ಈರುಳ್ಳಿ ಕಿವಿಯೋಲೆ 
ಬಾಲಿವುಡ್

ಪತ್ನಿಗೆ ಈರುಳ್ಳಿ ಕಿವಿಯೋಲೆ ಗಿಫ್ಟ್ ಕೊಟ್ಟ ಪ್ರಖ್ಯಾತ ಬಾಲಿವುಡ್ ನಟ!

ಈರುಳ್ಳಿ ಬೆಲೆ ಗಗನಕ್ಕೇರಿದ ಹಿನ್ನೆಲೆಯಲ್ಲಿ ಬಾಲಿವುಡ್ ಪ್ರಸಿದ್ಧ ನಟರೊಬ್ಬರು ತಮ್ಮ ಪತ್ನಿಗೆ ಈರುಳ್ಳಿ ಕಿವಿಯೋಲ ಗಿಫ್ಟ್ ನೀಡಿದ್ದಾರೆ.

ಮುಂಬೈ: ಈರುಳ್ಳಿ ಬೆಲೆ ಗಗನಕ್ಕೇರಿದ ಹಿನ್ನೆಲೆಯಲ್ಲಿ ಬಾಲಿವುಡ್ ಪ್ರಸಿದ್ಧ ನಟರೊಬ್ಬರು ತಮ್ಮ ಪತ್ನಿಗೆ ಈರುಳ್ಳಿ ಕಿವಿಯೋಲ ಗಿಫ್ಟ್ ನೀಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುವ ಬಾಲಿವುಡ್​ ನಟ ಅಕ್ಷಯ್​ ಕುಮಾರ್​ ಪತ್ನಿ ಟ್ವಿಂಕಲ್​ ಖನ್ನಾ ದೇಶದಲ್ಲಿ ಏನೇ ಬೆಳವಣಿಗೆಯಾದರೂ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡುತ್ತಾರೆ. 

ಕೆಲದಿನಗಳಿಂದ ಗಗನಮುಖಿಯಾಗಿ ಗ್ರಾಹಕರಲ್ಲಿ ಕಣ್ಣೀರು ತರಿಸುತ್ತಿರುವ ಈರುಳ್ಳಿ ಕೂಡ ಅದರಿಂದ ಹೊರತಾಗಿಲ್ಲ ಎಂಬುದಕ್ಕೆ ಟ್ವಿಂಕಲ್​ ಖನ್ನಾ ಪೋಸ್ಟ್​ ಮಾಡಿರುವ ಇನ್​ಸ್ಟಾಗ್ರಾಂ ಫೋಟೋ ಸಾಕ್ಷಿಯಾಗಿದೆ.

ಇತ್ತೀಚೆಗಷ್ಟೇ ಟ್ವಿಂಕಲ್​ ಖನ್ನಾ ಈರುಳ್ಳಿಯಿಂದ ಮಾಡಲ್ಪಟ್ಟಿರುವ ಕಿವಿಯೋಲೆಯ ಫೋಟೋವನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ಅಪ್​ಲೋಡ್​ ಮಾಡಿಕೊಂಡಿದ್ದಾರೆ. ಪತಿ ಅಕ್ಷಯ್​ ಕುಮಾರ್​ ಇತ್ತೀಚೆಗೆ ತಮ್ಮ ನೂತನ ಗುಡ್​ ನ್ಯೂಸ್​(Good Newwz) ಚಿತ್ರದ ಪ್ರಚಾರಕ್ಕಾಗಿ ಕಪಿಲ್​ ಶರ್ಮಾ ಶೋನಲ್ಲಿ ಭಾಗವಹಿಸಿದ್ದರು

ಈ ವೇಳೆ ನಟಿ ಕರೀನಾ ಕಪೂರ್​ ಕೂಡ ಸಾಥ್​ ನೀಡಿದ್ದರು. ಕಾರ್ಯಕ್ರಮದಲ್ಲಿ ಕರೀನಾಗೆ ಒಂದು ಜೊತೆ ಈರುಳ್ಳಿ ಕಿವಿಯೋಲೆಯನ್ನು ನೀಡಲಾಗಿತ್ತು. ದೇಶದಲ್ಲಿ ಈರುಳ್ಳಿ ಗಗನಮುಖಿಯಾಗಿರುವ ಹಿನ್ನೆಲೆಯಲ್ಲಿ ಹಾಸ್ಯದ ದೃಷ್ಟಿಯಿಂದ ಕಿವಿಯೋಲೆಯನ್ನು ಕರೀನಾಗೆ ನೀಡಲಾಗಿತ್ತು.

ಕರೀನಾಗೆ ನೀಡಿದ್ದ ಈರುಳ್ಳಿ ಕಿವಿಯೋಲೆಯನ್ನು ಬಳಿಕ ನಟ ಅಕ್ಷಯ್ ತಮ್ಮ ಮಡದಿ ಟ್ವಿಂಕಲ್​ ಖನ್ನಾಗೆ ತಂದುಕೊಟ್ಟಿದ್ದಾರೆ. 

ಈ ಚಿತ್ರವನ್ನು ಇನ್​​ಸ್ಟಾಗ್ರಾಂನಲ್ಲಿ ಶೇರ್​ ಮಾಡಿ, ಕಪಿಲ್​ ಶರ್ಮಾ ಶೋ ಬಳಿಕ ನನ್ನ ಪತಿ ಬಳಿಬಂದು ಇದರಿಂದ ಕರೀನಾ ಪ್ರಭಾವಿತರಾಗಲಿಲ್ಲ. ನೀನಾದರೂ ಇದನ್ನು ಖಂಡಿತವಾಗಿಯೂ ಎಂಜಾಯ್​ ಮಾಡುತ್ತೀಯ ಅನಿಸಿತು. ಹೀಗಾಗಿ ನಿನಗೆ ತಂದೆ ಎಂದರು. ಕೆಲವೊಂದು ಬಾರಿ ಇದು ಸಣ್ಣ ವಸ್ತು ಎನಿಸಬಹುದು. ಇಂತಹ ಸಿಲ್ಲಿ ವಸ್ತುಗಳು ಕೆಲವೊಮ್ಮೆ ನಿಮ್ಮ ಹೃದಯವನ್ನು ಸ್ಪರ್ಶಿಸಬಹುದು ಎಂದು ಟ್ವಿಂಕಲ್​ ಖನ್ನಾ ಬರೆದುಕೊಂಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT