ನಾನಾ ಪಾಟೇಕರ್ 
ಬಾಲಿವುಡ್

ಲೈಂಗಿಕ ಕಿರುಕುಳ ಆರೋಪ: 'ಹೌಸ್ ಫುಲ್ - 4'ರಿಂದ ಹೊರ ನಡೆದ ನಾನಾ ಪಾಟೇಕರ್

ಲೈಂಗಿಕ ಕಿರುಕುಳ ಆರೋಪದ ಹಿನ್ನೆಲೆಯಲ್ಲಿ ಹೌಸ್ ಫುಲ್ -4 ಚಿತ್ರದ ನಿರ್ದೇಶಕ ಸಜಿದ್ ಖಾನ್ ಅವರು...

ಮುಂಬೈ: ಲೈಂಗಿಕ ಕಿರುಕುಳ ಆರೋಪದ ಹಿನ್ನೆಲೆಯಲ್ಲಿ ಹೌಸ್ ಫುಲ್ -4 ಚಿತ್ರದ ನಿರ್ದೇಶಕ ಸಜಿದ್ ಖಾನ್ ಅವರು ಚಿತ್ರದಿಂದ ಹೊರ ನಡೆದ ನಂತರ ಈಗ ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ಸಹ ಚಿತ್ರದಿಂದ ದೂರ ಉಳಿದಿದ್ದಾರೆ.
2008ರಲ್ಲಿ ಹಾರ್ನ್ ಓಕೆ ಪ್ಲೀಸ್ ಚಿತ್ರದ ಚಿತ್ರೀಕರಣದ ವೇಳೆ ನಾನಾ ಪಾಟೇಕರ್ ಅವರು ನಟಿ ತನುಶ್ರೀ ದತ್ತ ಅವರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿದ್ದಾರೆ.
ನಾನಾ ಸಾಹೇಬ್ ಅವರು ಯಾರಿಗೂ ಯಾವುದೇ ತೊಂದರೆ ಅಥವಾ ಅನಾನುಕೂಲತೆ ಉಂಟು ಮಾಡಲು ಬಯಸುವುದಿಲ್ಲ ಮತ್ತು ಅವರ ವಿರುದ್ಧದ ಸುಳ್ಳು ಆರೋಪಗಳ ಹಿನ್ನಲೆಯಲ್ಲಿ ಅವರು ಚಿತ್ರೀಕರಣದ ಹಂತದಲ್ಲಿರುವ ಹೌಸ್ ಫುಲ್ -4ರಿಂದ ದೂರ ಉಳಿಯುತ್ತಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇನ್ನು ತನುಶ್ರೀ ಆರೋಪವನ್ನು ಸ್ಪಷ್ಟವಾಗಿ ತಳ್ಳಿಹಾಕಿರುವ ನಾನಾ ಪಾಟೇಕರ್ ಅವರು, ನಾನಿದನ್ನು 10 ವರ್ಷಗಳ ಹಿಂದೆಯೇ ಹೇಳಿದ್ದೇನೆ. ಸುಳ್ಳು ಯಾವತ್ತಿದ್ದರೂ ಸುಳ್ಳೇ ಎಂದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಬಹು ಅಂಗಾಂಗ ವೈಫಲ್ಯದಿಂದ ಗಾಯಕಿ ಆಶಾ ಭೋಸ್ಲೆ ನಿಧನ': ಬ್ರೀಚ್ ಕ್ಯಾಂಡಿ ಆಸ್ಪತ್ರೆ ಸ್ಪಷ್ಟನೆ

US-Iran ಶಾಂತಿ ಒಪ್ಪಂದ ವಿಫಲ: ಪಾಕಿಸ್ತಾನ ಕುತಂತ್ರ; ಸೌದಿಗೆ 13,000 Pak ಸೈನಿಕರು, 18 ಯುದ್ಧ ವಿಮಾನ ರವಾನೆ!

40 ಲಕ್ಷ ರೂ ಸಂಬಳ, ದಿಢೀರ್ ಕೆಲಸದಿಂದ ವಜಾ; 1.4 ಕೋಟಿ ಮೌಲ್ಯದ ಮನೆ EMI ತೀರಿಸಲು Rapido ಚಾಲಕನಾದ ಟೆಕ್ಕಿ!

ಇರಾನ್ ಜೊತೆಗಿನ 21 ಗಂಟೆಗಳ ಶಾಂತಿ ಮಾತುಕತೆ; ಡೊನಾಲ್ಡ್ ಟ್ರಂಪ್‌ಗೆ 'ಡಜನ್‌ಗಟ್ಟಲೆ' ಬಾರಿ ಫೋನ್ ಕರೆ ಮಾಡಿದ ಜೆಡಿ ವ್ಯಾನ್ಸ್!

ಪ್ರತಿ ಪಂದ್ಯಕ್ಕೂ ಬನ್ನಿ... ನೀವು ನನ್ನ ಅದೃಷ್ಟ: IPLನಲ್ಲಿ ಶತಕ ಸಿಡಿಸಿ ವಿನಮ್ರ ಮನವಿ ಮಾಡಿದ ಸಂಜು ಸ್ಯಾಮ್ಸನ್, Video!

SCROLL FOR NEXT