ಗಗನಯಾನಿ ರಾಕೇಶ್ ಶರ್ಮಾ 
ಬಾಲಿವುಡ್

ಭಾರತದ ಮೊದಲ ಗಗನಯಾನಿ ರಾಕೇಶ್ ಶರ್ಮಾ ಬಯೊಪಿಕ್ ಸಿನಿಮಾ: ಸಾರೆ ಜಹಾಂಸೆ ಅಚ್ಚಾ ನಿರ್ಮಾಣಕ್ಕೆ ಚಾಲನೆ 

ರಾಕೇಶ್ ಶರ್ಮಾ ಪಾತ್ರದಲ್ಲಿ ಆಮೀರ್ ಖಾನ್ ಮತ್ತು ಶಾರುಖ್ ಖಾನ್ ನಟಿಸುವರೆಂದು ಹೇಳಲಾಗಿತ್ತು. ಆದರೆ ಅವರಿಬ್ಬರ ಹೆಸರುಗಳು ನಂತರ ಡ್ರಾಪ್ ಆಗಿತ್ತು.

ಮುಂಬೈ: ಭಾರತದ ಮೊದಲ ಗಗನಯಾನಿ ರಾಕೇಶ್ ಶರ್ಮಾ ಜೀವನಾಧಾರಿತ ಸಿನಿಮಾ 'ಸಾರೆ ಜಹಾಂಸೆ ಅಚ್ಚಾ' ಖಂಡಿತವಾಗಿ ನಿರ್ಮಾಣಗೊಳ್ಳಲಿದೆ ಎಂದು ದೇಶದ ಪ್ರಖ್ಯಾತ ನಿರ್ಮಾಪಕ ಸಿದ್ಧಾರ್ಥ್ ರಾಯ್ ಕಪೂರ್ ಹೇಳಿದ್ದಾರೆ. ಈ ಸಿನಿಮಾ ತಮ್ಮ ಜೀವನಕ್ಕೆ ತುಂಬಝತ್ತಿರವಾದುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. 

ಈ ಸಿನಿಮಾದ ಚಿತ್ರಕಥೆಯನ್ನು ಅಂಜುಂ ರಾಜಬಲಿ ರಚಿಸಲಿದ್ದು, ನಿರ್ದೇಶನದ ಜವಾಬ್ದಾರಿ ಮಹೇಶ್ ಮಥಾಯಿ ಅವರ ಹೆಗಲೇರಿದೆ.  ಸಿದ್ಧಾರ್ಥ್ ರಾಯ್ ಕಪೂರ್ ಅವರ ನೂತನ ವೆಬ್ ಸಿರೀಸ್ ಅರಣ್ಯಕ್ ಗೆ ನೆಟ್ ಫ್ಲಿಕ್ಸ್ ನಲ್ಲಿ ವ್ಯಾಪಕ ಮನ್ನಣೆ ದೊರೆಯುತ್ತಿದೆ. 

ಇದೀಗ ಹಲವು ವರ್ಷಗಳ ಹಿಂದೆಯೇ ಶುರುವಾಗಬೇಕಿದ್ದ ರಾಕೇಶ್ ಶರ್ಮಾ ಬಯೋಪಿಕ್ ಸಿನಿಮಾಗೆ ಮತ್ತೆ ಮರುಜೀವ ದೊರೆತಿದೆ. ರಾಕೇಶ್ ಶರ್ಮಾ 1984ರಲ್ಲಿ ಗಗನಯಾನ ಮಾಡಿದ್ದರು. ರಾಕೇಶ್ ಶರ್ಮಾ ಪಾತ್ರದಲ್ಲಿ ಆಮೀರ್ ಖಾನ್ ಮತ್ತು ಶಾರುಖ್ ಖಾನ್ ನಟಿಸುವರೆಂದು ಹೇಳಲಾಗಿತ್ತು. ಆದರೆ ಅವರಿಬ್ಬರ ಹೆಸರುಗಳು ನಂತರ ಡ್ರಾಪ್ ಆಗಿತ್ತು.

ಇದೀಗ ಸಾರೆ ಜಹಾಂಸೆ ಅಚ್ಚಾ ನಾಯಕ ಪಾತ್ರಕ್ಕೆ ರಣ್ ಬೀರ್ ಕಪೂರ್, ವಿಕ್ಕಿ ಕೌಶಲ್ ಮತ್ತು ಫರ್ಹಾನ್ ಅಖ್ತರ್ ಹೆಸರು ಕೇಳಿಬರುತ್ತಿವೆ. ಈ ಬಗ್ಗೆ ಅಧಿಕೃತ ಮಾಹಿತಿಯನ್ನು ಸಿನಿಮಾ ತಂಡ ಬಿಟ್ಟುಕೊಟ್ಟಿಲ್ಲ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೈಕಮಾಂಡ್ ಅದೇಶ ಪಾಲನೆ: ನಾಳೆ ಬೆಳಗ್ಗೆ 10.30ಕ್ಕೆ ರಾಜ್ಯಪಾಲರ ಭೇಟಿಗೆ ಸಮಯ ಕೇಳಿದ ಸಿಎಂ ಸಿದ್ದರಾಮಯ್ಯ-Video

SIR ಪ್ರಕ್ರಿಯೆಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್; ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಅಗತ್ಯ ಎಂದ ನ್ಯಾಯಪೀಠ..!

ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಹೆಸರು ಬಹುತೇಕ ಫೈನಲ್? ಕಾಂಗ್ರೆಸ್‌ನಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆ..!

ದೆಹಲಿ ಸಭೆ ಬಳಿಕ ಬೆಂಗಳೂರಿನಲ್ಲಿ ಶಕ್ತಿ ಪ್ರದರ್ಶನಕ್ಕೆ ಸಿದ್ದರಾಮಯ್ಯ ಸಜ್ಜು: ಬೆಂಬಲಿಗರ ಜೊತೆ ಮಹತ್ವದ ಸಭೆ, ಹೆಚ್ಚಿದ ಕುತೂಹಲ

ಹೈಕಮಾಂಡ್ ಸೂಚನೆಗೆ ಮಣಿದ ಸಿದ್ದರಾಮಯ್ಯ: ಮುಖ್ಯಮಂತ್ರಿ ಸ್ಥಾನ ತ್ಯಜಿಸಲು ಸಮ್ಮತಿ; ಕಾಂಗ್ರೆಸ್ ಪವರ್ ಶಿಫ್ಟ್‌ಗೆ ಕೌಂಟ್‌ಡೌನ್ ಶುರು, ಡಿಕೆಶಿಗೆ ಸಿಎಂ ಪಟ್ಟ..?

SCROLL FOR NEXT