ಬಾಲಿವುಡ್

ಸುಶಾಂತ್ ಸಿಂಗ್ ಕೊನೆಯ ಚಿತ್ರ 'ದಿಲ್ ಬೆಚರಾ'ದ ಮೊದಲ ಹಾಡು ಬಿಡುಗಡೆ

Srinivas Rao BV

ಚೆನ್ನೈ: ಡಿಸ್ನಿ+ ಹಾಟ್ ಸ್ಟಾರ್ ಸುಶಾಂತ್ ಸಿಂಗ್ ಕೊನೆಯ ಚಿತ್ರ 'ದಿಲ್ ಬೆಚರಾ'ದ ಟೈಟಲ್ ಟ್ರ್ಯಾಕ್ ಹಾಗೂ ಮೊದಲ ಹಾಡನ್ನು ಹಂಚಿಕೊಂಡಿದೆ. ಈ ಟೈಟಲ್ ಟ್ರ್ಯಾಕ್ ನಲ್ಲಿ ಸುಶಾಂತ್ ಸಿಂಗ್ ಕಾಲೇಜಿನ ಸ್ಟಾರ್ ವಿದ್ಯಾರ್ಥಿಯಾಗಿ ಕಾಣಿಸಿಕೊಂಡಿದ್ದು, ಎಆರ್ ರೆಹಮಾನ್ ಹಾಡಿರುವ ಹಾಡಿಗೆ ಹೆಜ್ಜೆ ಹಾಕಿದ್ದು ತಮ್ಮ ಪ್ರೇಮ ನಿವೇದನೆ ಮಾಡಿಕೊಳ್ಳುವುದಾಗಿದೆ. 

ದಿಲ್ ಬೆಚರಾ ಹಾಡನ್ನು ಒಂದೇ ಟೇಕ್ ನಲ್ಲಿ ಪೂರ್ಣಗೊಳಿಸಲಾಗಿದೆ ಎಂಬ ವದಂತಿಯೂ ಹಬ್ಬಿದೆ. ದಿಲ್ ಬೆಚಾರದ ನಿರ್ದೇಶಕ ಮುಖೇಶ್ ಛಬ್ರ ಈ ಬಗ್ಗೆ ಟ್ವೀಟ್ ನಲ್ಲಿ ಮಾಹಿತಿ ನೀಡಿದ್ದು, ಸುಶಾಂತ್ ಚಿತ್ರೀಕರಣದಲ್ಲಿ ತೊಡಗಿದ್ದ ಕೊನೆಯ ಹಾಡು ಇದಾಗಿತ್ತು, ಫರ್ಹಾ ಖಾನ್ ನೃತ್ಯ ನಿರ್ದೇಶನ ಮಾಡಿದ್ದರು. ಒಂದು ದಿನದ ಅಭ್ಯಾಸದ ನಂತರ ಚಿತ್ರೀಕರಣ ಮಾಡಲಾಗಿತ್ತು, ಒಂದೇ ಟೇಕ್ ನಲ್ಲಿ ಈ ಹಾಡನ್ನು ಸಂಪೂರ್ಣವಾಗಿ ಚಿತ್ರೀಕರಿಸಲಾಗಿತ್ತು ಎಂದು ಹೇಳಿದ್ದಾರೆ.

ಈ ಹಾಡಿನ ಚಿತ್ರೀಕರಣದ ನಂತರ ಫರಾಹ್ ಖಾನ್ ಅವರಿಂದ ಸುಶಾಂತ್ ಮನೆಯಲ್ಲೇ ತಯಾರಿಸಿದ್ದ ಅಡುಗೆ ಬಯಸಿದ್ದರು ಎನ್ನಲಾಗಿದೆ. ಡಿಸ್ನಿ+ಹಾಟ್ ಸ್ಟಾರ್ ಸುಶಾಂತ್ ಸಿಂಗ್ ಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಸಿನಿಮಾವನ್ನು ಪ್ರಸಾರ ಮಾಡಲಿದೆ.

SCROLL FOR NEXT