ಮುಂಬೈ: ಛಪಾಕ್ ಸಿನಿಮಾ ಪ್ರಚಾರದಲ್ಲಿ ತೊಡಗಿರುವ ದೀಪಿಕಾ ಪಡುಕೋಣೆಯ ವಿರುದ್ಧ ಟ್ವೀಟರ್ ನಲ್ಲಿ ಆಕ್ರೋಶ ಭುಗಿಲೆದ್ದಿದೆ.
ಮೊದಲಿಗೆ ಹಲ್ಲೆಗೊಳಗಾದ ಜೆಎನ್ ಯು ವಿದ್ಯಾರ್ಥಿಗಳನ್ನು ಭೇಟಿ ಮಾಡಿದ್ದಕ್ಕೆ ದೀಪಿಕಾ ಸುದ್ದಿಯಾಗಿದ್ದರು. ಈ ಬೆನ್ನಲ್ಲೆ ಮತ್ತೊಂದು ಕಾರಣಕ್ಕೆ ದೀಪಿಕ ಪಡುಕೋಣೆ ಸುದ್ದಿಯಾಗಿದ್ದಾರೆ.
ಲಕ್ಷ್ಮೀ ಅಗರ್ವಾಲ್ ಎಂಬ ಹುಡುಗಿಯ ಮೇಲೆ ಆಸಿಡ್ ದಾಳಿಯಾದ ಕಥೆಯನ್ನು ಛಪಾಕ್ ಹೆಸರಿನಲ್ಲಿ ಸಿನಿಮಾ ಮಾಡಲಾಗಿದೆ. ನೈಜ ಘಟನೆಯಲ್ಲಿ ಈ ಕೃತ್ಯದ ಆರೋಪಿಯ ಹೆಸರು ನದೀಮ್ ಖಾನ್. ಆದರೆ ಸಿನಿಮಾದಲ್ಲಿ ಆರೋಪಿಯ ಪಾತ್ರಕ್ಕೆ ರಾಜೇಶ್ ಶರ್ಮ ಎಂಬ ಹೆಸರಿಡಲಾಗಿದೆ ಎಂಬುದು ಟ್ವೀಟಿಗರ ಆಕ್ರೋಶ.