪ್ರಾ ಮಾತು ಕೇಳಿ ಪರಿಣಿತಿ ಮಧ್ಯರಾತ್ರಿ ಬಿಕ್ಕಿ ಬಿಕ್ಕಿ ಅತ್ತಿದ್ದೇಕೆ?
ಅಂತಾರಾಷ್ಟ್ರೀಯ ನಟಿ ಪ್ರಿಯಾಂಕಾ ಚೋಪ್ರಾ ಹಾಗೂ ಪರಿಣೀತಿ ಚೋಪ್ರಾ ಅಕ್ಕ-ತಂಗಿಯರೆಂಬುದು ಎಲ್ಲರಿಗೂ ತಿಳಿದ ವಿಚಾರವೇ. ಆದರೆ ಅಕ್ಕನ ಮಾತು ಕೇಳಿ ಪರಿಣಿತಿ ಬಿಕ್ಕಿ ಬಿಕ್ಕಿ ಅತ್ತಿದ್ದರಂತೆ...
ಮುಂಬೈ: ಅಂತಾರಾಷ್ಟ್ರೀಯ ನಟಿ ಪ್ರಿಯಾಂಕಾ ಚೋಪ್ರಾ ಹಾಗೂ ಪರಿಣೀತಿ ಚೋಪ್ರಾ ಅಕ್ಕ-ತಂಗಿಯರೆಂಬುದು ಎಲ್ಲರಿಗೂ ತಿಳಿದ ವಿಚಾರವೇ. ಆದರೆ ಅಕ್ಕನ ಮಾತು ಕೇಳಿ ಪರಿಣಿತಿ ಬಿಕ್ಕಿ ಬಿಕ್ಕಿ ಅತ್ತಿದ್ದರಂತೆ.
ಹೌದು, ಪ್ರಿಯಾಂಕಾ ಚೋಪ್ರಾರಿಗೆ ನಿಕ್ ಜೋನಸ್ ಪ್ರಪೋಸ್ ಮಾಡಿದ ವಿಷಯವನ್ನು ಪ್ರಿಯಾಂಕಾ ತನ್ನ ಆತ್ಮೀಯ ಸಹೋದರಿ ಪರಿಣಿತಿ ಚೋಪ್ರಾಗೆ ಮೊದಲು ತಿಳಿಸಿದ್ದು ಇದು ಮಧ್ಯರಾತ್ರಿಯಲ್ಲಿ ಕಣ್ಣೀರು ಹಾಕುವಂತೆ ಮಾಡಿತ್ತು.
ಇದನ್ನು ಸ್ವತಃ ಪರಿಣಿತಿ ಚೋಪ್ರಾ ಅವರೇ ಹಂಚಿಕೊಂಡಿದ್ದಾರೆ. ನಾನು ಅಂದು ರಾತ್ರಿ ಪ್ರಿಯಾಂಕಾಗೆ ಹುಟ್ಟುಹಬ್ಬದ ವಿಶ್ ಮಾಡಿ ಮಲಗಿದ್ದೆ. ಮೂರು ಗಂಟೆ ರಾತ್ರಿಗೆ ಪ್ರಿಯಾಂಕ ನನಗೆ ನಾಲ್ಕು ಬಾರಿ ಕಾಲ್ ಮಾಡಿದ್ದಳು. ನನಗೆ ಗೊತ್ತಿರಲಿಲ್ಲ.
ಆಮೇಲೆ ಎದ್ದು ರಿಪ್ಲೆ ಮಾಡಿದಾಗ ಅವಳು ನಿಕ್ ತನಗೆ ಪ್ರಪೋಸ್ ಮಾಡಿರುವುದಾಗಿ ಅದನ್ನು ನಾನು ಒಪ್ಪಿಕೊಂಡಿದ್ದು ಈ ವಿಷಯವನ್ನು ನಿನಗೇ ಮೊದಲು ಹೇಳಬೇಕು ಎಂದು ಕಾಲ್ ಮಾಡಿದೆ ಎಂದು ಹೇಳಿದಾಗ ನನಗೆ ಏನು ಹೇಳಬೇಕು ಎಂದು ಗೊತ್ತಾಗಲಿಲ್ಲ. ಆದರೆ ಅವಳ ಮೇಲಿನ ಅಭಿಮಾನಕ್ಕೆ ನನ್ನ ಕಣ್ಣಲ್ಲಿ ನೀರು ಬಂದು ತುಂಬಾ ಅತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.