ಬಾಲಿವುಡ್

ಉರಿ ಚಿತ್ರದ ನಾಯಕ ವಿಕ್ಕಿ ಕೌಶಲ್‌ಗೆ ಗಂಭೀರ ಗಾಯ ಆಸ್ಪತ್ರೆಗೆ ದಾಖಲು!

Vishwanath S
ಮುಂಬೈ: ಬಾಲಿವುಡ್ ನ ಬ್ಲಾಕ್ ಬಸ್ಟರ್ ಉರಿ ಚಿತ್ರದ ಖ್ಯಾತಿಯ ನಟ ವಿಕ್ಕಿ ಕೌಶಲ್ ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಭಾನು ಪ್ರತಾಪ್ ನಿರ್ದೇಶನದ ಹಾರರ್ ಚಿತ್ರದಲ್ಲಿ ವಿಕ್ಕಿ ಕೌಶಲ್ ಅಭಿಯಿಸುತ್ತಿದ್ದು ಸಾಹಸ ದೃಶ್ಯಗಳ ಚಿತ್ರೀಕರಣ ವೇಳೆ ವಿಕ್ಕಿ ಮೇಲೆ ಬಾಗಿಲು ಬಿದ್ದಿದ್ದರಿಂದ ಅವರ ಗದ್ದದ ಭಾಗದಲ್ಲಿ ಗಾಯವಾಗಿದ್ದು 13 ಹೊಲಿಗೆ ಹಾಕಲಾಗಿದೆ. 
ಕಳೆದ ಐದು ದಿನಗಳಿಂದ ಗುಜರಾತಿನಲ್ಲಿ ಚಿತ್ರದ ಚಿತ್ರೀಕರಣ ನಡೆಯುತ್ತಿತ್ತು. ಇಂದು ಬೆಳಗ್ಗೆ ಈ ಘಟನೆ ನಡೆದಿದ್ದು ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು.
SCROLL FOR NEXT