ಶಕೀಲಾ ಸಿನಿಮಾ ಪೋಸ್ಟರ್ 
ಬಾಲಿವುಡ್

ರೀಚಾ ಚಡ್ಡಾ ಅಭಿನಯದ 'ಶಕೀಲಾ' ಕ್ರಿಸ್ಮಸ್ ಗೆ ಬಿಡುಗಡೆ!

ರೀಚಾ ಚಡ್ಡಾ ಮತ್ತು ಪಂಕಜ್ ತ್ರಿಪಾಠಿ ನಟನೆಯ ಶಕೀಲಾ ಸಿನಿಮಾ ಕ್ರಿಸ್ಮಸ್ ಗೆ ಬಿಡುಗಡೆಯಾಗಲಿದೆ ಎಂದು ಚಿತ್ರ ನಿರ್ಮಾಪಕರು ತಿಳಿಸಿದ್ದಾರೆ.

ನವದೆಹಲಿ: ರೀಚಾ ಚಡ್ಡಾ ಮತ್ತು ಪಂಕಜ್ ತ್ರಿಪಾಠಿ ನಟನೆಯ ಶಕೀಲಾ ಸಿನಿಮಾ ಕ್ರಿಸ್ಮಸ್ ಗೆ ಬಿಡುಗಡೆಯಾಗಲಿದೆ ಎಂದು ಚಿತ್ರ ನಿರ್ಮಾಪಕರು ತಿಳಿಸಿದ್ದಾರೆ.

ಇಂದ್ರಜಿತ್ ನಿರ್ದೇಶನಕ ಶಕೀಲಾ ಸಿನಿಮಾ ಕ್ರಿಸ್ಮಸ್ ಗೆ ಹಲವು ಭಾಷೆಗಳಲ್ಲಿ ತೆರೆ ಕಾಣಲಿದೆ ಎಂದು ಸಿನಿಮಾ ವಿಮರ್ಶಕ ತರಣ್ ಆದರ್ಶ್ ಟ್ವಿಟ್ಟರ್ ನಲ್ಲಿ ತಿಳಿಸಿದ್ದಾರೆ.

90ರ ದಶಕದ ಮತ್ತು 2000ನೇ ವರ್ಷದಲ್ಲಿ ವಯಸ್ಕರ ಸಿನಿಮಾಳ ಮೂಲಕ ಪಡ್ಡೆ ಹುಡುಗರ ನಿದ್ದೆಗೆಡಿಸಿದ ಶಕೀಲಾ ಸಿನಿಮಾ ಟೀಸರ್ ಅನ್ನು ಚಿತ್ರ ತಂಡ ಈ ಮೊದಲು ರಿಲೀಸ್ ಮಾಡಿತ್ತು.

ಹಿಂದಿ ಸಂಗೀತದಿಂದ ಫಿಲ್ಮ್ ಸೆಟ್ ವರೆಗೂ ಶಕೀಲಾ ಸಿನಿಮಾದ ಟ್ರೈಲರ್ ವಿದ್ಯಾಬಾಲನ್ ಅವರ ಡರ್ಟಿ ಪಿಕ್ಚರ್  ನೆನಪಿಸುತ್ತದೆಯೇ ಹೊರತು ತನ್ನದೇ ಆದ ಛಾಪು ಮೂಡಿಸುವುದಕ್ಕೆ ವಿಫಲಗೊಂಡಿದೆ.

ಸಿನಿಮಾದ ನಿರ್ದೇಶಕರು ಹೇಳುವಂತೆ ಶಕೀಲ ಸಿನಿಮಾ, ದಕ್ಷಿಣ ಭಾರತದ ಖ್ಯಾತ ನಟಿ ಶಕೀಲಾ ಅವರ ಜೀವನದ ಘಟನೆಗಳನ್ನು ಆಧರಿಸಿ ಮಾಡಿರುವ ಸಿನಿಮಾ ಆಗಿದೆ. ರಿಚಾ ಛಢಾ ಸಿನಿಮಾದಲ್ಲಿ ಶಕೀಲಾ ಪಾತ್ರವನ್ನು ನಿರ್ವಹಿಸಿದ್ದರೆ, ಪಂಕಂಜ್ ತ್ರಿಪಾಠಿ ನಾಯಕನ ಪಾತ್ರದಲ್ಲಿ ನಟಿಸಿದ್ದಾರೆ.

ಸಿನಿಮಾದಲ್ಲಿ ಶಕೀಲ ತನ್ನ ಕುಟುಂಬ ಸದಸ್ಯರಿಂದಲೇ ಎದುರಿಸಿದ ಸಮಸ್ಯೆಗಳು, ಮೋಸ, ಸಿನಿಮಾ ರಂಗದಲ್ಲಿ ಪ್ರಭಾವಿಗಳು ಅವರ ಸಿನಿಮಾಗಳನ್ನು ನಿಷೇಧಿಸಿದ್ದು ಇವೆಲ್ಲಾ ಕಷ್ಟಗಳನ್ನು ತೋರಿಸಲಾಗಿದೆ. ಈ ಸಿನಿಮಾ ಸಿಂಹಳೀಯ ಮತ್ತು ಚೈನೀಸ್ ಸೇರಿದಂತೆ ಹಲವಾರು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

30 ನಿಮಿಷಗಳಲ್ಲಿ ಹಿಂದಕ್ಕೆ ಹೋಗಿ: ಶಾಂತಿ ಮಾತುಕತೆ ಮಧ್ಯೆ ಹಾರ್ಮುಜ್'ಗೆ ನುಗ್ಗಿದ ಅಮೆರಿಕದ Destroyer ಯುದ್ಧನೌಕೆಗೆ ಇರಾನ್ ಎಚ್ಚರಿಕೆ!

"ಇರಾನ್ ದೊಡ್ಡ ಮಟ್ಟದಲ್ಲಿ ಸೋಲುತ್ತಿದೆ": ಮಾತುಕತೆ ಮುಕ್ತಾಯಕ್ಕೂ ಮುನ್ನ ಟ್ರಂಪ್ ಘೋಷಣೆ

IPL 2026: ಸ್ಯಾಮ್ಸನ್ ಬ್ಯಾಟಿಂಗ್ ಅಬ್ಬರ; DC ವಿರುದ್ಧ CSK ಗೆ 23 ರನ್ ಗಳ ಭರ್ಜರಿ ಜಯ

ಖ್ಯಾತ ಗಾಯಕಿ ಆಶಾ ಭೋಸ್ಲೆಗೆ ಹೃದಯಾಘಾತ: ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲು

IPL 2026: ಚೆನ್ನೈ ಪರ ಸಂಜು ಸ್ಯಾಮ್ಸನ್ ಸ್ಫೋಟಕ ಬ್ಯಾಟಿಂಗ್; MS ಧೋನಿ ದಾಖಲೆ ಪುಡಿ; ದಿಗ್ಗಜರ ಗುಂಪಿಗೆ ಸೇರ್ಪಡೆ

SCROLL FOR NEXT