ಬಾಲಿವುಡ್ ನಟ ವರುಣ್ ಧವನ್ ಗೆ ಕೋವಿಡ್-19 ಪಾಸಿಟಿವ್
ರಾಜ್ ಮೆಹ್ತಾ ನಿರ್ಮಾಣದ 'ಜಗ್ ಜಗ್ ಜೀಯೋ' ಚಿತ್ರದ ಶೂಟಿಂಗ್ ಗಾಗಿ ಚಂಡೀಗಢಕ್ಕೆ ತೆರಳಿದ್ದ ಬಾಲಿವುಡ್ ನಟ ವರುಣ್ ಧವನ್ ಗೆ ಕೋವಿಡ್-19 ಪಾಸಿಟಿವ್ ದೃಢಪಟ್ಟಿದೆ.
ಮುಂಬೈ: ರಾಜ್ ಮೆಹ್ತಾ ನಿರ್ಮಾಣದ 'ಜಗ್ ಜಗ್ ಜೀಯೋ' ಚಿತ್ರದ ಶೂಟಿಂಗ್ ಗಾಗಿ ಚಂಡೀಗಢಕ್ಕೆ ತೆರಳಿದ್ದ ಬಾಲಿವುಡ್ ನಟ ವರುಣ್ ಧವನ್ ಗೆ ಕೋವಿಡ್-19 ಪಾಸಿಟಿವ್ ದೃಢಪಟ್ಟಿದೆ.
ಗ್ರೂಪ್ ವಿಡಿಯೋ ಕರೆ ಮೂಲಕ ತನ್ನ ಸ್ನೇಹಿತರೊಂದಿಗೆ ಸಂವಹನ ನಡೆಸುತ್ತಿರುವ ಚಿತ್ರದೊಂದಿಗೆ ಅವರ ಆರೋಗ್ಯದ ಮಾಹಿತಿಯನ್ನು ಇನ್ಸಾಟಾಗ್ರಾಮ್ ನಲ್ಲಿ ಹಂಚಿಕೊಂಡಿರುವ ವರುಣ್ ಧವನ್, ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಕೆಲಸಕ್ಕೆ ಮರಳುತ್ತಿದ್ದಂತೆ ಕೋವಿಡ್ -19 ದೃಢಪಟ್ಟಿರುವುದಾಗಿ ಅವರು ಪೋಸ್ಟ್ ಮಾಡಿದ್ದಾರೆ.
ಶೂಟಿಂಗ್ ಮಾಡುವಾಗ ಎಲ್ಲಾ ಸುರಕ್ಷಿತ ಕ್ರಮಗಳನ್ನು ಅನುಸರಿಸಲಾಗಿದೆ ಎಂದು ಧವನ್ ಭರವಸೆ ನೀಡಿದ್ದು, ಪ್ರತಿಯೊಬ್ಬರು ಹೆಚ್ಚುವರಿ ಜಾಗರೂಕತೆಯಿಂದ ಇರುವಂತೆ ಹೇಳಿದ್ದಾರೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.