ಗೌರಿಖಾನ್, ಅಬ್ ರಾಮ್ ಖಾನ್, ಶಾರೂಖ್ ಖಾನ್ 
ಬಾಲಿವುಡ್

'ಇಸ್ಲಾಂ ಧರ್ಮ ಅಷ್ಟು ದುರ್ಬಲವಾಗಿಲ್ಲ, ಶಾರೂಖ್ ತಿಲಕವನ್ನಟ್ಟಿಕೊಂಡಿದ್ದನ್ನು ಸಮರ್ಥಿಸಿದ ಶಬಾನಾ ಆಜ್ಮಿ

ದೀಪಾವಳಿ ಪ್ರಯುಕ್ತ ಹಣೆಗೆ ತಿಲಕವನ್ನಿಟ್ಟುಕೊಂಡಿದ್ದ ಬಾಲಿವುಡ್ ಕಿಂಗ್ ಖಾನ್ ಶಾರೂಖ್ ಪೋಟೋ ಗೆ ಸಾಮಾಜಿಕ ಜಾಲತಾಣಗಳಲ್ಲಿ  ಭಾರೀ ವಿರೋಧ ವ್ಯಕ್ತವಾಗಿತ್ತು. 

ಮುಂಬೈ: ದೀಪಾವಳಿ ಪ್ರಯುಕ್ತ ಹಣೆಗೆ ತಿಲಕವನ್ನಿಟ್ಟುಕೊಂಡಿದ್ದ ಬಾಲಿವುಡ್ ಕಿಂಗ್ ಖಾನ್ ಶಾರೂಖ್ ಪೋಟೋ ಗೆ ಸಾಮಾಜಿಕ ಜಾಲತಾಣಗಳಲ್ಲಿ  ಭಾರೀ ವಿರೋಧ ವ್ಯಕ್ತವಾಗಿತ್ತು. 

ಅಂತಹವರನ್ನು ಕ್ರೋಧಾತ್ಮಕ ಇಸ್ಲಾಂವಾದಿಗಳು ಎಂದು ಬಾಲಿವುಡ್ ನಟಿ ಶಬಾನಾ ಅಜ್ಮಿ ಕರೆಯುವ ಮೂಲಕ ಶಾರೂಖ್ ಖಾನ್ ತಿಲಕವನ್ನಟ್ಟಿಕೊಂಡಿದ್ದನ್ನು ಸಮರ್ಥಿಸಿಕೊಂಡಿದ್ದಾರೆ.

ತಿಲಕವನ್ನಟ್ಟಿಕೊಂಡಿದ್ದಕ್ಕೆ  ನಕಲಿ ಮುಸ್ಲಿಂ ಎನ್ನುವವರು ಕ್ರೋಧಾತ್ಮಕ ಇಸ್ಲಾಂವಾದಿಗಳಾಗಿದ್ದಾರೆ. ಸುಂದರ ಸಂಪ್ರದಾಯವಿರುವ ಭಾರತದಲ್ಲಿ ಇಸ್ಲಾಂ ಧರ್ಮವೇನೂ ದುರ್ಬಲವಾಗಿಲ್ಲ. ಗಂಗಾ, ಯುಮುನೆಯಲ್ಲಿ ಭಾರತದ ಸೌಂದರ್ಯವಿದೆ ಎಂದು ಶಾಬಾನಾ ಆಜ್ಮಿ ಟ್ವೀಟ್ ಮಾಡಿದ್ದಾರೆ.

ಪತ್ನಿ ಗೌರಿಖಾನ್ , ಪುತ್ರ ಅಬ್ ರಾಮ್ ಖಾನ್ ಜೊತೆಗೆ ಹಣೆಗೆ ತಿಲಕವನ್ನಿಟ್ಟುಕೊಂಡಿರುವ ಪೋಟೋವನ್ನು ಭಾನುವಾರ ಶಾರೂಖ್ ಖಾನ್ ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡಿದ್ದರು.ದೀಪಾವಳಿ ಎಲ್ಲರ ಬಾಳಲ್ಲಿ ಬೆಳಗಲಿ, ಸುಖ, ಸಂತೋಷವನ್ನುಂಟುಮಾಡಲಿ ಎಂದು ಶಾರೂಖ್ ಖಾನ್ ಶುಭ ಕೋರಿದ್ದರು.ಈ ಪೋಸ್ಟ್ ನಂತರ ಶಾರೂಖ್ ಖಾನ್ ಟ್ರೋಲ್ ಗೆ ಒಳಗಾಗಿದ್ದರು.

ಶಾರೂಖ್ ಖಾನ್  ಈ ರೀತಿಯಲ್ಲಿ ಟ್ರೋಲ್ ಗೆ ಗುರಿಯಾದದ್ದು ಇದೇ ಮೊದಲೇನಲ್ಲಾ,  ಹಿಂದು ಹಬ್ಬಗಳ ಸಂದರ್ಭಗಳಲ್ಲಿ ಅವರನ್ನು ಟೀಕಿಸಲಾಗುತಿತ್ತು. ಗಣೇಶ ಹಬ್ಬದ ಸಂದರ್ಭದಲ್ಲಿ ಗಣೇಶ ವಿಗ್ರಹಕ್ಕೆ ಪೂಜೆ ಸಲ್ಲಿಸುತ್ತಿದ್ದ ಶಾರೂಖ್ ಖಾನ್ ಪೋಟೋಗೆ ಭಾರಿ ಟೀಕೆಗಳು ವ್ಯಕ್ತವಾಗಿದ್ದವು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ಪಾಠ: ಕೇಂದ್ರ ಕ್ಷಮೆಯಾಚಿಸುತ್ತಿದ್ದಂತೆ NCERT ಪಠ್ಯ ಪುಸ್ತಕ ಬ್ಯಾನ್, ಪ್ರತಿಗಳನ್ನು ವಶಕ್ಕೆ ಪಡೆಯಲು ಸುಪ್ರೀಂ ಸೂಚನೆ

'ನಿಮ್ಮ ಭಾಷಣ ನಾಚಿಕೆಯಿಲ್ಲದೆ ಸಮರ್ಥನೆ ಮಾಡಿಕೊಂಡಂತೆ ಇತ್ತು': 1947ರ ಐನ್ ಸ್ಟೈನ್ ನೆಹರೂಗೆ ಬರೆದ ಪತ್ರ ಉಲ್ಲೇಖಿಸಿ Modi ಟೀಕಿಸಿದ ಕಾಂಗ್ರೆಸ್

ರಿಯಲ್ ಲೈಫ್‌ನಲ್ಲೂ ಒಂದಾದ ರೀಲ್ ಜೋಡಿ: ತೆಲುಗು ಸಂಪ್ರದಾಯದಂತೆ ರಶ್ಮಿಕಾ–ವಿಜಯ್ ವಿವಾಹ, ಸಂಜೆ ಕೊಡವ ಸಂಪ್ರದಾಯದಲ್ಲಿ ಮತ್ತೊಂದು ಸಮಾರಂಭ

ಅಮ್ಮಾ....ಐ ಲವ್ ಯೂ ಸೋ ಮಚ್: ಕುವೈತ್ ನಲ್ಲಿದ್ದ ತಾಯಿಗೆ ಕೊನೆಯ ಸಂದೇಶ ಕಳಿಸಿ ಯೂಟ್ಯೂಬರ್ ಆತ್ಮಹತ್ಯೆ

ಇನ್ನೂ ನನಸಾಗಿಲ್ಲ ದಶಕಗಳ ಕನಸು: ಹಾಸನ ವಿಮಾನ ನಿಲ್ದಾಣಕ್ಕೆ ಸಿಗದ ರೆಕ್ಕೆ, ಯೋಜನೆಗೆ ಅಡ್ಡಿಯಾಗಿದೆ ಸಂಪನ್ಮೂಲ-ರಾಜಕೀಯ ಇಚ್ಛಾಶಕ್ತಿ ಕೊರತೆ..!

SCROLL FOR NEXT