ರಿಚಾ ಭದ್ರಾ 
ಬಾಲಿವುಡ್

ಒಂದು ರಾತ್ರಿ ಕಾಂಪ್ರಮೈಸ್ ಮಾಡಿಕೋ ಅಂದ ನಿರ್ದೇಶಕನಿಗೆ 'ಕಿಚಡಿ' ನಟಿಯ ದಿಟ್ಟ ಉತ್ತರ!

ಅವಕಾಶ ಬೇಕೆಂದರೆ ನಿರ್ದೇಶಕರ ಕಾಂಪ್ರಮೈಸ್ ಬೇಡಿಕೆಗೆ ಒಪ್ಪಿಕೊಳ್ಳಬೇಕೇ ವಿನಃ ಬೇರೆ ದಾರಿ ಇಲ್ಲ ಎಂದು ಹಲವು ನಟಿಯರು ತಮಗಾದ ಕಾಸ್ಟಿಂಗ್ ಕೌಚ್ ಕುರಿತ ಕಹಿ ಅನುಭವವನ್ನು ಹಂಚಿಕೊಂಡಿದ್ದಾರೆ.

ಮುಂಬೈ: ಅವಕಾಶ ಬೇಕೆಂದರೆ ನಿರ್ದೇಶಕರ ಕಾಂಪ್ರಮೈಸ್ ಬೇಡಿಕೆಗೆ ಒಪ್ಪಿಕೊಳ್ಳಬೇಕೇ ವಿನಃ ಬೇರೆ ದಾರಿ ಇಲ್ಲ ಎಂದು ಹಲವು ನಟಿಯರು ತಮಗಾದ ಕಾಸ್ಟಿಂಗ್ ಕೌಚ್ ಕುರಿತ ಕಹಿ ಅನುಭವವನ್ನು ಹಂಚಿಕೊಂಡಿದ್ದಾರೆ. ಈ ಮಧ್ಯೆ ಕಿರುತೆರೆ ನಟಿಯೊಬ್ಬರು ನಿರ್ದೇಶಕನ ಕಾಂಪ್ರಮೈಸ್ ಗೆ ದಿಟ್ಟ ಉತ್ತರ ನೀಡಿ ಕಿರುತೆರೆಯಿಂದಲೇ ಹೊರಬಂದಿದ್ದಾರೆ. 
ಕಿಚಡಿ, ಬಾ ಬಹು ಔರ್ ಬೇಬಿ ಹಾಗೂ ಮಿಸೆಸ್. ತೆಂಡೂಲ್ಕರ್ ಧಾರವಾಹಿಯಲ್ಲಿ ರಿಚಾ ಭದ್ರ ನಟಿಸಿದ್ದಾರೆ. ಇದೀಗ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು ನಾನು ಕಾಸ್ಟಿಂಗ್ ಕೌಚ್ ಎದುರಿಸಿದ್ದೇನೆ. ಮದುವೆಯಾದ ನಂತರ ಈ ಘಟನೆ ನಡೆದಿದೆ. ಕೆಲಸ ಬೇಕೆಂದರೆ ನನ್ನನ್ನು ಖುಷಿಪಡಿಸು ಎಂದು ನಿರ್ದೇಶಕರೊಬ್ಬರು ಕೇಳಿಕೊಂಡಿದ್ದುರ ಎಂದು ರಿಚಾ ಹೇಳಿದ್ದಾರೆ.
ಮದುವೆ ನಂತರ ನಾನು ಹಲವು ಆಡಿಶನ್ ಗೆ ಹೋದಾಗ ಸಾಕಷ್ಟು ಮಂದಿ ಕಾಂಪ್ರಮೈಸ್ ಮಾಡಿಕೋ ಎಂಬುದಾಗಿ ಹೇಳಿದ್ದರು. ಆದರೆ ಕಾಂಪ್ರಮೈಸ್ ಮಾಡಿಕೊಂಡು ಜೀವನ ಹಾಳು ಮಾಡಿಕೊಳ್ಳುವುದಕ್ಕೆ ನಟಿಸುವುದನ್ನೇ ಬಿಟ್ಟು ಹೊರಬಂದೆ ಎಂದು ಹೇಳಿಕೊಂಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಇಸ್ರೇಲ್‌ ಜೊತೆ ನಮ್ಮ ಸಂಬಂಧ 'ರಕ್ತ ಮತ್ತು ತ್ಯಾಗ'ದಲ್ಲಿ ಬರೆಯಲ್ಪಟ್ಟಿದೆ, ನಾನು ಹುಟ್ಟಿದ ವರ್ಷ ಭಾರತ ಇಸ್ರೇಲ್ ಗೆ ಮಾನ್ಯತೆ ನೀಡಿತು': ಪ್ರಧಾನಿ ಮೋದಿ-Video

'ಭಯೋತ್ಪಾದನೆಯನ್ನು ಯಾವುದೂ ಸಮರ್ಥಿಸಲು ಸಾಧ್ಯವಿಲ್ಲ, ಭಾರತ ಇಸ್ರೇಲ್ ಜೊತೆ ದೃಢವಾಗಿ ನಿಲ್ಲುತ್ತದೆ': ನೆಸ್ಸೆಟ್‌ನಲ್ಲಿ ಪ್ರಧಾನಿ ಮೋದಿ ಭಾಷಣ

'ನ್ಯಾಯಾಂಗದಲ್ಲಿ ಭ್ರಷ್ಟಾಚಾರ' ಪಾಠ: ಸುಪ್ರೀಂ ಕೋರ್ಟ್ ಚಾಟಿ ನಂತರ ವೆಬ್‌ಸೈಟ್‌ನಿಂದ ಪಠ್ಯಪುಸ್ತಕ ತೆಗೆದ NCERT

T20 World Cup 2026: ಶ್ರೀಲಂಕಾ ವಿರುದ್ಧ ನ್ಯೂಜಿಲ್ಯಾಂಡ್ ​ಗೆ 61 ರನ್ ಭರ್ಜರಿ ಗೆಲುವು

India to Israel: ಪ್ರಧಾನಿ ಮೋದಿ ಪಯಣಿಸಿದ Air India ವಿಮಾನ ವಿಶ್ವದಲ್ಲೇ ಅತಿ ಹೆಚ್ಚು ಟ್ರ್ಯಾಕ್: Flightradar24

SCROLL FOR NEXT