ಮುಂಬೈ: ಭಾರತೀಯ ಮಹಿಳೆಯರ ಬಗ್ಗೆ ಪ್ರತಿಯೊಬ್ಬರೂ ಗೌರವ ನೀಡಬೇಕು. ಇದೀಗ ದೇಶಾದ್ಯಂತ ಸದ್ದು ಮಾಡುತ್ತಿರುವ "ಮೀಟೂ" ಅಭಿಯಾನದ ಕುರಿತು ನನ್ನ ಬಗ್ಗೆ ಯಾರೂ ಗೊಂದಲಕ್ಕೀಡಾಗಬಾರದು. ನನ್ನನ್ನು ಈ ವಿಚಾರಕ್ಕೆ ಎಳೆದು ತರಬಾರದು ಎಂದು ಭಾರತದ ಪ್ರಖ್ಯಾತ ಹಿನ್ನೆಲೆ ಗಾಯಕಿ ಲತಾ ಮಂಗೇಶ್ಕರ್ ಹೇಳಿದ್ದಾರೆ.
"ಉದ್ಯೋಗಸ್ಥ ಮಹಿಳೆಗೆ ಅವಳ ಅರ್ಹತೆ, ಯೋಗ್ಯತೆಗೆ ತಕ್ಕ ಗೌರವ ನೀಡುವುದನ್ನು ಎಲ್ಲರೂ ಕಲಿಯಬೇಕು. ಹಾಗೊಮ್ಮೆ ಇದಕ್ಕೆ ಅಡ್ಡಿಪಡಿಸುವವರಿದ್ದರೆ ಅಂತಹವರಿಗೆ ತಕ್ಕ ಪಾಠ ಕಲಿಸಬೇಕು" ಆಂಗ್ಲ ಮಾದ್ಯಮವೊಂದಕ್ಕೆ ಮ್ನೀಡಿದ ಸಂದರ್ಶನದಲ್ಲಿ ಗಾಯಕಿ ಹೇಳಿದ್ದಾರೆ.
"ಇದುವರೆಗೆ ಮೀಟೂ ವಿಚಾರದಲ್ಲಿ ನನ್ನ ತಂಟೆಗೆ ಯಾರೂ ಬಂದಿಲ್ಲ. ಹಾಗೊಮ್ಮೆ ಬಂದರೆ ನಾನು ಸುಮ್ಮನೆ ಕೂರಲಾರೆ" ಅವರು ಹೇಳಿದ್ದಾರೆ.
ಚಿತ್ರರಂಗ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ ಅನುಭವವಾಗುತ್ತದೆ. ಹಾಗೊಮ್ಮೆ ಆದಲ್ಲಿ ತಕ್ಷಣ ದೂರು ದಾಖಲಿಸಬೇಕು, ಇದರಿಂದ ಬೇರೆಯವರಿಗೆ ಎಚ್ಚರಿಕೆ ಕೊಟ್ಟಂತಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.
ಇಂಗ್ಲೀಷ್ ನಲ್ಲಿ ಲತಾ ಜೀವನಚರಿತ್ರೆ
ಲತಾ ಅವರ ಸೋದರಿ ಮೀನಾ ಜೀವನ ಚರಿತ್ರೆ "ಮೋತಿ ತಿಚಿ ಸಾವ್ಲಿ(Mothi Tichi Savl)" ಕುರಿತಂತೆ ಮಾತನಾಡಿದ ಗಾಯಕಿ ನನ್ನ ತಂಗಿಗಿಂತ ಇನ್ನಾರು ನನ್ನನ್ನು ಚೆನ್ನಾಗಿ ಬಲ್ಲರು? ಆಕೆ ನನ್ನ ಬಾಲ್ಯದಿಂದ ನನ್ನ ಜತೆಗಿದ್ದವಳು ಆಕೆಯ ಮಗಳು ರಾಜ್ನಾ ಸಹ ನನ್ನನ್ನು ಅಹಳ ಹಚ್ಚಿಕೊಂಡಿದ್ದಾಳೆ, ಅವಳು ನನ್ನ ಜತೆಗೆ ಅನೇಕ ಕಚೇರಿಗಳಲ್ಲಿ ಪಾಲ್ಗೊಂಡಿದ್ದಾರೆ ಇದೀಗ ಅವರು ಇಂಗ್ಲೀಷ್ ಭಾಷೆಯಲ್ಲಿ ನನ್ನ ಜೀವನ ಚರಿತ್ರೆ ಹೊರತರುತ್ತಿದ್ದಾರೆ.ಅದು ಶೀಘ್ರದಲ್ಲಿಯೇ ಹೊರಬರಲಿದೆ ಎಂದು ಗಾಯಕಿ ಅಭಿಮಾನದಿಂದ ನುಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics