ರಣವೀರ್ ಸಿಂಗ್, ದೀಪಿಕಾ ಪಡುಕೋಣೆ 
ಬಾಲಿವುಡ್

ಮೈಸೂರು ಪಾಕ್, ಪೊಟ್ಯಾಟೊ ಚಿಪ್ಸ್ ತರದೆ ವಾಪಾಸ್ ಬರಬೇಡ: ಪತಿಗೆ ಆರ್ಡರ್ ಮಾಡಿದ ದೀಪಿಕಾ

ಮೈಸೂರು ಪಾಕ್, ಪೊಟ್ಯಾಟೊ ಚಿಪ್ಸ್ ತರದೆ ವಾಪಾಸ್ ಬರದಂತೆ ಬಾಲಿವುಡ್ ನಟಿ, ಕನ್ನಡತಿ ದೀಪಿಕಾ ಪಡುಕೋಣೆ ತಮ್ಮ ಪತಿ ರಣವೀರ್ ಸಿಂಗ್ ಸಿಂಗ್ ಅವರಿಗೆ ವಿಶೇಷ ಬೇಡಿಕೆ ಇಟ್ಟಿರುವ ಸಂಗತಿ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

ಮುಂಬೈ: ಮೈಸೂರು ಪಾಕ್, ಪೊಟ್ಯಾಟೊ ಚಿಪ್ಸ್ ತರದೆ ವಾಪಾಸ್ ಬರದಂತೆ ಬಾಲಿವುಡ್ ನಟಿ, ಕನ್ನಡತಿ ದೀಪಿಕಾ ಪಡುಕೋಣೆ ತಮ್ಮ ಪತಿ ರಣವೀರ್ ಸಿಂಗ್ ಸಿಂಗ್ ಅವರಿಗೆ ವಿಶೇಷ ಬೇಡಿಕೆ ಇಟ್ಟಿರುವ ಸಂಗತಿ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

 83  ಚಿತ್ರದ  ಪೋಸ್ಟರ್ ಬಿಡುಗಡೆಗಾಗಿ   ಚೆನ್ನೈಗೆ ತೆರಳಿದ್ದ  ಪತಿ ರಣವೀರ್ ಸಿಂಗ್  ಅವರಿಗೆ,  ಶ್ರೀ ಕೃಷ್ಣದಿಂದ 1 ಕೆಜಿ ಮೈಸೂರು ಪಾಕ್, 21/2 ಕೆಜಿ  ಪೊಟ್ಯಾಟೊ ಚಿಪ್ಸ್ ತರದೇ ವಾಪಾಸ್ ಬರಬೇಡಿ ಎಂದು ದೀಪಿಕಾ ಪಡುಕೋಣೆ ಮಾಡಿರುವ ಬೇಡಿಕೆ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆದಿದೆ.

ದೀಪಿಕಾ ಪಡುಕೋಣೆ ನಂತರ  83 ಚಿತ್ರದ ನಿರ್ದೇಶಕ ಕಬೀರ್ ಖಾನ್ ಅವರ ಪತ್ನಿ ಮಿಮಿ ಮಥೂರ್ ಕೂಡಾ ಇದೇ  ರೀತಿಯ ಆರ್ಡರ್ ಮಾಡಿದ್ದಾರೆ.

83 ಸಿನಿಮಾ, 1983ರಲ್ಲಿ ವಿಶ್ವಕಪ್ ಗೆದ್ದ ಕಪಿಲ್ ದೇವ್ ನಾಯಕತ್ವದ ಟೀಂ ಇಂಡಿಯಾ ಆಧಾರಿತ ಚಿತ್ರವಾಗಿದ್ದು, 1983ರಲ್ಲಿ ವಿಶ್ವಕಪ್ ಗೆದ್ದ ನಿಜವಾದ ಟೀಂ ಇಂಡಿಯಾದ ಪೋಟೋವೊಂದನ್ನು ರಣವೀರ್ ಸಿಂಗ್ ಶೇರ್ ಮಾಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕ್ಸಿ ಜಿನ್‌ಪಿಂಗ್ ಜತೆ ಮಾತುಕತೆ: ಗಡಿಯಾಚೆಗಿನ ಭಯೋತ್ಪಾದನೆ ಬಗ್ಗೆ ಪ್ರಧಾನಿ ಮೋದಿ ಪ್ರಸ್ತಾಪ

ಜನರನ್ನು ಮೂರ್ಖರನ್ನಾಗಿಸುವವನೇ ಶ್ರೇಷ್ಠ ನಾಯಕ: ಕೇಂದ್ರ ಸಚಿವ ನಿತಿನ್ ಗಡ್ಕರಿ

ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಶ್ರಮಿಸುವ 'ಎಜುಕೇಟ್ ಗರ್ಲ್ಸ್' NGOಗೆ ಪ್ರತಿಷ್ಠಿತ ಮ್ಯಾಗ್ಸೆಸೆ ಪ್ರಶಸ್ತಿ

Rain Alert: ರಾಜ್ಯಾದ್ಯಂತ ಮುಂದಿನ 5 ದಿನ ಭಾರಿ ಮಳೆ; ಬೆಂಗಳೂರು, ಕರಾವಳಿ ಕರ್ನಾಟಕಕ್ಕೆ ಹವಾಮಾನ ಇಲಾಖೆ ಎಚ್ಚರಿಕೆ!

ಬೆಂಗಳೂರು: ಪಿಜಿಯಲ್ಲಿ ಮಲಗಿದ್ದ ಯುವತಿಗೆ ಲೈಂಗಿಕ ಕಿರುಕುಳ, ನಗದು ದೋಚಿ ಪರಾರಿ!

SCROLL FOR NEXT