ರಿಷಿ ಕಪೂರ್ 
ಬಾಲಿವುಡ್

ಬಾಲಿವುಡ್ ಹಿರಿಯ ನಟ ರಿಷಿಕಪೂರ್ ನಿಧನ: ಗಣ್ಯರ ಕಂಬನಿ, ಸಂತಾಪ

 ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಬಾಲಿವುಡ್ ಹಿರಿಯ ನಟ ರಿಷಿ ಕಪೂರ್ ಮುಂಬೈನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. 67 ವರ್ಷದ ರಿಷಿಕಪೂರ್ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಅವರ ಸಾವಿನ ವಿಷಯವನ್ನು ಅವರ ಸಹೋದರ ರಣದೀರ್ ಕಪೂರ್ ಖಚಿತ ಪಡಿಸಿದ್ದಾರೆ.

ಮುಂಬಯಿ: ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಬಾಲಿವುಡ್ ಹಿರಿಯ ನಟ ರಿಷಿ ಕಪೂರ್ ಮುಂಬೈನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

67 ವರ್ಷದ ರಿಷಿಕಪೂರ್ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಅವರ ಸಾವಿನ ವಿಷಯವನ್ನು ಅವರ ಸಹೋದರ ರಣದೀರ್ ಕಪೂರ್ ಖಚಿತ ಪಡಿಸಿದ್ದಾರೆ.

ಕುಟುಂಬದ ಕಾರ್ಯಕ್ರಮ ನಿಮಿತ್ತ ದಿಲ್ಲಿಗೆ ಹೋದಾಗ ಅನಾರೋಗ್ಯಕ್ಕೆ ತುತ್ತಾಗಿದ್ದರು. ಆಗ ತಮಗೆ ಇನ್ಫೆಕ್ಷನ್ ಆಗಿತ್ತು ಎಂದು ತಿಳಿಸಿದ್ದರು. ಮುಂಬೈಗೆ ಮರಳಿದ ಬಳಿಕ ವೈರಲ್ ಜ್ವರದ ಕಾರಣ ಮತ್ತೊಮ್ಮೆ ಆಸ್ಪತ್ರೆಗೆ ದಾಖಲಾಗಿ ಬಹಳ ಬೇಗ ಬಿಡುಗಡೆಯಾಗಿದ್ದರು.

ಸುಮಾರು ಒಂದು ವರ್ಷದ ಹಿಂದೆ ಯುಎಸ್‍ನಲ್ಲಿ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆದಿದ್ದ ಅವರು ಬಳಿಕ ಸ್ವದೇಶಕ್ಕೆ ಆಗಮಿಸಿದ್ದರು. ಫೆಬ್ರವರಿಯಲ್ಲಿ ಎರಡು ಸಲ ಆಸ್ಪತ್ರೆಗೆ ದಾಖಲಾಗಿದ್ದರು. ರಿಷಿ ಕಪೂರ್​ ಸಾವಿಗೆ ಗಣ್ಯಾತಿ ಗಣ್ಯರು ಸಂತಾಪ ಸೂಚಿಸಿದ್ದಾರೆ. ರಿಷಿ ಕಪೂರ್ ಆಪ್ತ ಅಮಿತಾಭ್​ ಬಚ್ಚನ್​ ತೀವ್ರ ಬೇಸರಗೊಂಡಿರುವುದಾಗಿ ಟ್ವಿಟ್ಟರ್​ನಲ್ಲಿ ಹಂಚಿಕೊಂಡಿದ್ದಾರೆ.

7 ವರ್ಷದ ರಿಷಿ ಕಪೂರ್​ಗೆ ಕ್ಯಾನ್ಸರ್​ನಿಂದ ಬಳಲುತ್ತಿದ್ದರು. ಬುಧವಾರ ಅವರ ಆರೋಗ್ಯದಲ್ಲಿ ಏರುಪೇರು ಕಂಡಿದ್ದರಿಂದ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ರಿಷಿ ಅವರಿಗೆ​ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು, ಹೀಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಿಮ್ಮ ಭಾಷಣ ನಾಚಿಕೆಯಿಲ್ಲದೆ ಸಮರ್ಥನೆ ಮಾಡಿಕೊಂಡಂತೆ ಇತ್ತು': 1947ರ ಐನ್ ಸ್ಟೈನ್ ನೆಹರೂಗೆ ಬರೆದ ಪತ್ರ ಉಲ್ಲೇಖಿಸಿ Modi ಟೀಕಿಸಿದ ಕಾಂಗ್ರೆಸ್

ಶಿವಮೊಗ್ಗ: 10 ಕಿಲೋ ವ್ಯಾಟ್ FM ಟ್ರಾನ್ಸ್ಮಿಟರ್ ಕೇಂದ್ರ ಉದ್ಘಾಟನೆ! ಆಕಾಶವಾಣಿ, ದೂರದರ್ಶನ ಅಭಿವೃದ್ದಿಗೆ 2,500 ಕೋಟಿ ಹಣ ವೆಚ್ಚ- ಡಾ. ಎಲ್ ಮುರುಗನ್

'ಇಸ್ರೇಲ್‌ ಜೊತೆ ನಮ್ಮ ಸಂಬಂಧ 'ರಕ್ತ ಮತ್ತು ತ್ಯಾಗ'ದಲ್ಲಿ ಬರೆಯಲ್ಪಟ್ಟಿದೆ, ನಾನು ಹುಟ್ಟಿದ ವರ್ಷ ಭಾರತ ಇಸ್ರೇಲ್ ಗೆ ಮಾನ್ಯತೆ ನೀಡಿತು': ಪ್ರಧಾನಿ ಮೋದಿ-Video

ಅಮ್ಮಾ....ಐ ಲವ್ ಯೂ ಸೋ ಮಚ್: ಕುವೈತ್ ನಲ್ಲಿದ್ದ ತಾಯಿಗೆ ಕೊನೆಯ ಸಂದೇಶ ಕಳಿಸಿ ಯೂಟ್ಯೂಬರ್ ಆತ್ಮಹತ್ಯೆ

ಹಗರಣ ರಹಿತ ಹುದ್ದೆ ಭರ್ತಿಗೆ ಕ್ರಮ: ಯುವಕರು ಧೈರ್ಯವಾಗಿರಿ, ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ, ಸದ್ಯದಲ್ಲೇ ಸಂದೇಶ ನೀಡುತ್ತೇವೆ; ಡಿ ಕೆ ಶಿವಕುಮಾರ್

SCROLL FOR NEXT