ರಂಜನ್ ಸೆಹಗಲ್ 
ಬಾಲಿವುಡ್

36ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ ರಂಜನ್ ಸೆಹಗಲ್

ಸರ್ಬಜಿತ್ ಸಿನಿಮಾ ಖ್ಯಾತಿಯ ನಟ ರಂಜನ್ ಸೆಹಗಲ್  ನಿಧನರಾಗಿದ್ದಾರೆ. ಪಂಜಾಬಿ ಮತ್ತು ಹಿಂದಿ ಸಿನಿಮಾಗಳಲ್ಲಿ ರಂಜನ್ ಗುರುತಿಸಿಕೊಂಡಿದ್ದ ರಂಜನ್ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದರು.

ಮುಂಬಯಿ: ಸರ್ಬಜಿತ್ ಸಿನಿಮಾ ಖ್ಯಾತಿಯ ನಟ ರಂಜನ್ ಸೆಹಗಲ್  ನಿಧನರಾಗಿದ್ದಾರೆ. ಪಂಜಾಬಿ ಮತ್ತು ಹಿಂದಿ ಸಿನಿಮಾಗಳಲ್ಲಿ ರಂಜನ್ ಗುರುತಿಸಿಕೊಂಡಿದ್ದ ರಂಜನ್ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದರು.

ರಣ್‍ದೀಪ್ ಹೂಡಾ ಮತ್ತು ಐಶ್ವರ್ಯಾ ರೈ ಬಚ್ಚನ್ ನಟನೆಯ ಸರ್ಬಜಿತ್ ಚಿತ್ರದಲ್ಲಿ ರಂಜನ್ ನಟಿಸಿದ್ದರು. ಪಂಜಾಬಿಯ ಹಲವು ಚಿತ್ರಗಳಲ್ಲಿ ನಟಿಸಿದ್ದ ರಂಜನ್ ಗೆ 2017ರಲ್ಲಿ ಬಿಡುಗಡೆಯಾಗಿದ್ದ ‘ಮಾಹಿ ಎನ್‍ಆರ್‍ಐ’ ಮತ್ತು 2014ರಲ್ಲಿ ತೆರೆಕಂಡಿದ್ದ ‘ಯಾರ್ ದಾ ಕ್ಯಾಚಪ್’ ಹೆಸರು ತಂದು ಕೊಟ್ಟಿದ್ದವು.

ಹಿಂದಿ ಅಪರಾಧ ಸೀರಿಯಲ್ ಕ್ರೈಮ್ ಪಟ್ರೋಲ್ ಮತ್ತು ಸಾವಧಾನ್ ಇಂಡಿಯಾದ ಕಾಣಿಸಿಕೊಂಡಿದ್ದ ಈ ನಟ ಜುಲೈ 11 ರಂದು ಚಂಡೀಗಡದಲ್ಲಿ ಕೊನೆಯುಸಿರೆಳೆದರು. ಪಂಜಾಬ್ ಮೂಲದವರಾದ ರಂಜನ್ ಚಂಡೀಗಢನಲ್ಲಿ ವಾಸವಾಗಿದ್ದರು.

ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಥಿಯಟರ್ ಸ್ಟಡಿಯಲ್ಲಿ ಮಾಸ್ಟರ್ ಡಿಗ್ರಿ ಪಡೆದುಕೊಂಡು ಮುಂಬೈಗೆ ಬಂದಿದ್ದರು. ರಿಶತೋ ಸೇ ಬಡಿ ಪ್ರಥಾ, ತುಮ್ ದೇನಾ ಸಾಥ್ ಮೇರಾ ಧಾರವಾಹಿಗಳಲ್ಲಿ ಅವಕಾಶ ಪಡೆದುಕೊಂಡಿದ್ದರು. ತದನಂತರ ಕ್ರೈಂ ಪೆಟ್ರೋಲ್ ಮತ್ತು ಸಾವಧಾನ್ ಇಂಡಿಯಾ ಸಂಚಿಕೆಗಳಲ್ಲಿ ರಂಜನ್ ನಟಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

CM ಆಗುವ ಕಾಲ ಹತ್ತಿರ ಬಂದಿದೆ ಎಂದು ನಾನು ಹೇಳಿಲ್ಲ: ಸುದ್ದಿ ತಿರುಚಿ ಪ್ರಸಾರ ಮಾಡಿದರೆ ಮಾನನಷ್ಟ ಮೊಕದ್ದಮೆ ಅನಿವಾರ್ಯ; ಡಿ ಕೆ ಶಿವಕುಮಾರ್

ಸಮಸ್ತ ಜನರಿಗೆ ಸುಗಮ ಆಡಳಿತ, ಶುದ್ಧ ನೀರಿನ ಪೂರೈಕೆ: ಸ್ವಚ್ಚತೆ- ಸಂಚಾರ ವ್ಯವಸ್ಥೆಗೆ ಸಿಎಂ ಸಿದ್ದರಾಮಯ್ಯ ಕಟ್ಟಪ್ಪಣೆ

ಸಿದ್ದರಾಮಯ್ಯ ಮೇಲೆ ತೂಗುಗತ್ತಿ: ಅಧಿಕಾರದಲ್ಲಿ ಉಳಿಯಲು ಸಂಪುಟ ಪುನಾರಚನೆ ಕಸರತ್ತು; ಬಿಹಾರ-ಕೇರಳ ಚುನಾವಣೆಯತ್ತ ಡಿಕೆಶಿ ಚಿತ್ತ!

ವೀರೇಂದ್ರ ಪಪ್ಪಿ ಕರ್ಮಕಾಂಡ ನೋಡುತ್ತಿದ್ದರೆ CM- DCM ಇನ್ಯಾವ ಪರಿ ಲೂಟಿ ಮಾಡಿ ಹೈಕಮಾಂಡ್ ಗೆ ಕಪ್ಪ ನೀಡುತ್ತಿರಬೇಡಾ?

SCROLL FOR NEXT