ನಟಿ ಶೆರ್ಲಿನ್ ಚೋಪ್ರಾ ಮತ್ತು ರಾಜ್ ಕುಂದ್ರಾ 
ಬಾಲಿವುಡ್

ನಟಿ ಶೆರ್ಲಿನ್ ಚೋಪ್ರಾಗೆ 50 ಕೋಟಿ ರೂ. ಮಾನನಷ್ಟ ನೋಟಿಸ್ ಕಳುಹಿಸಿದ ಶಿಲ್ಪಾ ಶೆಟ್ಟಿ, ರಾಜ್ ಕುಂದ್ರಾ

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಮತ್ತು ಅವರ ಉದ್ಯಮಿ-ಪತಿ ರಾಜ್ ಕುಂದ್ರಾ ಅವರು ಮಂಗಳವಾರ ನಟಿ ಶೆರ್ಲಿನ್ ಚೋಪ್ರಾ ಅವರಿಗೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ.

ಮುಂಬೈ: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಮತ್ತು ಅವರ ಉದ್ಯಮಿ-ಪತಿ ರಾಜ್ ಕುಂದ್ರಾ ಅವರು ಮಂಗಳವಾರ ನಟಿ ಶೆರ್ಲಿನ್ ಚೋಪ್ರಾ ಅವರಿಗೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ.

ತಮ್ಮ ವಿರುದ್ಧ "ಸುಳ್ಳು ಮತ್ತು ಆಧಾರರಹಿತ" ಆರೋಪಗಳನ್ನು ಮಾಡಿ ತಮ್ಮ ಪ್ರತಿಷ್ಠೆಗೆ ಧಕ್ಕೆ ಉಂಟು ಮಾಡಿದ್ದಕ್ಕಾಗಿ ಕ್ಷಮೆ ಕೇಳಬೇಕು ಮತ್ತು 50 ಕೋಟಿ ರೂಪಾಯಿ ಮಾನಹಾನಿ ಪರಿಹಾರ ಕೋರಿದ್ದಾರೆ.

ತಮ್ಮ ವಕೀಲ ಪ್ರಶಾಂತ್ ಪಾಟೀಲ್ ಮೂಲಕ ಕಳುಹಿಸಿದ ಲೀಗಲ್ ನೋಟಿಸ್ ನಲ್ಲಿ, ಚೋಪ್ರಾ ಅವರು ಏಳು ದಿನಗಳ ಒಳಗೆ ಪ್ರಮುಖ ಪತ್ರಿಕೆಗಳಲ್ಲಿ ಮತ್ತು ಡಿಜಿಟಲ್ ಮಾಧ್ಯಮ ವೇದಿಕೆಗಳಲ್ಲಿ ಸಾರ್ವಜನಿಕವಾಗಿ ಬೇಷರತ್ ಕ್ಷಮೆಯಾಚಿಸಬೇಕು ಎಂದು ಕೋರಲಾಗಿದೆ. ಕ್ಷಮೆ ಕೇಳದಿದ್ದರೆ 37 ವರ್ಷದ ನಟಿಯ ವಿರುದ್ಧ ಸಿವಿಲ್ ಮತ್ತು ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದಾಗಿ ಎಚ್ಚರಿಸಿದೆ.

ಶೆರ್ಲಿನ್‌ ಚೋಪ್ರಾ ಹಣ ವಸೂಲಿ ಮಾಡುವ ಉದ್ದೇಶದಿಂದ ಆರೋಪ ಮಾಡಿದ್ದು, ಅವರ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಕ್ಷಮೆ ಕೇಳದಿದ್ದರೆ ಸಿವಿಲ್‌ ಮತ್ತು ಕ್ರಿಮಿನಲ್‌ ಪ್ರಕರಣ ಎದುರಿಸಬೇಕಾಗುತ್ತದೆ ಎಂದು ಶಿಲ್ಪಾ ಶೆಟ್ಟಿ ದಂಪತಿ ಎಚ್ಚರಿಕೆ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

CEC ಜ್ಞಾನೇಶ್ ಕುಮಾರ್ ವಜಾಕ್ಕೆ ಆಗ್ರಹಿಸಿ CJP ಪ್ರತಿಭಟನೆ: ದೆಹಲಿಯಲ್ಲಿ ಬಂಧನ ಪ್ರಕ್ರಿಯೆ ಆರಂಭ, ತೀವ್ರ ಭದ್ರತೆ; Video

ಬಾಕಿ ಸಾಲ ವಸೂಲಿಗೆ 'ಗೃಹಲಕ್ಷ್ಮಿ' ಯೋಜನೆಯ ಹಣ ಕಡಿತಗೊಳಿಸದಂತೆ ಬ್ಯಾಂಕುಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ ಸರ್ಕಾರ!

ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ನಿರಾಳ; ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸುವ ನಿರ್ಧಾರ ರದ್ದು!

'ನ್ಯಾಯಾಂಗ ತನಿಖೆಗೆ ಒಪ್ಪಿಸಿ, ₹1 ಕೋಟಿ ಪರಿಹಾರ ನೀಡಿ': ಹನೂರು ಶೂಟೌಟ್ ಪ್ರಕರಣದ ಮಹಿಮಾ ದಾಸ್ ಸೇರಿ ಸಂತ್ರಸ್ತರ ಆಗ್ರಹ

ದೇವನಹಳ್ಳಿ ತಹಸೀಲ್ದಾರ್ ಕಚೇರಿಗೆ ದಿಢೀರ್ ಭೇಟಿ; ಕಂದಾಯ ಅಧಿಕಾರಿಯನ್ನು ಅಮಾನತುಗೊಳಿಸಿದ DCM ಜಿ ಪರಮೇಶ್ವರ