ಚಿತ್ರದ ಪೋಸ್ಟರ್ 
ಬಾಲಿವುಡ್

'ಲಕ್ಷ್ಮಿ ಬಾಂಬ್' ಚಿತ್ರದ ಅಭಿನಯ ವಿಶಿಷ್ಠ: ನಟ ಅಕ್ಷಯ್ ಕುಮಾರ್

ಲಕ್ಷ್ಮಿ ಬಾಂಬ್ ಚಿತ್ರದಲ್ಲಿ ಕೆಲಸ ಮಾಡುವ ಮೂಲಕ ತಮಗೆ ಹೊಸ ಅನುಭವ ಸಿಕ್ಕಿದೆ ಎಂದು ಅಕ್ಷಯ್ ಕುಮಾರ್ ಹೇಳಿದ್ದಾರೆ.

ಲಕ್ಷ್ಮಿ ಬಾಂಬ್ ಚಿತ್ರದಲ್ಲಿ ಕೆಲಸ ಮಾಡುವ ಮೂಲಕ ತಮಗೆ ಹೊಸ ಅನುಭವ ಸಿಕ್ಕಿದೆ ಎಂದು ಅಕ್ಷಯ್ ಕುಮಾರ್ ಹೇಳಿದ್ದಾರೆ.

ರಾಘವ್ ಲಾರೆನ್ಸ್ ನಿರ್ದೇಶನದ 'ಲಕ್ಷ್ಮಿ ಬಾಂಬ್' ಚಿತ್ರದಲ್ಲಿ ಅಕ್ಷಯ್ ಕುಮಾರ್ ಮಂಗಳಮುಖಿ ಪಾತ್ರದಲ್ಲಿ ನಟಿಸಲಿದ್ದಾರೆ. ಕಿಯಾರಾ ಅಡ್ವಾಣಿ 'ಲಕ್ಷ್ಮಿ ಬಾಂಬ್' ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. 'ಲಕ್ಷ್ಮಿ ಬಾಂಬ್' ಆರಂಭದಲ್ಲಿ ಮೇ 22 ರಂದು ಬಿಡುಗಡೆಯಾಗಬೇಕಿತ್ತು.

ಕೊರೊನಾ ವೈರಸ್ ಸಾಂಕ್ರಾಮಿಕದಿಂದಾಗಿ, ಈ ಚಿತ್ರವು ಈಗ ಒಟಿಟಿ ವೇದಿಕೆಯಲ್ಲಿ ಬಿಡುಗಡೆಯಾಗಲಿದೆ. ಅಕ್ಷಯ್ ಅವರು ಚಿತ್ರದಲ್ಲಿ ಕೆಲಸ ಮಾಡಿದ ಅನುಭವವನ್ನು ಹಂಚಿಕೊಂಡರು, ಚಿತ್ರದ ಎರಡು ಪೋಸ್ಟರ್‌ಗಳನ್ನು ಹಂಚಿಕೊಂಡಿದ್ದಾರೆ.

'ಲಕ್ಷ್ಮಿ ಬಾಂಬ್' ಪಾತ್ರದಲ್ಲಿ ಹೊಸತನ ಇತ್ತು. ಚಿತ್ರದ ಯಶಸ್ಸಿಗಾಗಿ ಬೆವರು ಹರಿಸಿದ್ದೇನೆ. ನಾನು ಹಲವಾರು ರಿಟೇಕ್‌ಗಳನ್ನು ಸಹ ತೆಗೆದುಕೊಂಡಿದ್ದೇನೆ. ರಾಘವ್ ಚಿತ್ರದೊಂದಿಗೆ ಹೊಸದನ್ನು ಅನುಭವಿಸಲು ಅವಕಾಶ ನೀಡಿದರು. ಅವರು ನನ್ನೊಳಗಿದ್ದ ವಿಶಿಷ್ಠ ನಟನನ್ನು ಗುರುತಿಸಿದರು. ಅದು ನನಗೆ ತಿಳಿದಿರಲಿಲ್ಲ.

ಈ ಪಾತ್ರವು ನಾನು ಚಿತ್ರಿಸಿದ ಎಲ್ಲ ಪಾತ್ರಗಳಿಗಿಂತ ಭಿನ್ನವಾಗಿದೆ ಎಂದ ಅಕ್ಷಯ್. “ಲಿಂಗ ಸಮಾನತೆಯ ಬಗ್ಗೆ ನನ್ನ ಆಲೋಚನೆಗಳನ್ನು ಬಲಪಡಿಸಲು ಈ ಚಿತ್ರ ನನಗೆ ಕಲಿಸಿದೆ. ಜೀವನದಲ್ಲಿ ನೀವು ಏನು ಬೇಕಾದರೂ ಆಗಿರಿ, ಆದರೆ ಅಜ್ಞಾನಿಯಾಗಬೇಡಿ” ಎಂದಿದ್ದಾರೆ.
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT