ವಿದ್ಯಾ ಬಾಲನ್ 
ಬಾಲಿವುಡ್

ವಿದ್ಯಾ ಬಾಲನ್ ಗೆ ತಮ್ಮ ಪತಿ ಜೊತೆ ಕೆಲಸ ಮಾಡೋಕೆ ಇಷ್ಟವಿಲ್ಲವಂತೆ, ಯಾಕೆ ಗೊತ್ತ?

ಬಾಲಿವುಡ್ ಬಹುಬೇಡಿಕೆಯ ನಟಿ ವಿದ್ಯಾ ಬಾಲನ್, ತಮ್ಮ ಪತಿ ಹಾಗೂ ಚಿತ್ರ ನಿರ್ಮಾಪಕ ಸಿದ್ಧಾರ್ಥ್ ರಾಯ್ ಕಪೂರ್ ಅವರೊಂದಿಗೆ ಒಂದೇ ಚಿತ್ರದಲ್ಲಿ ಕಾರ್ಯನಿರ್ವಹಿಸಲು ಇಷ್ಟವಿಲ್ಲ ಎಂದು ಹೇಳಿದ್ದಾರೆ.

ಮುಂಬೈ: ಬಾಲಿವುಡ್ ಬಹುಬೇಡಿಕೆಯ ನಟಿ ವಿದ್ಯಾ ಬಾಲನ್, ತಮ್ಮ ಪತಿ ಹಾಗೂ ಚಿತ್ರ ನಿರ್ಮಾಪಕ ಸಿದ್ಧಾರ್ಥ್ ರಾಯ್ ಕಪೂರ್ ಅವರೊಂದಿಗೆ ಒಂದೇ ಚಿತ್ರದಲ್ಲಿ ಕಾರ್ಯನಿರ್ವಹಿಸಲು ಇಷ್ಟವಿಲ್ಲ ಎಂದು ಹೇಳಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ವಿದ್ಯಾ ನನಗೆ ಚಿತ್ರದ ಕುರಿತು ಯಾವುದಾದರೂ ಸಮಸ್ಯೆ ಎದುರಾದರೇ, ನಿರ್ದೇಶಕ ಹಾಗೂ ನಿರ್ಮಾಪಕರೊಂದಿಗೆ ಜಗಳ ಮಾಡುತ್ತೇನೆ. ಅದೇ ಪತಿ ಸಿದ್ಧಾರ್ಥ್ ಅವರೊಂದಿಗೆ ಜಗಳ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ.

ಮೊದಲಿನಿಂದಲೂ ಚಿತ್ರಕ್ಕಾಗಿ ನಮ್ಮಿಬ್ಬರ ಸಂಬಂಧ ಹಾಳಾಗಬಾರದು ಎಂಬುದು ಅಭಿಲಾಷೆ. ಸಿದ್ಧಾರ್ಥ್  ಹಾಗೂ ನನಗೆ ಒಂದೇ ಚಿತ್ರಕಥೆಗಳು ಇಷ್ಟವಾಗಿದ್ದು ಉಂಟು. ಆದರೆ, ಒಟ್ಟಿಗೆ ಕೆಲಸ ಮಾಡಬಾರದೆಂದು ನಿರ್ಧರಿಸಿ ಅನೇಕ ಬಾರಿ ಇಬ್ಬರಲ್ಲಿ ಒಬ್ಬರೂ ಚಿತ್ರದಿಂದ ಹಿಂದೆ ಸರಿದೇವು. ಅಲ್ಲದೇ, ಪತಿಯ ಜೊತೆ ವೇತನದ ಕುರಿತು ಮಾತುಕತೆ ನಡೆಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

ಇತ್ತೀಚೆಗಷ್ಟೇ ವಿದ್ಯಾಬಾಲನ್ ಅಭಿನಯದ 'ಮಿಷನ್ ಮಂಗಲ್' ಚಿತ್ರ ಬಿಡುಗಡೆಗೊಂಡಿದ್ದು ಪ್ರೇಕ್ಷಕ ವರ್ಗ ಅವರ ನಟನೆಗೆ ಭಾರಿ ಮೆಚ್ಚುಗೆ ವ್ಯಕ್ತಪಡಿಸುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕರ್ನಾಟಕದ ಬರ ಪರಿಸ್ಥಿತಿ ಪರಿಶೀಲನೆಗೆ ಕೇಂದ್ರದ 3 ತಂಡ: ಜಿ ಪರಮೇಶ್ವರ್

Indian Stock Market ಮಹಾ ಕುಸಿತ; Sensex 1,124 ಅಂಕ ಕುಸಿತ, ಗಂಟೆಯಲ್ಲಿ ಹೂಡಿಕೆದಾರರ 5 ಲಕ್ಷ ಕೋಟಿ ರೂ ನಷ್ಟ!

Video: ಮುಂಬೈ ವಿಮಾನ ನಿಲ್ದಾಣದಲ್ಲಿ ಸಾರ್ವಜನಿಕವಾಗಿಯೇ ವಿದ್ಯಾ ಬಾಲನ್ - ಸಿದ್ಧಾರ್ಥ್ ಲಿಪ್​ಲಾಕ್! ವಿಡಿಯೋ ವೈರಲ್

ಬಸ್‌ನ ಮೆಟ್ಟಿಲುಗಳಿಂದ ದಿಢೀರ್ ಜಾರಿಬಿದ್ದ ರೋಹಿತ್ ಶರ್ಮಾ; ಅಭಿಮಾನಿಗಳಲ್ಲಿ ಆತಂಕ, Video

ರೂ. 2,000ಕ್ಕಿಂತ ಹೆಚ್ಚಿನ UPI ವಹಿವಾಟಿಗೆ ಶುಲ್ಕ: ತಡೆ ನೀಡಲು ಸುಪ್ರೀಂಕೋರ್ಟ್ ನಕಾರ, ಕೇಂದ್ರ ಸರ್ಕಾರಕ್ಕೆ ನೋಟಿಸ್..!