ಬಾಲಿವುಡ್

11 ವರ್ಷ ಚಿಕ್ಕವಯಸ್ಸಿನ ಅರ್ಜುನ್ ಕಪೂರ್ ಜೊತೆ ಪ್ರೀತಿ.. ಪ್ರೇಮ.. ಪ್ರಣಯ..: ನಟಿ ಮಲೈಕಾ ಅರೋರಾ ಹೇಳಿದ್ದೇನು?

Srinivasamurthy VN
ಮುಂಬೈ: ಸಲ್ಮಾನ್ ಖಾನ್​​​ ಸಹೋದರ ಅರ್ಬಾಜ್​ ಖಾನ್ ಮಾಜಿ ಪತ್ನಿ ಮಲೈಕಾ ಅರೋರಾ ಖಾನ್ ಮತ್ತೆ ಸುದ್ದಿಯಲ್ಲಿದ್ದು, ಇದೇ ಮೊದಲ ಬಾರಿಗೆ ನಟ ಅರ್ಜುನ್ ಕಪೂರ್ ಜೊತೆಗಿನ ಸಂಬಂಧ ಕುರಿತು ಮಾತನಾಡಿದ್ದಾರೆ.
ವಯಸ್ಸಿನಲ್ಲಿ ತನಗಿಂತ 11ವರ್ಷ ಚಿಕ್ಕವನಾದ ಅರ್ಜುನ್​ ಕಪೂರ್​​ ಜೊತೆ ಮಲೈಕಾ ಪ್ರೀತಿಯಲ್ಲಿರುವ ವಿಚಾರಕ್ಕೆ ಸಂಬಂಧಿಸಿದಂತೆ ವ್ಯಾಪಕ ಸುದ್ದಿಗಳು ಹರಿದಾಡುತ್ತಿದ್ದು, ಇವರಿಬ್ಬರೂ ಶೀಘ್ರದಲ್ಲೇ ಮದುವೆಯಾಗ್ತಾರೆ ಅನ್ನೋ ವದಂತಿಯೂ ಹಬ್ಬಿದೆ. ಇತ್ತೀಚೆಗಂತೂ ಈ ಜೋಡಿ ಕೈ ಕೈ ಹಿಡಿದು ಸುತ್ತಾಡುತ್ತಿದ್ದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗಿವೆ. ಅಂತೆಯೇ ನಟ ಅರ್ಜುನ್ ಕಪೂರ್ ಜನ್ಮ ದಿನಕ್ಕೆ ಮಲೈಕಾ ಇನ್ ಸ್ಟಾಗ್ರಾಮ್ ನಲ್ಲಿ ಹಾಕಿದ್ದ ಪೋಸ್ಟ್ ಕೂಡ ವೈರಲ್ ಆಗಿದೆ.
ಈ ಪೋಸ್ಟ್ ಗೆ ಸಂಬಂಧಿಸಿದಂತೆ ಮಲೈಕಾರನ್ನು ವ್ಯಾಪಕ ಟ್ರೋಲ್ ಮಾಡಲಾಗುತ್ತಿದ್ದು, ಇದೀಗ ತಮ್ಮ ವಿರುದ್ಧ ವ್ಯಕ್ತವಾಗುತ್ತಿರುವ ಟ್ರೋಲ್ ಗಳಿಗೆ ಪ್ರತಿಕ್ರಿಯೆ ನೀಡಿರುವ ಮಲೈಕಾ. ತಮ್ಮದೇ ಶೈಲಿಯಲ್ಲಿ ತಿರುಗೇಟು ನೀಡಿದ್ದಾರೆ.
'ನನ್ನ ಮದುವೆ ಮುರಿದುಬಿದ್ದ ಮೇಲೆ ಯಾರೊಂದಿಗಾದರೂ ಇರಬೇಕಾ ಎನ್ನುವ ಬಗ್ಗೆ ನನಗೆ ಸ್ಪಷ್ಟತೆ ಇಲ್ಲ. ಏಕೆಂದರೆ ಮತ್ತೆ ಹಾರ್ಟ್​​​ ಬ್ರೇಕ್​ ಅಗಬಹುದೆಂಬ ಭಯದಿಂದ. ಆದರೆ ನನಗೆ ಮತ್ತೆ ಪ್ರೀತಿ ಬೇಕಿತ್ತು, ಸಂಬಂಧ ಬೇಕಿತ್ತು. ಇದರಿಂದ ನನಗೆ ಆತ್ಮ ವಿಶ್ವಾಸ​ ಬಂದಿದೆ. ಎರಡು ಮನಸ್ಸು ಹಾಗೂ ಹೃದಯ ಕನೆಕ್ಟ್​ ಆದಾಗ ವಯಸ್ಸಿನ ವಿಷಯ ಸುಳಿಯೋದೇ ಇಲ್ಲ. ನನಗೆ ಡೈವೋರ್ಸ್​​ ಆದ್ರೂ ನಿಮಗೆ ಪ್ರಾಬ್ಲಮ್​​, ನಾನು ಮತ್ತೆ ಪ್ರೀತಿಯಲ್ಲಿದ್ದೇನೆ ಅಂದ್ರೂ ನಿಮಗೆ ಪ್ರಾಬ್ಲಮ್​​, ನನ್ನ ಸಂಗಾತಿ ನನಗಿಂತ ಚಿಕ್ಕವನು ಅನ್ನೋದು ನಿಮಗೆ ಪ್ರಾಬ್ಲಮ್​​​​. ಇದೆಲ್ಲಾ ನಿಮಗೆ ಅನ್ನಿಸಿರಬಹುದು. ಆದರೆ ನಿಮ್ಮ ಪ್ರಾಬ್ಲಮ್ ಗಳ ಬಗ್ಗೆ ನಾನು ಕೇರ್​ ಮಾಡಲ್ಲ. ಎಲ್ಲರನ್ನೂ ಖುಷಿ ಪಡಿಸೋಕೆ ನಾನಿಲ್ಲಿ ಇಲ್ಲ, ಅದರಲ್ಲೂ ಸೋಷಿಯಲ್​ ಮೀಡಿಯಾದಲ್ಲಿ, ಗುರುತು-ಹೆಸರು ಇಲ್ಲದವರಿಗಾಗಿಯಂತೂ ಅಲ್ಲ. ದುರಾದೃಷ್ಟವಶಾತ್​​ ಸಮಯದೊಂದಿಗೆ ಮುಂದೆ ಸಾಗದ ಸಮಾಜದಲ್ಲಿ ನಾವಿದ್ದೇವಿ. ವಯಸ್ಸಾದ ಪುರುಷ, ಯುವತಿಯನ್ನ ರೊಮ್ಯಾನ್ಸ್​ ಮಾಡಿದ್ರೆ ಎಲ್ಲರೂ ಓಹೋ ಅಂತಾರೆ. ಆದರೆ ಮಹಿಳೆಗೆ ವಯಸ್ಸಾಗಿದ್ರೆ, ಆಕೆಗೆ ಬೇರೆ ಗತಿಯಿಲ್ಲ ಅಂತಾರೆ. ಹೀಗೆ ಯೋಚನೆ ಮಾಡೋ ಜನರಿಗೆ ನಾನು ಹೇಳೋದು ಒಂದೇ: Take a flying f***” ಎಂದು ಮಲೈಕಾ ಹೇಳಿದ್ದಾರೆ.
SCROLL FOR NEXT