ಬಾಲಿವುಡ್

ಲಾಕ್ ಡೌನ್ ಮಧ್ಯೆ ಶೂಟಿಂಗ್ ಆರಂಭಿಸಿದ ಅಕ್ಷಯ್ ಕುಮಾರ್

Lingaraj Badiger

ಮುಂಬೈ: ಬಾಲಿವುಡ್ ನಟ ಅಕ್ಷಯ್ ಕುಮಾರ್ ಲಾಕ್ ಡೌನ್ ಮಧ್ಯೆ ಶೂಟಿಂಗ್ ಆರಂಭಿಸಿದ್ದಾರೆ.

ಕೊರೋನಾ ವೈರಸ್ ಲಾಕ್‌ಡೌನ್ ಪರಿಣಾಮ ಚಿತ್ರೀಕರಣ ಸಂಪೂರ್ಣ ಸ್ಥಗಿತಗೊಂಡಿದೆ. ಲಾಕ್‌ಡೌನ್ 4.0 ರ ನಂತರ ರೈಲು ನಿಧಾನವಾಗಿ ಮರಳುವ ನಿರೀಕ್ಷೆಯಿದೆ. ಹೀಗಾಗಿ ನಿರ್ದೇಶಕ ಆರ್ ಬಾಲ್ಕಿ ಅವರೊಂದಿಗೆ ಅಕ್ಷಯ್ ಕುಮಾರ್ ಮುಂಬೈನ ಕಮಲಿಸ್ತಾನ್ ಸ್ಟುಡಿಯೋದ ಸೆಟ್‌ಗಳಲ್ಲಿ ಕಾಣಿಸಿಕೊಂಡರು. 

ಲಾಕ್ ಡೌನ್ ನಂತರದ ಜವಾಬ್ದಾರಿಗಳ ಬಗ್ಗೆ ಆರೋಗ್ಯ ಸಚಿವಾಲಯಕ್ಕಾಗಿ ಅಕ್ಷಯ್ ಮತ್ತು ಆರ್ ಬಾಲ್ಕಿ ಕೈ ಜೋಡಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸಮಯದಲ್ಲಿ, ತಂಡವು ಭದ್ರತೆಯ ಬಗ್ಗೆ ಸಂಪೂರ್ಣ ಕಾಳಜಿ ವಹಿಸಿತು ಮತ್ತು ಎಲ್ಲರೂ ಮಾಸ್ಕ್ ಗಳನ್ನು ಧರಿಸಿದ್ದು, ಶೂಟಿಂಗ್‌ನಲ್ಲಿ ಕನಿಷ್ಠ ಸಿಬ್ಬಂದಿ ಭಾಗವಹಿಸಿದ್ದರು. 

"ಲಾಕ್ ಡೌನ್ ನಂತರ ನಮ್ಮೆಲ್ಲರ ಜವಾಬ್ದಾರಿಗಳು ಯಾವುವು, ನಾವು ಮತ್ತೆ ಕೆಲಸವನ್ನು ಪ್ರಾರಂಭಿಸಬೇಕು, ಆದರೆ ಅದರೊಂದಿಗೆ ಸುರಕ್ಷತೆಯ ಬಗ್ಗೆಯೂ ಕಾಳಜಿ ವಹಿಸಬೇಕು. ಸಾಮಾಜಿಕ ಅಂತರ, ಹೊರಾಂಗಣ ಸೆಟ್‌ಗಳನ್ನು ಸ್ವಚ್ಛಗೊಳಿಸುವುದು, ಸೋಂಕು ತಡೆಗಟ್ಟಲು ಮುಂಜಾಗರುಕತೆ ವಹಿಸುವುದು ಸೇರಿದಂತೆ ಹಲವು ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಈ ಸಂಬಂಧ ನಾವು ಪೊಲೀಸರಿಂದ ಅನುಮತಿ ಸಹ ಪಡೆದಿದ್ದೆವೆ" ಎಂದು ಆರ್. ಬಾಲ್ಕಿ ತಿಳಿಸಿದ್ದಾರೆ.

SCROLL FOR NEXT