ಲಾಕ್ ಡೌನ್ ವೇಳೆ ತಂಗಿಗಾಗಿ ಚಾರ್ಟರ್ ವಿಮಾನ ಬುಕ್ ಮಾಡಿಲ್ಲ; ಸುಳ್ಳು ವರದಿಗಳ ವಿರುದ್ಧ ಕಾನೂನು ಕ್ರಮ: ಅಕ್ಷಯ್ ಕುಮಾರ್
ಕೊರೋನಾವೈರಸ್ ಲಾಕ್ ಡೌನ್ ಮಧ್ಯೆ ಸಹೋದರಿ ಅಲ್ಕಾ ಬಾಟಿಯಾ ಮತ್ತು ಆಕೆಯ ಮಗುವಿಗಾಗಿ ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ವಿಶೇಷ ಚಾರ್ಟರ್ ವಿಮಾನವೊಂದನ್ನು ಬುಕ್ ಮಾಡಿದ್ದಾರೆ ಎನ್ನುವ ಸುದ್ದಿ ಹರಿದಾಡುತಿತ್ತು.
ಮುಂಬೈ: ಕೊರೋನಾವೈರಸ್ ಲಾಕ್ ಡೌನ್ ಮಧ್ಯೆ ಸಹೋದರಿ ಅಲ್ಕಾ ಬಾಟಿಯಾ ಮತ್ತು ಆಕೆಯ ಮಗುವಿಗಾಗಿ ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ವಿಶೇಷ ಚಾರ್ಟರ್ ವಿಮಾನವೊಂದನ್ನು ಬುಕ್ ಮಾಡಿದ್ದಾರೆ ಎನ್ನುವ ಸುದ್ದಿ ಹರಿದಾಡುತಿತ್ತು.
ಇದನ್ನು ನಿರಾಕರಿಸಿರುವ ಅಕ್ಷಯ್ ಕುಮಾರ್, ಭಾನುವಾರ ರಾತ್ರಿ ಟ್ವೀಟ್ ಮಾಡುವ ಮೂಲಕ ಇವೆಲ್ಲಾ ಸುಳ್ಳು ವರದಿಗಳು, ತಾವು ಸಹೋದರಿ ಹಾಗೂ ಆಕೆಯ ಮಗುವಿಗಾಗಿ ಯಾವುದೇ ರೀತಿಯ ವಿಮಾನವನ್ನು ಕಾಯ್ದಿರಿಸಿರಲಿಲ್ಲ ಎಂಬುದನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಸುಳ್ಳು ಸುದ್ದಿಗಳನ್ನು ಹಬ್ಬಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಲಾಕ್ ಡೌನ್ ಜಾರಿಯಾದ ನಂತರ ತಮ್ಮ ತಂಗಿ ಎಲ್ಲಿಯೂ ಪ್ರವಾಸ ಮಾಡಿಲ್ಲ, ಆಕೆಗೆ ಕೇವಲ ಒಂದು ಮಗುವಿಗೆ ಎಂದು 52 ವರ್ಷದ ಅಕ್ಷಯ್ ಕುಮಾರ್ ಟ್ವೀಟ್ ಮಾಡಿದ್ದಾರೆ. ಆದರೆ, ಆಕೆಗೆ ಎರಡು ಮಗು ಇರುವುದಾಗಿ ವರದಿ ಮಾಡಲಾಗಿತ್ತು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.