ಮ್ಯಾಟ್ರಿಕ್ಸ್ ಹಾಲಿವುಡ್ ಸಿನಿಮಾದಲ್ಲಿ ಅಲ್ಪ ಅವಧಿಯ ಪಾತ್ರಕ್ಕೆ ಟ್ರೋಲ್: ಕಿಡಿ ಕಾರಿದ ಪ್ರಿಯಾಂಕ ಚೋಪ್ರಾ

ಜನಪ್ರಿಯ ಮ್ಯಾಟ್ರಿಕ್ಸ್ ಸರಣಿಯ ನಾಲ್ಕನೇ ಅವತರಣಿಕೆ 'ಮ್ಯಾಟ್ರಿಕ್ಸ್- ರಿಸರೆಕ್ಷನ್ಸ್' ಸಿನಿಮಾ ಇತ್ತೀಚಿಗಷ್ಟೆ ವಿಶ್ವಾದ್ಯಂತ ತೆರೆ ಕಂಡಿತ್ತು.
ಪ್ರಿಯಾಂಕಾ ಚೋಪ್ರಾ
ಪ್ರಿಯಾಂಕಾ ಚೋಪ್ರಾ
Updated on

ಹಾಲಿವುಡ್: ಜನಪ್ರಿಯ ಮ್ಯಾಟ್ರಿಕ್ಸ್ ಸರಣಿಯ ನಾಲ್ಕನೇ ಅವತರಣಿಕೆ 'ಮ್ಯಾಟ್ರಿಕ್ಸ್- ರಿಸರೆಕ್ಷನ್ಸ್' ಸಿನಿಮಾ ಇತ್ತೀಚಿಗಷ್ಟೆ ವಿಶ್ವಾದ್ಯಂತ ತೆರೆ ಕಂಡಿತ್ತು. ಆ ಸಿನಿಮಾದಲ್ಲಿ ಪ್ರಿಯಾಂಕಾ ಚೋಪ್ರಾ ಅವರು ನಟಿಸಿದ್ದರು.

ಆ ಸಿನಿಮಾದಲ್ಲಿ ಪ್ರಿಯಾಂಕಾ ಚೋಪ್ರಾ ಅವರು ಹೀಗೆ ಬಂದು ಹಾಗೆ ಹೋಗುವ ಪಾತ್ರದಲ್ಲಿ ನಟಿಸಿದ್ದಾರೆ ಎಂದು ಇಂಟರ್ನೆಟ್ ನಲ್ಲಿ ಟ್ರೋಲಿಂಗ್ ಗೆ ಒಳಗಾಗಿದ್ದರು. 

ಈ ಬಗ್ಗೆ ಕಿಡಿಕಾರಿರುವ ಪ್ರಿಯಾಂಕಾ ಚೋಪ್ರಾ ತಾವು ಪಾತ್ರದ ಅವಧಿಯ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ತಮಗೆ ಪಾತ್ರದ ತೂಕವಷ್ಟೆ ಮುಖ್ಯ ಎಂದು ಪ್ರತ್ಯುತ್ತರ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com