ಚಿತ್ರದ ದೃಶ್ಯ 
ಬಾಲಿವುಡ್

ಆಸ್ಕರ್ ರೇಸ್ ಗೆ ಬಾಂಗ್ಲಾದೇಶದಿಂದ ಇರ್ಫಾನ್ ಖಾನ್ ನಟನೆಯ 'ನೋ ಬೆಡ್ ಆಫ್ ರೋಸಸ್' ಆಯ್ಕೆ!

ಬಾಲಿವುಡ್ ನ ಹೆಸರಾಂತ ನಟ ಇರ್ಫಾನ್ ಖಾನ್ ಅಭಿನಯದ 'ನೋ ಬೆಡ್ ಆಫ್ ...

ವಾಷಿಂಗ್ಟನ್ ಡಿಸಿ (ಯುಎಸ್ಎ): ಬಾಲಿವುಡ್ ನ ಹೆಸರಾಂತ ನಟ ಇರ್ಫಾನ್ ಖಾನ್ ಅಭಿನಯದ 'ನೋ ಬೆಡ್ ಆಫ್ ರೋಸಸ್' ಚಿತ್ರ ಆಸ್ಕರ್ ಪ್ರಶಸ್ತಿ ಸ್ಪರ್ಧೆಗೆ ನಾಮಾಂಕಿತಗೊಂಡಿದೆ.

ವಿದೇಶಿ ಭಾಷೆ ವಿಭಾಗದಲ್ಲಿ ಬಾಂಗ್ಲಾದೇಶ ಆಸ್ಕರ್ ಪ್ರಶಸ್ತಿ ರೇಸ್ ಗೆ  ಈ ಚಿತ್ರವನ್ನು ಆರಿಸಿಕೊಂಡಿದೆ.

ಭಾರತ-ಬಾಂಗ್ಲಾದೇಶ ಜಂಟಿಯಾಗಿ ನಿರ್ಮಿಸಿರುವ ಈ ಚಿತ್ರ 2017ರ ಶಾಂಘೈ ಚಲನಚಿತ್ರೋತ್ಸವ, ಮಾಸ್ಕೊ ಚಿತ್ರೋತ್ಸವ, ವ್ಯಾಂಕೋವರ್ ಚಿತ್ರೋತ್ಸವ ಮತ್ತು ಬುಸನ್ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿದೆ,

ಖ್ಯಾತ ಯಶಸ್ವಿ ಚಿತ್ರ ನಿರ್ಮಾಪಕ ಜಾವೆದ್ ಹಸನ್ ಅವರ ಪಾತ್ರವನ್ನು ಇರ್ಫಾನ್ ಖಾನ್ ಅಭಿನಯಿಸಿದ್ದಾರೆ. ಜಾವೆದ್ ಅವರು ತಮ್ಮ ಪುತ್ರಿಯ ಬಾಲ್ಯದ ಗೆಳೆಯ ಪರ್ನೊ ಮಿಟ್ರಾ ಅವರ ಮೇಲೆ ನಂಬಿಕೆಯಿಟ್ಟು ತಮ್ಮ ಜೀವನದ ಮಧ್ಯ ಭಾಗದಲ್ಲಿ ಎದುರಿಸುವ ಸಮಸ್ಯೆಗಳನ್ನು ಚಿತ್ರದಲ್ಲಿ ತೋರಿಸಲಾಗಿದೆ.

ಬಾಂಗ್ಲಾ ನಟಿ ರೋಕಿಯಾ ಪ್ರಾಚಿ ಇರ್ಫಾನ್ ಅವರ ಪತ್ನಿ ಹಾಗೂ ನುಸ್ರತ್ ಇಮ್ರೊಸ್ ತಿಶಾ ಮಗಳ ಪಾತ್ರವನ್ನು ನಿಭಾಯಿಸಿದ್ದಾರೆ.

91ನೇ ಆಸ್ಕರ್ ಪ್ರಶಸ್ತಿ ಮುಂದಿನ ವರ್ಷ ಫೆಬ್ರವರಿ 24ರಂದು ಪ್ರಕಟವಾಗಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

CJP protest: ಮಮತಾ ಬ್ಯಾನರ್ಜಿ, ನೇಹಾ ಬೋರಾ, ಯೋಗೇಂದ್ರ ಯಾದವ್ ವಶಕ್ಕೆ ಪಡೆದ ಪೊಲೀಸರು

'ದೆಹಲಿ ಪೊಲೀಸರು ಟಾಸ್ ಗೆದ್ದು, ಮೊದಲು ಬ್ಯಾಟಿಂಗ್ ಮಾಡಲಿ': ಪಾಕಿಸ್ತಾನ ಮಾಜಿ ಕ್ರಿಕೆಟಿಗನ ಪೋಸ್ಟ್ ವೈರಲ್​!

ದೇಶವಿರೋಧಿ ಶಕ್ತಿಗಳಿಂದ ಅಶಾಂತಿ ಸೃಷ್ಟಿಗೆ ಯತ್ನ; CJP ಪ್ರತಿಭಟನೆಯಿಂದ ದೂರವಿರಿ: ಮುಸ್ಲಿಮರಿಗೆ ಇಮಾಮ್‌ ಮುಖ್ಯಸ್ಥ ಕರೆ

CEC ಜ್ಞಾನೇಶ್ ಕುಮಾರ್ ವಿರುದ್ಧ ಸಿಜೆಪಿ ಪ್ರತಿಭಟನೆ ವೇಳೆ 2 ಪೊಲೀಸರಿಗೆ ಕಲ್ಲೇಟು!

'ಇಂದಿರಾ ಗಾಂಧಿ ಕೂಡ ಹೀಗೆ ಮಾಡಿರಲಿಲ್ಲ': ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯುವ ಮುನ್ನ ಅಭಿಜಿತ್ ದೀಪ್ಕೆ; ವಿಡಿಯೋ ಹಂಚಿಕೊಂಡ CJP