ಬಾಲಿವುಡ್

ನವೆಂಬರ್ 14, 15ಕ್ಕೆ ದೀಪಿಕಾ-ರಣವೀರ್‌ ಮದುವೆ ಫಿಕ್ಸ್, ಕುಟುಂಬದ ಆಶೀರ್ವಾದ ಎಂದ ಜೋಡಿ

Raghavendra Adiga
ಮುಂಬೈ: ದೀಪಿಕಾ ರಣವೀರ್ ವಿವಾಹದ ದಿನದ ಕುರಿತು ಬಹಳಷ್ಟು ದಿನಗಳಿಂದ ಸಾಕಷ್ಟು ಊಹಾಪೋಹಗಳಿದ್ದು ಇದೀಗ ಅಂತಿಮವಾಗಿ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ತಮ್ಮ ವಿವಾಹ ದಿನವನ್ನು ಘೋಷಿಸಿಕೊಳ್ಳುವ ಮೂಲಕ ಇದಕ್ಕೆ ತೆರೆ ಎಳೆದಿದ್ದಾರೆ.
ನವೆಂಬರ್ 14 ಮತ್ತು 15 ರಂದು ದೀಪಿಕಾ-ರಣವೀರ್ ಹಸೆಮಣೆ ಏರಲಿದ್ದಾರೆ.
"ನಮ್ಮ ಕುಟುಂಬದ ಆಶೀರ್ವಾದದಿಂದ, ನಮ್ಮ ಮದುವೆಯು ನವೆಂಬರ್ 14, 15ರಂದು ನಡೆಯಲಿದೆ.ಎಂಬ ಸುದ್ದಿ ಹಂಚಿಕೊಲ್ಳುವುದಕ್ಕೆ ನನಗೆ ಸಂತಸವಾಗುತ್ತಿದೆ.ನಿಮಗೆ ನಮ್ಮ ಪ್ರೀತಿಯ ಧನ್ಯವಾದಗಳು.ವರ್ಷಗಳ ಕಾಲ ನೀವು ನಮ್ಮ ಮೇಲೆ ತೋರೊದ ಅಭಿಮಾನಕ್ಕೆ ನಾನು ಧನ್ಯ. ಪ್ರೀತಿ ನಿಷ್ಠೆ, ಸ್ನೇಹದಿಂದ ಕೂಡಿದ ಈ ನಂಬಲಾರದ ಜೀವನ ಪ್ರಯಾಣವನ್ನು ಕೈಗೊಳ್ಳುವದಕ್ಕೆ ನಿಮ್ಮ ಆಶೀರ್ವಾದ ಇರಲಿ" ರಣವೀರ್ ಸಿಂಗ್ ಟ್ವೀಟ್ ನಲ್ಲಿ ಹೇಳಿದ್ದಾರೆ.
SCROLL FOR NEXT