ಬಾಲಿವುಡ್

#MeToo ಸುಳಿಗೆ ಸಿಕ್ಕಿದ ಅನು ಮಲಿಕ್ 'ಇಂಡಿಯನ್ ಐಡಲ್' ನಿಂದ ಔಟ್!

Raghavendra Adiga
ಮುಂಬೈ: ಲೈಂಗಿಕ ದುರುಪಯೋಗದ ಆರೋಪ ಹೊತ್ತಿರುವ ಗಾಯಕ  ಅನು ಮಲಿಕ್ ಇನ್ನು ಮುಂದೆ ಪ್ರಖ್ಯಾತ ರಿಯಾಲಿಟಿ ಶೋ "ಇಂಡಿಯನ್ ಐಡಲ್" ಸೀಸನ್ 10ರ ತೀರ್ಪುಗಾರರಾಗಿರುವುದಿಲ್ಲ. ಈ ಸಂಬಂಧ ಬಾನುವಾರ ಅಧಿಕೃತ ಹೇಳಿಕೆ ಹೊರಬಿದ್ದಿದೆ.
ಸೋನಿ ಎಂಟರ್ಟೈನ್ ಮೆಂಟ್ ಚಾನಲ್ ನ ಹೇಳಿಕೆಯಂತೆ"  "ಅನು ಮಲಿಕ್ ಅವರು ಇನ್ನು ಇಂಡಿಯನ್ ಐಡಲ್ ನ ತೀರ್ಪುಗಾರರ ಸಮಿತಿಯ ಭಾಗವಾಗಿ ಉಳಿದಿಲ್ಲ. ಕಾರ್ಯಕ್ರಮವು ಅದರ ಯೋಜಿತ ವೇಳಾಪಟ್ಟಿಯನ್ನು ಮುಂದುವರಿ.ಯಲಿದ್ದು ವಿಶಾಲ್ ದೊಡ್ಲಾನಿ ಹಾಗೂ ನೇಹಾ ಕಕ್ಕರ್ ಜತೆ ಸೇರಿ ಕಾರ್ಯಕ್ರಮದ ತೀರ್ಪುಗಾರರಾಗಲು ನಾವು ಇದಾಗಲೇ ಭಾರತೀಯ ಸಂಗೀತ ಕ್ಷೇತ್ರದ ಮಹಾ ಸಾಧಕರಲ್ಲಿ ಕೆಲವರಿಗೆ ಆಮಂತ್ರಣ ಕಳಿಸಿದ್ದೇವೆ.ಇಂಡಿಯನ್ ಐಡಲ್ ಸೀಜನ್  10 ರ ಅಸಾಧಾರಣ ಪ್ರತಿಭೆಯನ್ನು ನಿರ್ಣಯಿಸಲು ನಾವು ಅವರಿಗೆ ಅವಕಾಶ ಒದಗಿಸಲಿದ್ದೇವೆ"
ಗಾಯಕರಾದ ಸೋನಾ ಮೊಹಾಪಾತ್ರ ಹಾಗೂ ಶ್ವೇತಾ ಪಂಡಿತ್ ಅನು ಮಲಿಕ್ ವಿರುದ್ಧ ಲೈಂಗಿಕ ಕಿರುಕುಲ ಆರೋಪ ಮಾಡಿದ್ದರು. ಅನು ಮಲಿಕ್ ಓರ್ವ  "ಶಿಶುಕಾಮಿ" ಮತ್ತು "ಲೈಂಗಿಕ ಪರಭಕ್ಷಕ" ಎಂದು ಅವರು ಕರೆದಿದ್ದರು.
ಆದರೆ ಶ್ವೇತಾಗೆ ತಾನು ಯಾವುದೇ ಲೈಂಗಿಕ ಕಿರುಕ್ಕುಳ ನೀಡಿಲ್ಲ ಎಂದು ಮಲಿಕ್ ಹೇಳಿದ್ದು ತಮ್ಮ ಮೇಲಿನ ಆರೋಪವನ್ನು ನಿರಾಕರಿಸಿದ್ದಾರೆ.
"ನಮ್ಮ ಕಕ್ಷಿದಾರರ ವಿರುದ್ಧ ಆರೋಪಗಳೆಲ್ಲಾ ಸುಳ್ಳು. ನಮ್ಮ ಕಕ್ಷಿದಾರರು "ಮೀಟೂ" ಚಳವಳಿಯನ್ನು ಗೌರವಿಸುತ್ತಾರೆ. ಆದರೆ ಇದನ್ನು ಒಬ್ಬರ ವ್ಯಕ್ತಿತ್ವಕ್ಕೆ ಮಸಿ ಬಳಿಯಲಿಕ್ಕಾಗಿ ಬಳಸಿಕೊಳ್ಳುವುದು ಸರಿಯಲ್ಲ" ಮಲಿಕ್ ಪರ ವಕೀಲರಾದ ಜುಲ್ಫಿಕರ್ ಮೆನನ್  ಐಎಎನ್ಎಸ್ ಗೆ ತಿಳಿಸಿದ್ದಾರೆ.
SCROLL FOR NEXT