ದೀಪಿಕಾ ಪಡುಕೋಣೆ-ನಾಸಿರುದ್ದೀನ್ ಶಾ 
ಬಾಲಿವುಡ್

ಜೆಎನ್ಯು ಭೇಟಿ: ದೀಪಿಕಾ ಪಡುಕೋಣೆಯಂತೆ ಗಂಡೆದೆ ತೋರಬೇಕು ಎಂದು ನಟ ನಾಸೀರುದ್ದೀನ್ ಶಾ

ಬಾಲಿವುಡ್  ಹಿರಿಯ ನಟ, ನಿರ್ದೇಶಕ ನಾಸೀರುದ್ದೀನ್ ಷಾ, ನಟಿ ದೀಪಿಕಾ ಪಡುಕೋಣೆ ಅವರ ಧೈರ್ಯವನ್ನು ಕೊಂಡಾಡಿದ್ದಾರೆ.

ಮುಂಬೈ: ಬಾಲಿವುಡ್  ಹಿರಿಯ ನಟ, ನಿರ್ದೇಶಕ ನಾಸೀರುದ್ದೀನ್ ಷಾ, ನಟಿ ದೀಪಿಕಾ ಪಡುಕೋಣೆ ಅವರ ಧೈರ್ಯವನ್ನು ಕೊಂಡಾಡಿದ್ದಾರೆ.

ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ನಾಸೀರುದ್ದೀನ್ ಹಲವು ವಿಷಯಗಳ ಕುರಿತು ಸಾಕಷ್ಟು ಚರ್ಚಿಸಿದ್ದಾರೆ. ಈ ಸಂದರ್ಭದಲ್ಲಿ ಅವರು, ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆ, ದೆಹಲಿ ಜೆಎನ್ ಯು ವಿದ್ಯಾರ್ಥಿಗಳ ಬಗ್ಗೆಯೂ ಸಾಕಷ್ಟು ಮಾತನಾಡಿದ್ದಾರೆ. ಆದೇ ರೀತಿ ಜೆಎನ್‌ಯುಗೆ ಭೇಟಿ ನೀಡಿ ಪ್ರತಿಭಟನೆ  ನಡೆಸುತ್ತಿದ್ದ   ವಿದ್ಯಾರ್ಥಿಗಳಿಗೆ ಬೆಂಬಲ ವ್ಯಕ್ತಪಡಿಸಿದ ದೀಪಿಕಾ ಪಡುಕೋಣೆ ಅವರನ್ನು ಅಭಿನಂದಿಸಿದ್ದಾರೆ.

ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ನಡೆದ ಹಿಂಸಾತ್ಮಕ ದಾಳಿಯ ನಂತರ ದೀಪಿಕಾ ಪಡುಕೋಣೆ  ಅಲ್ಲಿಗೆ  ತೆರಳಿ ಗಾಯಗೊಂಡ  ವಿದ್ಯಾರ್ಥಿಗಳನ್ನು ಭೇಟಿಮಾಡಿದ್ದರು.  ಅದೊಂದು  ಅಸಾಧಾರಣ  ಧೈರ್ಯದ  ಕ್ರಮ  ಎಂದು ನಾಸೀರುದ್ದೀನ್ ಷಾ, ಬಣ್ಣಿಸಿದ್ದಾರೆ. ಜೆಎನ್‌ಯು ಭೇಟಿಯ ನಂತರ ದೀಪಿಕಾ ಪಡುಕೋಣೆ ಅವರ ಜನಪ್ರಿಯತೆಯೇನು  ಕಡಿಮೆಯಾಗಿಲ್ಲ ಎಂದು  ಶಾ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?