ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಾಲಿವುಡ್

ಒಂದು ತಿಂಗಳ ಕರೆಂಟ್ ಬಿಲ್ ನೋಡಿ ಶಾಕ್ ಆದ ನಟಿ ತಾಪ್ಸಿ ಪನ್ನು!

ಕೊರೋನಾ ಸಂಕಷ್ಟದಿಂದಾಗಿ ಹಲವು ಬಾಲಿವುಡ್ ನಟ-ನಟಿಯರು ಮನೆಯಲ್ಲೇ ಉಳಿದುಕೊಂಡಿದ್ದಾರೆ. ಈ ಮಧ್ಯೆ ಬಾಲಿವುಡ್ ನಟಿ ತಾಪ್ಸಿ ಪನ್ನು ಒಂದು ತಿಂಗಳ ಕರೆಂಟ್ ಬಿಲ್ ನೋಡಿ ಶಾಕ್ ಆಗಿದ್ದಾರೆ.

ತಾಪ್ಸಿ ಪನ್ನು
Vishwanath S
Updated On : 29 Jun 2020, 1:45 pm

ಕೊರೋನಾ ಸಂಕಷ್ಟದಿಂದಾಗಿ ಹಲವು ಬಾಲಿವುಡ್ ನಟ-ನಟಿಯರು ಮನೆಯಲ್ಲೇ ಉಳಿದುಕೊಂಡಿದ್ದಾರೆ. ಈ ಮಧ್ಯೆ ಬಾಲಿವುಡ್ ನಟಿ ತಾಪ್ಸಿ ಪನ್ನು ಒಂದು ತಿಂಗಳ ಕರೆಂಟ್ ಬಿಲ್ ನೋಡಿ ಶಾಕ್ ಆಗಿದ್ದಾರೆ. 

ತಾಪ್ಸಿ ಮನೆಯ ಕರೆಂಟ್ ಬಿಲ್ ಒಂದು ತಿಂಗಳಿಗೆ ಬರೋಬ್ಬರಿ 36 ಸಾವಿರ ರುಪಾಯಿ ಬಂದಿದ್ದು ಇದನ್ನು ನೋಡಿ ಪನ್ನು ಗಾಬರಿ ವ್ಯಕ್ತಪಡಿಸಿದ್ದಾರೆ. 

ಇನ್ನು ತಾಪ್ಸಿ ಪನ್ನು ಅವರ ಇನ್ನೊಂದು ಮನೆಯ ಕರೆಂಟ್ ಬಿಲ್ ಸಹ ಜಾಸ್ತಿ ಬಂದಿದೆ. ಸದ್ಯಕ್ಕೆ ಅಲ್ಲಿ ಯಾರೂ ವಾಸಿಸುತ್ತಿಲ್ಲ. ವಾರಕ್ಕೊಮ್ಮೆ ನಾನೇ ಅಲ್ಲಿಗೆ ಹೋಗಿ ಕ್ಲೀನ್ ಮಾಡಿ ಬರುತ್ತೇನೆ. ಅಷ್ಟಕ್ಕೆ ಇಷ್ಟು ಬಿಲ್ ಬಂದಿದೆ. ಇನ್ನು ನನಗೆ ಗೊತ್ತಿಲ್ಲ ಅಲ್ಲಿ ಯಾರಾದರೂ ವಾಸಿಸುತ್ತಿದ್ದಾರಾ ಎಂಬ ಅನುಮಾನ ಮೂಡುತ್ತಿದೆ ಎಂದು ನಗೆಯಾಡಿದ್ದಾರೆ. 

Advertisement

Advertisement

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement