ಬಾಲಿವುಡ್

'ಕೆಟ್ಟ ತಾಯಿ' ಬಿಕಿನಿ ತೊಟ್ಟು, ಕೈಯಲ್ಲಿ ವೈನ್ ಗ್ಲಾಸ್, ಬಾಯಲ್ಲಿ ಸಿಗರೇಟು, ಟ್ರೋಲ್‌ಗೆ ಗುರಿಯಾದ ನಟಿ ಸಾಳ್ವೆ!

Vishwanath S
ಹಿಂದಿಯ ಹಿಪ್ ಹಿಪ್ ಹುರ್ರೆ ಮತ್ತು ಲೆಫ್ಟ್ ರೈಟ್ ಲೆಫ್ಟ್ ಶೋಗಳ ಮೂಲಕ ಕಿರುತೆರೆಯಲ್ಲಿ ಸ್ಟಾರ್ ಪಟ್ಟ ಗಳಿಸಿಕೊಂಡಿರುವ ಶ್ವೇತಾ ಸಾಳ್ವೆ ನೆಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. 
ವೈನ್ ಹೀರುತ್ತ, ಸಿಗರೇಟ್ ಸೇದುತ್ತ ಕುಳಿತುಕೊಂಡಿರುವ ಫೋಟೋಗಳನ್ನು ಶ್ವೇತಾ ಸಾಳ್ವೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಸಾಕಷ್ಟು ಟೀಕೆ ವ್ಯಕ್ತವಾಗುತ್ತಿದೆ. 
ಈ ಫೋಟೋವನ್ನು ಕಂಡ ಟ್ವೀಟರಿಗರು ನಿಮಗೆ 2 ವರ್ಷದ ಮಗುವಿದೆ. ಈ ಮಗುವಿನ ಮೇಲೆ ಇದು ಪರಿಣಾಮ ಬೀರುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ. 
ಸಾಳ್ವೆ ಅವರು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ದಿನ ಅಂದರೆ ಹೀಗಿರಬೇಕು. ಹೌದು ನಾನು ಕುಡಿಯುತ್ತೇನೆ, ಸೇದುತ್ತೇನೆ ಇದು ನನ್ನ ಅಸಲಿತನ, ಪ್ರಾಮಾಣಿಕತನ ಎಂದೂ ಮುಂತಾಗಿ ಬರೆದುಕೊಂಡಿದ್ದು ನಟಿ ವಿರುದ್ಧ ಸಾಕಷ್ಟು ಟೀಕೆಗಳು ವ್ಯಕ್ತವಾಗಿದೆ.
SCROLL FOR NEXT