ಕರೀನಾ ಕಪೂರ್ ಖಾನ್-ಸೈಫ್ ಅಲಿ ಖಾನ್ 
ಬಾಲಿವುಡ್

'ವಿಶ್ವದ ಅತ್ಯಂತ ಸುಂದರ ವ್ಯಕ್ತಿ' ನನ್ನ ಗಂಡ: ಕರೀನಾ ಕಪೂರ್

ಬಾಲಿವುಡ್​​ ನಟ ಸೈಫ್​ ಅಲಿ ಖಾನ್ ಮತ್ತು ಕರೀನಾ ಕಪೂರ್ ಖಾನ್ ಅವರು ಶನಿವಾರ 9ನೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ. ಈ ಹಿನ್ನೆಲೆ ಕರೀನಾ ಕಪೂರ್ ಅವರು, ಸೈಫ್ ಅಲಿ ಖಾನ್ ಜೊತೆ ಇರುವ...

ಮುಂಬೈ: ಬಾಲಿವುಡ್​​ ನಟ ಸೈಫ್​ ಅಲಿ ಖಾನ್ ಮತ್ತು ಕರೀನಾ ಕಪೂರ್ ಖಾನ್ ಅವರು ಶನಿವಾರ 9ನೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ. ಈ ಹಿನ್ನೆಲೆ ಕರೀನಾ ಕಪೂರ್ ಅವರು, ಸೈಫ್ ಅಲಿ ಖಾನ್ ಜೊತೆ ಇರುವ ಫೋಟೋವೊಂದನ್ನು ಇನ್​​ಸ್ಟಾಗ್ರಾಮ್​​ನಲ್ಲಿ ಹಂಚಿಕೊಂಡಿದ್ದಾರೆ.

ಈ ಫೋಟೋವನ್ನು ಪೋಸ್ಟ್​ ಮಾಡುವುದರ ಜೊತೆಗೆ ಒಂದಾನೊಂದು ಕಾಲದಲ್ಲಿ ಗ್ರೀಸ್​​​ನಲ್ಲಿ ಒಂದು ಬೌಲ್​ ಸೂಪ್​ ಜೊತೆ ನಾವು ಇದ್ದೇವು. ಆ ಸಮಯ ನಮ್ಮ ಜೀವನವನ್ನೇ ಬದಲಿಸಿಬಿಟ್ಟಿತು. ವಿಶ್ವದ ಅತ್ಯಂತ ಸುಂದರ ವ್ಯಕ್ತಿಗೆ ಇಂದು ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು ಎಂದು ಕರೀನಾ ಬರೆದಿದ್ದಾರೆ.

ಸೈಫ್​​ ಹುಟ್ಟುಹಬ್ಬವನ್ನು ಆಚರಿಸಲು ಕರೀನಾ ಮತ್ತು ಸೈಫ್ ಮಾಲ್ಡೀವ್ಸ್ ಗೆ ಹೋಗಿದ್ದರು. ಇಂದು ತಮ್ಮ ವಿವಾಹ ವಾರ್ಷಿಕೋತ್ಸವದಂದು ಕರೀನಾ ಗ್ರೀಸ್ ಪ್ರವಾಸವನ್ನು ನೆನಪಿಸಿಕೊಂಡಿದ್ದಾರೆ.

ಕರಿಷ್ಮಾ ಕಪೂರ್ ಮತ್ತು ಪ್ರಿಯಾಂಕಾ ಚೋಪ್ರಾ ಈ ಪೋಸ್ಟ್​​ಗೆ ಪ್ರತಿಕ್ರಿಯಿಸಿದ್ದಾರೆ. ನೀವು ಎಂದೆಂದಿಗೂ ನನ್ನ ನೆಚ್ಚಿನ ದಂಪತಿಗಳು ಎಂದು ಕರಿಷ್ಮಾ ಹಾರ್ಟ್​ ಎಮೋಜಿಗಳೊಂದಿಗೆ ಬರೆದಿದ್ದಾರೆ. ನಿಮಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು ಮತ್ತು ದೇವರ ಆಶೀರ್ವಾದ ನಿಮ್ಮ ಮೇಲಿರಲಿ ಎಂದು ಪ್ರಿಯಾಂಕಾ ಚೋಪ್ರಾ ಬರೆದಿದ್ದಾರೆ.

ಕರೀನಾ ಕಪೂರ್ ಅವರು ಸೈಫ್ ಅಲಿ ಖಾನ್ ಅವರನ್ನು ಅಕ್ಟೋಬರ್ 16, 2012 ರಂದು ವಿವಾಹವಾದರು. ಅವರು ತಮ್ಮ ಮೊದಲ ಮಗು ತೈಮೂರ್​​ಗೆ ಡಿಸೆಂಬರ್ 20, 2016 ರಂದು ಜನ್ಮ ನೀಡಿದರು. ಅವರ ಎರಡನೇ ಮಗ ಜೆಹ್ ಈ ವರ್ಷ ಫೆಬ್ರವರಿ 21 ರಂದು ಜನಿಸಿದ್ದಾನೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ದೆಹಲಿ ಸಭೆ ಬಳಿಕ ಬೆಂಗಳೂರಿನಲ್ಲಿ ಶಕ್ತಿ ಪ್ರದರ್ಶನಕ್ಕೆ ಸಿದ್ದರಾಮಯ್ಯ ಸಜ್ಜು: ಬೆಂಬಲಿಗರ ಜೊತೆ ಮಹತ್ವದ ಸಭೆ, ಹೆಚ್ಚಿದ ಕುತೂಹಲ

ಹೈಕಮಾಂಡ್ ಸೂಚನೆಗೆ ಮಣಿದ ಸಿದ್ದರಾಮಯ್ಯ: ಮುಖ್ಯಮಂತ್ರಿ ಸ್ಥಾನ ತ್ಯಜಿಸಲು ಸಮ್ಮತಿ; ಕಾಂಗ್ರೆಸ್ ಪವರ್ ಶಿಫ್ಟ್‌ಗೆ ಕೌಂಟ್‌ಡೌನ್ ಶುರು, ಡಿಕೆಶಿಗೆ ಸಿಎಂ ಪಟ್ಟ..?

ಬೆಂಗಳೂರಿಗೂ ಎಂಟ್ರಿ ಕೊಟ್ಟಿತೇ ಮಹಾಮಾರಿ ಎಬೋಲಾ? ಆಫ್ರಿಕಾದಿಂದ ಬಂದ ಮಹಿಳೆಯಲ್ಲಿ ಸೋಂಕಿನ ಲಕ್ಷಣ ಪತ್ತೆ, ಆರೋಗ್ಯ ಇಲಾಖೆ ಹೈ ಅಲರ್ಟ್

CMRL ಹಣ ಅಕ್ರಮ ವರ್ಗಾವಣೆ ಪ್ರಕರಣ: ಕೇರಳ ಮಾಜಿ ಸಿಎಂ ಪಿಣರಾಯಿ ವಿಜಯನ್ ನಿವಾಸದ ಮೇಲೆ ED ದಾಳಿ..!

IPL 2026: ಗುಜರಾತ್ ವಿರುದ್ಧ ಭರ್ಜರಿ ಗೆಲುವು; ಸತತ 2ನೇ ಬಾರಿ ಫೈನಲ್ಸ್ ಪ್ರವೇಶಿಸಿದ RCB

SCROLL FOR NEXT