ಬಾಲಿವುಡ್

ತಾರಕ್ ಮೆಹ್ತಾ ನಟಿ ಮುನ್ಮುನ್ ದತ್ತಾ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲು

Srinivas Rao BV

ಮುಂಬೈ: "ತಾರಕ್ ಮೆಹ್ತಾ" ನಟಿ ಮುನ್ಮುನ್ ದತ್ತಾ ವಿರುದ್ಧ ಜಾತಿ ನಿಂದನೆ ಪ್ರಕಣ ದಾಖಲಾಗಿದೆ.ಮುಂಬೈ ಪೊಲೀಸರು ಅಧಿಕಾರಿಗಳು, ಸಮುದಾಯದ ವಿರುದ್ಧ ಅವಹೇಳನಕಾರಿ ಪದ ಬಳಕೆ ಮಾಡಿದ್ದಕ್ಕಾಗಿ ಜಾತಿ ನಿಂದನೆ ಪ್ರಕರಣ ದಾಖಲಿಸಲಾಗಿದೆ.

"ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ"ದ ನಟಿ ವಿಡಿಯೋ ಕ್ಲಿಪ್ ನಲ್ಲಿ ಮೇಕ್ ಅಪ್ ಕುರಿತು ಮೇ.೦9 ರಂದು ಮಾತನಾಡುತ್ತಾ ನಿರ್ದಿಷ್ಟ ಸಮುದಾಯದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದರು.

ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗತೊಡಗಿತ್ತು. ಮೇ.26 ರಂದು ನರೇಶ್ ಬೋಹಿತ್ (40) ನೀಡಿದ್ದ ದೂರಿನ ಆಧಾರದಲ್ಲಿ ದತ್ತಾ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.

ನಟಿಯ ವಿರುದ್ಧ ಐಪಿಸಿ 295 (A) ರ ಆಧಾರದಲ್ಲಿ ಹಾಗೂ ಎಸ್ ಸಿ/ಎಸ್ ಟಿ ವಿರುದ್ಧದ ದೌರ್ಜನ್ಯ ತಡೆಗಟ್ಟುವಿಕೆ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ ಆರೋಪದ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಹೇಳಿಕೆ ವಿರುದ್ಧ ತೀವ್ರ ಟೀಕೆ ವ್ಯಕ್ತವಾಗತೊಡಗುತ್ತಿದ್ದಂತೆಯೇ, ನಟಿ ಕ್ಷಮೆ ಕೋರಿದ್ದರು.

SCROLL FOR NEXT