ಅಕ್ಷಯ್ ಕುಮಾರ್, ರೋಹಿತ್ ಶೆಟ್ಟಿ 
ಬಾಲಿವುಡ್

'ಸೂರ್ಯವಂಶಿ'ಚಿತ್ರದ  ಸೆಟ್ ನಲ್ಲಿ ಹೊಡೆದಾಡಿಕೊಂಡ ಅಕ್ಷಯ್ - ರೋಹಿತ್ ಶೆಟ್ಟಿ! 

ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ಹಾಗೂ ನಿರ್ದೇಶಕ ರೋಹಿತ್ ಶೊಟ್ಟಿ ಪರಸ್ಪರ ಹೊಡೆದಾಡಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮುಂಬೈ:ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ಹಾಗೂ ನಿರ್ದೇಶಕ ರೋಹಿತ್ ಶೊಟ್ಟಿ ಪರಸ್ಪರ ಹೊಡೆದಾಡಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಸೂರ್ಯ ವಂಶಿ ಚಿತ್ರದ ಸೆಟ್ ನಲ್ಲಿ  ಅಕ್ಷಯ್ ಕುಮಾರ್ ಹಾಗೂ ರೋಹಿತ್ ಶೆಟ್ಟಿ ಹೊಡೆದಾಡಿಕೊಂಡಿದ್ದು, ಕರಣ್ ಜೋಹರ್  ಜಗಳನ್ನು ಬಿಡಿಸಿದ್ದಾರೆ.  30 ಸೆಕೆಂಡ್ ಗಳ ಈ ವಿಡಿಯೋವನ್ನು ಅಕ್ಷಯ್ ಕುಮಾರ್ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. 

ಕತ್ರಿನಾ ಕೈಫ್ ಕ್ಯಾಮರಾಕ್ಕೆ ಚಾಲನೆ ನೀಡುವ ಮೂಲಕ ರೋಹಿತ್ ಹಾಗೂ ಅಕ್ಷಯ್ ಅವರು ಜಗಳವಾಡುತ್ತಿರುವ ವಿಡಿಯೋವನ್ನು ತೋರಿಸಿದ್ದರು. ಅಕ್ಷಯ್ ಕುಮಾರ್ ಈ ವಿಡಿಯೋವನ್ನು ಹಂಚಿಕೊಂಡು ಅದಕ್ಕೆ ಬ್ರೇಕಿಂಗ್ ನ್ಯೂಸ್ ಎಂದು ಟ್ವೀಟ್ ಮಾಡಿದ್ದಾರೆ.

ಆದರೆ, ಇದು ಸಂಪೂರ್ಣ ಸುಳ್ಳಿನ ಸುದ್ದಿ ಆಗಿದ್ದು, ಅಕ್ಷಯ್ ಕುಮಾರ್ ತಮಾಷೆಗಾಗಿ ರೋಹಿತ್ ಶೆಟ್ಟಿ ಜಗಳವಾಡಿರುವ ವಿಡಿಯೋ ಇದಾಗಿದೆ. ಸೂರ್ಯವಂಶಿ ಚಿತ್ರವನ್ನ ಕರಣ್ ಜೋಹರ್ ಹಾಗೂ ರೋಹಿತ್ ಶೆಟ್ಟಿ ನಿರ್ಮಿಸುತ್ತಿದ್ದು, ಮುಂದಿನ ವರ್ಷ ಮಾರ್ಚ್ 27 ರಂದು ಬಿಡುಗಡೆ ಆಗಲಿದೆ.ಬಾಲಿವುಡ್ ನಟರಾದ ರಣವೀರ್ ಸಿಂಗ್ ಹಾಗೂ ಅಜಯ್ ದೇವಗನ್ ಚಿತ್ರದಲ್ಲಿ ಅಭಿನಯಿಸುವ ಸಾಧ್ಯತೆ ಇದೆ 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?