ಬಾಲಿವುಡ್

'ಮಾರುಕಟ್ಟೆಯಲ್ಲಿ ಆ್ಯಸಿಡ್ ಸಿಗುವುದು ಇಷ್ಟೊಂದು ಸುಲಭವೇ?': ಛಪಾಕ್ ಚಿತ್ರತಂಡದಿಂದ ರಿಯಾಲಿಟಿ ಚೆಕ್ 

Sumana Upadhyaya

ನವದೆಹಲಿ: ಛಪಾಕ್ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದಂತೆ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ವಿಡಿಯೊ ಒಂದನ್ನು ಶೇರ್ ಮಾಡಿದ್ದಾರೆ. ಸುಪ್ರೀಂ ಕೋರ್ಟ್ ಆಸಿಡ್ ಮಾರಾಟಕ್ಕೆ ನಿಷೇಧ ಹೇರಿದ್ದರೂ ಕೂಡ ಮಾರುಕಟ್ಟೆಯಲ್ಲಿ ಎಷ್ಟು ಸುಲಭವಾಗಿ ಆ್ಯಸಿಡ್ ಸಿಗುತ್ತದೆ ಎಂಬ ಬಗ್ಗೆ ತಮ್ಮ ತಂಡ ನಡೆಸಿದ ಪ್ರಯೋಗವೊಂದನ್ನು ಹಂಚಿಕೊಂಡಿದ್ದಾರೆ.


ಆ್ಯಸಿಡ್ ದಾಳಿ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ ಅದನ್ನು ತಡೆಗಟ್ಟುವ ಸಂಬಂಧ ಛಪಾಕ್ ತಂಡ ನಿರತವಾಗಿದೆ. ದೀಪಿಕಾ ಪಡುಕೋಣೆ ಐಜಿಟಿವಿ ವಿಡಿಯೊವನ್ನು ಶೇರ್ ಮಾಡಿದ್ದು ಅದರಲ್ಲಿ ಖರೀದಿಸಬೇಡಿ, ಮಾರಾಟ ಮಾಡಲೂ ಬೇಡಿ, ಛಪಾಕ್ ನ ಒಂದು ಸಾಮಾಜಿಕ ಪ್ರಯೋಗ, ಆ್ಯಸಿಡ್ ಹಲವು ಜೀವಗಳನ್ನು, ಅವರ ಕನಸುಗಳನ್ನು ಹೊಸಕಿ ಹಾಕಿದೆ. ಹಲವರ ಭವಿಷ್ಯಕ್ಕೆ ಕುತ್ತುಂಟುಮಾಡಿದೆ ಎಂದು ಬರೆದುಕೊಂಡಿದ್ದಾರೆ.


5 ನಿಮಿಷ 27 ಸೆಕೆಂಡ್ ಗಳ ವಿಡಿಯೊವನ್ನು ಶೇರ್ ಮಾಡುತ್ತಿದ್ದಂತೆ ದೀಪಿಕಾ ಪಡುಕೋಣೆ ಮತ್ತು ಅವರ ತಂಡದ ಪ್ರಯತ್ನಕ್ಕೆ ಅನೇಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಚಿತ್ರತಂಡದವರು ಹಿಡನ್ ಕ್ಯಾಮರಾ ಇಟ್ಟುಕೊಂಡು ನಗರದ ಸುತ್ತಮುತ್ತ ಅಂಗಡಿಗಳಿಗೆ ಹೋಗಿ ಆ್ಯಸಿಡ್ ಖರೀದಿಸಿದ್ದಾರೆ.


ದೀಪಿಕಾ ಅವರೇ ಈ ಸಮಯದಲ್ಲಿ ಇಡೀ ಘಟನೆಗಳನ್ನು ತಮ್ಮ ಕಾರಿನಲ್ಲಿ ಕುಳಿತುಕೊಂಡು ನಿಗಾ ವಹಿಸಿದ್ದು ಜನರು ಎಷ್ಟು ಸುಲಭವಾಗಿ ಅಂಗಡಿಗಳಿಗೆ ಹೋಗಿ ಆ್ಯಸಿಡ್ ಖರೀದಿಸುತ್ತಾರೆ ಎಂದು ತೋರಿಸಿದ್ದಾರೆ.ಈ ಸಮಯದಲ್ಲಿ ಒಬ್ಬರೇ ಒಬ್ಬ ಅಂಗಡಿ ಮಾಲಿಕ ಆ್ಯಸಿಡ್ ಕೇಳಿಕೊಂಡು ಬಂದವರಲ್ಲಿ ಐಡಿ ಕಾರ್ಡು ತೋರಿಸಿ ಇಲ್ಲದಿದ್ದರೆ ಆ್ಯಸಿಡ್ ಕೊಡುವುದಿಲ್ಲ ಎಂದು ಹೇಳಿದ್ದಾರೆ. ಒಂದೇ ದಿನದಲ್ಲಿ 24 ಬಾಟಲ್ ಆ್ಯಸಿಡ್ ಮಾರಾಟವಾಗಿದ್ದು ಕಂಡೆನು ಎಂದು ದೀಪಿಕಾ ಹೇಳಿಕೊಂಡಿದ್ದಾರೆ.


ಛಪಾಕ್ ಸಿನೆಮಾ ಆ್ಯಸಿಡ್ ದಾಳಿ ಸಂತ್ರಸ್ತೆ ಲಕ್ಷ್ಮಿ ಅಗರ್ವಾಲ್ ಜೀವನ ಕಥೆಯಾದರಿಸಿದ್ದು. ಇದರಲ್ಲಿನ ಪ್ರಮುಖ ಪಾತ್ರ ಮಾಲತಿ ಎಂಬುದಾಗಿದ್ದು ಅದನ್ನು ದೀಪಿಕಾ ಪಡುಕೋಣೆ ನಿರ್ವಹಿಸಿದ್ದಾರೆ.

SCROLL FOR NEXT