ಬಾಲಿವುಡ್

ಲೈಂಗಿಕ ದೌರ್ಜನ್ಯ ಪ್ರಕರಣ: ಹೇಳಿಕೆ ದಾಖಲಿಸಿದ ನಿರ್ದೇಶಕ ಅನುರಾಗ್ ಕಶ್ಯಪ್

Vishwanath S

ಮುಂಬೈ: ನಟಿ ಪಾಯಲ್ ಘೋಷ್ ಅವರು ದಾಖಲಿಸಿದ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಚಲನಚಿತ್ರ ನಿರ್ಮಾಪಕ ಅನುರಾಗ್ ಕಶ್ಯಪ್ ಗುರುವಾರ ಇಲ್ಲಿನ ವರ್ಸೋವಾ ಪೊಲೀಸ್ ಠಾಣೆಗೆ ಹಾಜರಾಗಿ ಹೇಳಿಕೆ ನೀಡಿದ್ದಾರೆ.

48 ವರ್ಷದ ಕಶ್ಯಪ್ ಅವರನ್ನು ಮಹಿಳಾ ಪೋಲೀಸ್ ಸೇರಿದಂತೆ ಪೊಲೀಸ್ ಅಧಿಕಾರಿಗಳ ತಂಡ ಪ್ರಶ್ನಿಸಿದೆ. ಆದರೆ  'ಬ್ಲ್ಯಾಕ್ ಫ್ರೈಡೇ' ನಿರ್ದೇಶಕ ಅನುರಾಗ್ ಕಶ್ಯಪ್ ತಮ್ಮ ವಿರುದ್ಧದ ಆರೋಪಗಳನ್ನು ನಿರಾಕರಿಸಿದ್ದಾರೆ.

ಹೇಳಿಕೆಯನ್ನು ಪ್ರಶ್ನಿಸುವ ಮತ್ತು ದಾಖಲಿಸುವ ಪ್ರಕ್ರಿಯೆ ನಡೆಯುತ್ತಿದೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.

2013ರಲ್ಲಿ ಲೈಂಗಿಕ ಹಲ್ಲೆ ಮತ್ತು ಅತ್ಯಾಚಾರವೆಸಗಿದ್ದರು ಎಂದು ಬಾಲಿವುಡ್ ನಟಿ ಪಾಯಲ್ ಘೋಷ್ ಆರೋಪಿಸಿದ್ದರು.

SCROLL FOR NEXT