ಬಾಯ್ ಫ್ರೆಂಡ್ ಜೊತೆ ಮದುವೆಯಾದ ಬಾಲಿವುಡ್ ಹಾಟ್ ನಟಿ ಪೂನಂ ಪಾಂಡೆ!
ಬಾಲಿವುಡ್ ಬಿಚ್ಚಮ್ಮ ಖ್ಯಾತಿಯ ಹಾಟ್ ಬೆಡಗಿ ಪೂನಂ ಪಾಂಡೆ ಮದುವೆಯಾದರಂತೆ.ಇತ್ತೀಚಿಗೆ ತನ್ನ ಬಾಯ್ ಫ್ರೆಂಡ್ ಶ್ಯಾಮ್ ಬಾಂಬೆ ಅವರೊಂದಿಗೆ ಮದುವೆಯಾಗಿರುವ ಕೆಲ ಫೋಟೋಗಳನ್ನು ಇನ್ಸಾಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.
ಮುಂಬೈ: ಬಾಲಿವುಡ್ ಬಿಚ್ಚಮ್ಮ ಖ್ಯಾತಿಯ ಹಾಟ್ ಬೆಡಗಿ ಪೂನಂ ಪಾಂಡೆ ಮದುವೆಯಾದರಂತೆ.ಇತ್ತೀಚಿಗೆ ತನ್ನ ಬಾಯ್ ಫ್ರೆಂಡ್ ಶ್ಯಾಮ್ ಬಾಂಬೆ ಅವರೊಂದಿಗೆ ಮದುವೆಯಾಗಿರುವ ಕೆಲ ಫೋಟೋಗಳನ್ನು ಇನ್ಸಾಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.
ಮದುವೆಯಲ್ಲಿ ಸಾಂಪ್ರಾದಾಯಿಕ ಹೂವಿನ ಕಸೂತಿ ಹೊಂದಿರುವ ಲೆಹಂಗಾವನ್ನು ಧರಿಸಿ ಪೂನಂ ಪಾಂಡೆ ಮಿಂಚಿದ್ದರೆ, ಶ್ಯಾಮ್ ಬಣ್ಣದಿಂದ ಸಂಯೋಜಿತ ಶೇರ್ವಾನಿ ಧರಿಸಿದ್ದಾರೆ.
ಏಳು ಏಳು ಜನ್ಮ ದಲ್ಲಿಯೂ ನಿನ್ನೊಂದಿಗೆ ಇರಲು ಎದುರು ನೋಡುತ್ತಿರುವುದಾಗಿ ಪೂನಾಂ ಪಾಂಡೆ ಫೋಟೋಗಳ ಕೆಳಗೆ ಬರೆದಿದ್ದಾರೆ.
ಶ್ಯಾಮ್ ಬಾಂಬೆ ಕೂಡಾ ಫೋಟೋಗಳನ್ನು ಶೇರ್ ಮಾಡಿದ್ದಾರೆ.ಈ ದಂಪತಿ ಜುಲೈ ತಿಂಗಳಲ್ಲಿ ಎಂಗೇಜ್ ಮೆಂಟ್ ಮಾಡಿಕೊಂಡಿದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.